ದೇಶದಲ್ಲಿ ಹಲವಾರು ಮಂದಿ ಇಂದಿನಿಂದಲೇ ಸ್ವಾತಂತ್ರ್ಯ ದಿನದ ಆಚರಿಸಲಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ತೀವ್ರಗಾಮಿಗಳಾದ ಕ್ರಾಂತಿವೀರರು ಹಾಗೂ ಅಸಹಕಾರ ಚಳುವಳಿಯಲ್ಲಿದ್ದ ಮಂದಗಾಮಿಗಳ ಕೊಡುಗೆಯನ್ನು ಯಾವತ್ತೂ ನೆನಪಿಸಿಕೊಳ್ಳಲಾಗುತ್ತದೆ. ಹೀಗಿದ್ದರೂ ಪ್ರತಿ ಬಾರಿ ಸ್ವಾತಂತ್ರ್ಯ ಸಂಗ್ರಾಮ ಚಳುವಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊಡುಗೆಯೇನು? ಎಂಬ ಪ್ರಶ್ನೆಯೂ ಕೇಳಿ ಬರುತ್ತದೆ.
ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಆರ್ಎಸ್ಎಸ್ ಪಾತ್ರವೇನು ಎಂಬ ಪ್ರಶ್ನೆ ದೀರ್ಘ ಕಾಲದಿಂದ ಸಂಘ ಎದುರಿಸುತ್ತಾ ಬಂದಿದೆ. ಸದ್ಯ ಕಾಂಗ್ರೆಸ್ನಂತೆ ಆರ್ಎಸ್ಎಸ್ ಕೂಡಾ ಸ್ವತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದೆ ಎಂದು ವಾದಿಸಿದ್ದಾರೆ. ದೌರ್ಭಾಗ್ಯವೆಂಬಂತೆ ಇದಕ್ಕೆ ಸಂಬಂಧಿಸಿದ ಇತಿಹಾಸವನ್ನು ಕೇವಲ ಒಂದು ಕುಟುಂಬಕ್ಕೆ ಸಂಬಂಧಿಸಿದಂತೆ ಬರೆಯಲಾಗಿದೆ. ಹೀಗಾಗಿ ಆರ್ಎಸ್ಎಸ್ ಈ ಸಂಗ್ರಾಮದಲ್ಲಿ ಭಾಗವಹಿಸಿದ ಮಾಹಿತಿ ಜನರಿಗೆ ತಲುಪಿಲ್ಲ.
ಸಂಘವು ಹೆಸರು ಹೇಳಿ ಏನನ್ನೂ ಮಾಡುತ್ತಿರಲಿಲ್ಲ. ಹೆಸರು ಹಾಗೂ ಸಂಸ್ಥೆಯ ಹೆಸರನ್ನು ಬಿಟ್ಟು, ರಾಷ್ಟ್ರಹಿತಕ್ಕಾಗಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಾಂಗ್ರೆಸ್ನ ಎಲ್ಲಾ ಆಂದೋಲನಗಳಲ್ಲಿ ಸ್ವಯಂ ಸೇವಕರು ಭಾಗವಹಿಸಿದ್ಧಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡ್ಗೇವಾರ್ರವರೇ ವರ್ಷಾನುಗಟ್ಟಲೆ ಜೈಲಿನಲ್ಲಿದ್ದರು ಎಂದು ಸಹಗಲ್ ಹೇಳಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಬರೋಬ್ಬರಿ 16 ಸಾವಿರ ಸ್ವಯಂಸೇವಕರು ಜೈಲಿನಲ್ಲಿದ್ದರು.1942ರ ಆಂದೋಲನದಲ್ಲಿ ಎಲ್ಲರಿಗಿಂತಲೂ ನಮ್ಮ ಪಾತ್ರ ಹೆಚ್ಚು ಇತ್ತು. ಆದರೆ ಯಾರೂ ಸಂಘದ ಹೆಸರು ಹೇಳಿ ಭಾಗವಹಿಸಿರಲಿಲ್ಲ. ನಿಜ ಹೇಳಬೇಕೆಂದರೆ ಸಂಘವು ಇವತ್ತಿಗೂ ಹೆಸರು ಬಳಸಿ ಯಾವುದೇ ಕೆಲಸ ಮಾಡುವುದಿಲ್ಲ. ಅದು ಇಂದಿಗೂ ವಿಶ್ವ ಹಿಂದೂ ಪರಿಷತ್, ಕಾರ್ಮಿಕರ ಸಂಘ, ಭಾರತೀಯ ಜನತಾ ಪಾರ್ಟಿ ಹಾಗೂ ವನವಾಸಿ ಕಲ್ಯಾಣ ಆಶ್ರಮದ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿದೆ
1968 ರಿಂದ 1982ರವರೆಗೆ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದ ಸೆಹಗಲ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಹರ್ಯಾಣ ಪ್ರಾಂತ್ಯದ ಸಂಘಟನಾ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಸ್ವಾತಂತ್ರ್ಯ ಸಂಗ್ರಾಮದ ಕುರಿತಾಗಿ ಮಾತನಾಡಿದ ಸೆಹಗಲ್ರವರು “ಡಾ. ಹೆಡ್ಗೆವಾರ್ ಆರಂಭದಲ್ಲಿ ಕಾಂಗ್ರೆಸ್ಗೆ ಸಂಬಂಧಿಸಿದ ಹಾಗೂ ಗಾಂಧೀಜಿ ಬಂಧನದಿಂದ ನಡೆಯುತ್ತಿದ್ದ 1921ರ ಅಸಹಯೋಗ ಚಳುವಳಿಯಲ್ಲಿ ಭಾಗವಹಿಸಿ, ಜೈಲಿಗೂ ಹೋಗಿದ್ದರು. 1922ರ ಜುಲೈ 12ರಂದು ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. 1925ರಲ್ಲಿ ದಸರಾದಂದು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದ್ದರು” ಎಂದಿದ್ದಾರೆ.
