ವಾಟ್ಸ್ಆ್ಯಪ್ ಇತ್ತೀಚೆಗೆ ಹಲವಾರು ಫೀಚರ್ಸ್ಗಳನ್ನು ಪರಿಚಯಿಸುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾನೆ ಇರುತ್ತದೆ. ಆದರೆ ಮೆಟಾ ಕಳೆದ ಬಾರಿ ಇನ್ನೂ ಕೆಲವೊಂದು ಫೀಚರ್ಗಳು ಇನ್ನೂ ಬಿಡುಗಡೆಯಾಗಲಿದೆ ಎಂದು ಹೇಳಿತ್ತು. ಅದೇ ರೀತಿ ಈ ಫೀಚರ್ಗಳು ಈಗ ಬಿಡುಗಡೆಮಾಡಿದೆ.
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ Android, iOS ಬಳಕೆದಾರರಿಗೆ ಮತ್ತು ವಿಂಡೋಸ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ, ವಾಟ್ಸ್ಆ್ಯಪ್ ವಿಂಡೋಸ್ ಅಪ್ಲಿಕೇಶನ್ನಲ್ಲಿ ಅನೇಕ ಉಪಯುಕ್ತ ಫೀಚರ್ಗಳನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಟೆಕ್ಸ್ಟ್ ಗಾತ್ರವನ್ನು ಬದಲಾವಣೆ ಮಾಡುವ ಫೀಚರ್ ಸಹ ಒಂದು.
ವಾಟ್ಸ್ಆ್ಯಪ್ Beta Windows 2.2324.0.0 ಅಪ್ಲಿಕೇಶನ್ ಅನ್ನು ಸ್ಥಾಪಿಸಿದ ಕೆಲವು ಬಳಕೆದಾರರಿಗೆ ಈ ಹೊಸ ವೈಶಿಷ್ಟ್ಯವು ಲಭ್ಯವಾಗಲಿದೆ. ಅಪ್ಲಿಕೇಶನ್ ಸೆಟ್ಟಿಂಗ್ಗಳಲ್ಲಿ “ವೈಯಕ್ತೀಕರಣ” ಮೆನು ಅಡಿಯಲ್ಲಿ ‘ಪಠ್ಯ ಗಾತ್ರದ ಆಯ್ಕೆಯನ್ನು’ ನೀಡುತ್ತದೆ. ಇದರ ಸಹಾಯದಿಂದ, ನೀವು ವಿಂಡೋಸ್ ಡೆಸ್ಕ್ಟಾಪ್ ಅಪ್ಲಿಕೇಶನ್ನಲ್ಲಿ ಮೆಸೇಜ್ನ ಟೆಕ್ಸ್ಟ್ ಗಾತ್ರವನ್ನು ಬಹಳ ಸರಳವಾಗಿ ಬದಲಾಯಿಸಬಹುದಾಗಿದೆ.
ಸಾಮಾನ್ಯವಾಗಿ ವಿಂಡೋಸ್ವಾಟ್ಸ್ಆ್ಯಪ್ ಅಪ್ಲಿಕೇಶನ್ನಲ್ಲಿ ಮೆಸೇಜ್ಗಳ ಟೆಕ್ಸ್ಟ್ನ ಗಾತ್ರ ಚಿಕ್ಕದಾಗಿದೆ. ಇದರಿಂದಾಗಿ ಬಳಕೆದಾರರು ಸುಲಭವಾಗಿ ಸಂದೇಶಗಳನ್ನು ಓದಲು ಸಾಧ್ಯವಾಗುತ್ತಿಲ್ಲ. ಇದೊಂದು ದೂರು ಕಂಡು ಬರುತ್ತಿತ್ತು ವಾಟ್ಸ್ಆ್ಯಪ್ ಅಪ್ಲಿಕೇಶನ್ ನಲ್ಲಿ ಇದನ್ನು ಸರಿಪಡಿಸಲಾಗಿದೆ.
ವಾಟ್ಸ್ಆ್ಯಪ್ ಟ್ರ್ಯಾಕರ್ WABetaInfo ಇತ್ತೀಚಿನ ವರದಿಯ ಪ್ರಕಾರ, ಒಂದೇ ಕ್ಲಿಕ್ನಲ್ಲಿ ಪಠ್ಯ ಗಾತ್ರವನ್ನು ಹೆಚ್ಚಿಸಲು ಶಾರ್ಟ್ಕಟ್ ಸೌಲಭ್ಯವನ್ನು ಸಹ ನೀಡುತ್ತಿದೆ. ಈ ಮೂಲಕ ಪಠ್ಯ ಗಾತ್ರವನ್ನು CTRL + 0 ಎಂಬ ಸರಳ ಶಾರ್ಟ್ ಕಟ್ ಮೂಲಕ ಇದನ್ನು ಚೇಂಜ್ ಮಾಡಬಹುದಾಗಿದೆ. ಹೊಸ ವೈಶಿಷ್ಟ್ಯವು ಡೆಸ್ಕ್ಟಾಪ್ನಲ್ಲಿ ವಾಟ್ಸ್ಆ್ಯಪ್ ಬಳಸುವಾಗ ಓದಲು ಸುಲಭವಾಗುತ್ತದೆ. ಈ ಅಪ್ಡೇಟ್ನಿಂದ ಕಣ್ಣಿನ ಆಯಾಸವನ್ನು ಸಹ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಮೈಕ್ರೋಸಾಫ್ಟ್ ಸ್ಟೋರ್ನಿಂದ ಇತ್ತೀಚಿನ ವಿಂಡೋಸ್ ವಾಟ್ಸ್ಆ್ಯಪ್ ಬೀಟಾ ಅಪ್ಡೇಟ್ ಅನ್ನು ಡೌನ್ಲೋಡ್ ಮಾಡಿದ ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಈ ಹೊಸ ಫೀಚರ್ ಸಿಗಲಿದೆ. ಈ ಅಪ್ಡೇಟ್ ಇನ್ನೂ ಪ್ರವೇಶಿಸಲು ಸಾಧ್ಯವಾಗದವರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಹೊಸ ವೈಶಿಷ್ಟ್ಯವು ಕೆಲವೇ ವಾರಗಳಲ್ಲಿ ಹೆಚ್ಚಿನ ಜನರಿಗೆ ಲಭ್ಯವಾಗಲಿದೆ ಎಂದು ವಾಟ್ಸ್ಆ್ಯಪ್ ಬೀಟಾ ಮಾಹಿತಿ ಬಹಿರಂಗಪಡಿಸಿದೆ.
ವಾಟ್ಸ್ಆ್ಯಪ್ ವಿಂಡೋಸ್ ಬಳಕೆದಾರರಿಗೆ ಇತ್ತೀಚೆಗೆ ವಾಟ್ಸ್ಆ್ಯಪ್ 32 ಜನರೊಂದಿಗೆ ವಿಡಿಯೋ ಕರೆಗಳನ್ನು ಮಾಡುವ ಸೌಲಭ್ಯವನ್ನು ಬಿಡುಗಡೆ ಮಾಡಿದೆ. ವಾಟ್ಸ್ಆ್ಯಪ್ ದಿನಕ್ಕೊಂದು ಅಪ್ಡೇಟ್ ಗಳನ್ನು ಫೀಚರ್ಸ್ ಗಳನ್ನು ನೀಡುತ್ತಾ ಬರುತ್ತಿದೆ ಹಾಗಾಗಿ ಜನರು ಇದನ್ನು ಬಳಸಲು ಇಷ್ಟಪಡುತ್ತಾರೆ.