ಬರೋಬ್ಬರಿ 44 ಶತಕೋಟಿ ಡಾಲರ್ ಗೆ ಟ್ವಿಟರ್ ಅನ್ನು ಖರೀದಿಸಿದ್ದ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇದೀಗ ಮೈಕ್ರೋಬ್ಲಾಗ್ ಸೈಟ್ ಗೆ ಹೊಸ ಸಿಇಒ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಎನ್ ಬಿಸಿ ಯುನಿವರ್ಸಲ್ ಜಾಹೀರಾತು ವಿಭಾಗದ ಮಾಜಿ ಮುಖ್ಯಸ್ಥೆ ಲಿಂಡಾ ಯಾಕರಿನೊ ಅವರನ್ನು ಟ್ವಿಟರ್ ನ ಹೊಸ ಸಿಇಒ ಆಗಿ ನೇಮಿಸಿದ್ದಾರೆ.
ಲಿಂಡಾ ಅವರನ್ನು ಟ್ವಿಟರ್ ನ ಹೊಸ ಸಿಇಒ ಆಗಿ ಸ್ವಾಗತಿಸಲು ಉತ್ಸುಕನಾಗಿದ್ದೇನೆ. ಲಿಂಡಾ ಅವರು ವ್ಯಾಪಾರ ಕಾರ್ಯಾಚರಣೆ ಮೇಲೆ ಗಮನ ಹರಿಸಲಿದ್ದು, ನಾನು ಉತ್ಪನ್ನ ವಿನ್ಯಾಸ ಹಾಗೂ ಹೊಸ ತಂತ್ರಜ್ಞಾನದ ಮೇಲೆ ಗಮನ ಹರಿಸುತ್ತೇನೆ ಎಂದಿದ್ದಾರೆ.
ಎಲೋನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ಬಳಿಕ ಟ್ವಿಟರ್ ಬಳಕೆದಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು, ನಟ-ನಟಿಯರು, ರಾಜಕೀಯ ಮುಖಂಡರು ಖಾತೆಯಲ್ಲಿ ಇದ್ದ ಬ್ಲೂ ಟಿಕ್ ಗೆ ವಾರ್ಷಿಕ ಹಣ ಪಾವತಿಸಬೇಕು ಎಂದು ಹಲವರು ಹಿಂತೆಗೆದುಕೊಂಡಿದ್ದರು. ಈಗ ಮತ್ತೆ ಸುದ್ದಿಗಳನ್ನು ಓದಲು ಇಂತಿಷ್ಟು ಮೊತ್ತವೆಂದು ಪಾವತಿಸಬೇಕು ಎಂದು ಷರತ್ತುಗಳನ್ನು ಹಾಕಿದ್ದಾರೆ.