ಅಲ್ಲದೇ ಆರ್ಎಸ್ಎಸ್ ಕಾಂಗ್ರೆಸ್ ಆಯೋಜಿಸಿದ್ದ ಆಂದೋಲನಗಳಲ್ಲಿ ಪಾಲ್ಗೊಂಡಿತ್ತೆಂದೂ ವಾದಿಸಿದ್ದಾರೆ. ಸಾವಿರಾರು ಸಂಘಟನೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದವು. ಅವುಗಳಲ್ಲಿ ಅಭಿನವ್ ಭಾರತ್, ಹಿಂದೂ ಮಹಾಸಭಾ, ಆರ್ಯ ಸಮಾಜಗಳೂ ಸೇರಿವೆ. ಆದರೆ ಕಾಂಗ್ರೆಸ್ ನಾಯಕರು ಅವರೆಲ್ಲರನ್ನೂ ಬದಿಗಿರಿಸಿ ಕೇವಲ ಒಬ್ಬ ನಾಯಕ ಹಾಗೂ ಒಂದೇ ಪಕ್ಷಕ್ಕೆ ಇವೆಲ್ಲದರ ಶ್ರೇಯಸ್ಸು ನೀಡಿತು. ನಾವು ಕಾಂಗ್ರೆಸ್ ಪಾತ್ರವಿದೆ ಎನ್ನುತ್ತೇವೆ ಆದರೆ ಅವರೊಂದಿಗೆ ಇತರೆಲ್ಲರ ಪರಿಶ್ರಮವೂ ಇತ್ತು. ಸಂಘವೂ ಭಾಗವಹಿಸಿತ್ತು. ಇದರಲ್ಲಿ ಮಹಾತ್ಮ ಗಾಂಧೀಜಿಯವರ ಕೊಡುಗೆ ಅಪಾರ, ಅವರ ನೇತೃತ್ವದಲ್ಲೇ ಎಲ್ಲಾ ಕೆಲಸಗಳಾದವು” ಎಂದೂ ಸೆಹಗಲ್ ತಿಳಿಸಿದ್ದಾರೆ.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಏಕಪಕ್ಷೀಯವಾಗಿ ಬರೆಯಲಅಗಿದೆ. ಒಂದಿಬ್ಬರು ಇತಿಹಾಸಕಾರರು ಹಲವಾರು ಬಹಳಷ್ಟು ಸತ್ಯ ವಿಚಅರಗಳನ್ನು ಬರೆದಿದ್ದಾರೆ. ಇತಿಹಾಸವನ್ನು ಸರಿ ಮಾಡಬೇಕೆಂದು ಸರ್ಕಾರದಿಂದ ನಾವು ಯಾವುದೇ ಅಪೇಕ್ಷೆ ಇಟ್ಟುಕೊಳ್ಳುವುದಿಲ್ಲ. ಯಾಕೆಂದರೆ ಸಂಘವು ಸರ್ಕಾರವನ್ನು ಅವಲಂಭಿಸಿಲ್ಲ. ಆದರೆ ನಾವು ನಮ್ಮ ಪರವಾಗಿ ಸಾಕ್ಷಿ ಸಮೇತ ಇದನ್ನು ಹೆಳುತ್ತೇವೆ ಎಂಬುವುದು ಪತ್ರಕರ್ತ ಸೆಹಗಲ್ ಮಾತಾಗಿದೆ.
ಸ್ವಾತಂತ್ರ್ಯದ ಬಳಿಕದ ಕೊಡುಗೆ:
ಆರ್ಎಸ್ಎಸ್ನ ದೆಹಲಿ ಸಂಘದ ಪ್ರಚಾರಕ ರಾಜೀವ್ರವರು ಮಾತನಾಡುತ್ತಾ “ಆರ್ಎಸ್ಎಸ್ ಮೊದಲಿನಿಂದಲೂ ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯದ ಮೊದಲಾಗ;ಈ ಬಳಿಕವಾಗಲಿ ಅದು ದೇಶಕ್ಕಾಗಿಯೇ ಕಾರ್ಯ ನಿರ್ವಹಿಸುತ್ತದೆ. 1962 ಹಾಗೂ 1965ರ ಯುದ್ಧದಲ್ಲಿ ನಾವು ಬಹುದೊಡ್ಡ ಪಾತ್ರ ನಿಭಾಯಿಸಿದ್ದೇವೆ. ಇದೇ ಕಾರಣದಿಂದ ಪಂಡಿತ್ ಜವಾಹರ್ಲಾಲ್ ನೆಹರೂ 1963ರ ಜನವರಿ 26ರಂದು ನಡೆದಿದ್ದ ಪರೇಡ್ನಲ್ಲಿ ಭಾಗವಹಿಸಲು ಸಂಘಕ್ಕೆ ಆಹ್ವಾನ ನೀಡಬೇಕಾಯಿತು. ಕೆವಲ 2 ದಿನಗಳ ಮೊದಲು ಸಿಕ್ಕ ಆಮಂತ್ರಣದ ಮೇರೆಗೆ 3500 ಸ್ವಯಂ ಸೇವಕರು ಗಣರಾಜ್ಯದ ಪರೇಡ್ನಲ್ಲಿ ಆಭಗವಹಿಸಿದ್ದರು” ಎಂದಿದ್ದಾರೆ.