ಕೆಲವೊಮ್ಮೆ ನಮಗೆ ತೀರಾ ಅವಶ್ಯವಾಗಿರುವಾಗಲೇ ಚಾರ್ಜ್ ಖಾಲಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಬೇಗನೇ ಮೊಬೈಲ್ ಚಾರ್ಜ್ ಮಾಡುವುದು ಅಗತ್ಯವಾಗಿರುತ್ತದೆ. ಸ್ಮಾರ್ಟ್ಫೋನ್ ಸಾಮಾನ್ಯಕ್ಕಿಂತ ವೇಗವಾಗಿ ಚಾರ್ಜ್ ಮಾಡಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಕಡಿಮೆ ಅವಧಿಯಲ್ಲಿ ಫೋನ್ ಬ್ಯಾಟರಿ ಚಾರ್ಜ್ ಮಾಡಲು ಇಲ್ಲಿದೆ ಸಲಹೆ.
ವೇಗವಾಗಿ ಚಾರ್ಜ್ ಮಾಡಲು ಏನು ಮಾಡಬೇಕು:
ಏರೋಪ್ಲೇನ್ ಮೋಡ್ ಹಾಕಿ:
ಮೊಬೈಲ್ನಲ್ಲಿ ಏರೋಪ್ಲೇನ್ ಮೋಡ್ ಆನ್ ಮಾಡಿ. ಹೀಗೆ ಮಾಡಿ ಚಾರ್ಜ್ ಮಾಡಿದರೆ ನಿಮ್ಮ ಫೋನ್ ಬ್ಯಾಟರಿ ಚಾರ್ಜಿಂಗ್ ವೇಗ ಶೇ.30 ಪರ್ಸೆಂಟ್ ಹೆಚ್ಚಿರುತ್ತದೆ. ಏಕೆಂದರೆ, ಏರೋಪ್ಲೇನ್ ಮೋಡ್ ಆನ್ ಮಾಡಿದ್ದಾಗ ನೆಟ್ವರ್ಕ್ ವ್ಯವಸ್ಥೆ ಕಟ್ ಆಗಿರುವುದರಿಂದ ಫೋನ್ ಬಹುಬೇಗ ಚಾರ್ಜ್ ಆಗುತ್ತದೆ.
ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ :
ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿದರೆ ಸ್ಮಾರ್ಟ್ಪೋನ್ ಬಹುಬೇಗ ಚಾರ್ಜ್ ಆಗುತ್ತದೆ ಎಂಬುದು ಈಗಾಗಲೇ ಬಹುತೇಕ ಮೊಬೈಲ್ ಬಳಕೆದಾರರಿಗಲೆಲ್ಲಾ ತಿಳಿದಿದೆ. ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡುವುದರಿಂದ ಶೇ. 30 ಪರ್ಸೆಂಟ್ಗೂ ಅಧಿಕ ವೇಗದಲ್ಲಿ ಬ್ಯಾಟರಿ ಚಾರ್ಜ್ ಆಗುತ್ತದೆ.
ಆಪ್ ಬಳಸಿದ ನಂತರ ಕ್ಲೀಯರ್ ಮಾಡಿ:
ಹೆಚ್ಚಿನವರು ಆಪ್ಗಳನ್ನು ಬಳಸಿದ ನಂತರ ನೇರವಾಗಿ ಬ್ಯಾಕ್ ಬರುತ್ತಾರೆ ಹೀಗೆ ಬರುವುದರಿಂದ ಹಿಂದೆ ಆಪ್ಗಳು ಕಾರ್ಯನಿರ್ವಹಿಸುತ್ತಾ ಇರುತ್ತದೆ. ಇದರಿಂದಾಗಿ ಚಾರ್ಜ್ ನಿಧಾನವಾಗಿ ಆಗುತ್ತದೆ. ಹಾಗಾಗಿ ಆಪ್ ಬಳಸಿದ ನಂತರ ಕ್ಲೀಯರ್ ಮಾಡಿ.
ಇಂಟರ್ನೆಟ್ ಬಳಕೆ ಮಾಡಲೇಬೇಡಿ:
ಚಾರ್ಜಿಂಗ್ ವೇಳೆ ಇಂಟರ್ನೆಟ್ ಬಳಕೆ ಮಾಡಲೇಬೇಡಿ. ಏಕೆಂದರೆ ಬ್ಯಾಟರಿ ಚಾರ್ಜ್ ಆಗುತ್ತಿರುವ ಸಮಯದಲ್ಲಿ ಇಂಟರ್ನೆಟ್ ಬಳಕೆ ಮಾಡಿದರೆ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಬ್ಯಾಟರಿ ಶಕ್ತಿ ಖಾಲಿಯಾಗುತ್ತದೆ. ಇದರಿಂದ ವೇಗವಾಗಿ ಮೊಬೈಲ್ ಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ.
ಲ್ಯಾಪ್ಟಾಪ್ನಲ್ಲಿ ಚಾರ್ಜ್ ಮಾಡಬೇಡಿ:
ಹೆಚ್ಚು ಜನರು ಅವಸರದಲ್ಲಿ ಲ್ಯಾಪ್ಟಾಪ್ ಮೂಲಕ ಚಾರ್ಜ್ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ, ಗೋಡೆಯ ವಿದ್ಯುತ್ ಸ್ಲಾಟ್ಗಳಿಂದ ಬ್ಯಾಟರಿ ವೇಗವಾಗಿ ಚಾರ್ಜ್ ಆದಷ್ಟು ಲ್ಯಾಪ್ಟಾಪ್ ಮೂಲಕ ಚಾರ್ಜ್ ಆಗುವುದಿಲ್ಲ. ಏಕೆಂದರೆ, ಲ್ಯಾಪ್ಟಾಪ್ ಮೊಬೈಲ್ಗೆ ಬೇಕಾದಷ್ಟು ಪ್ರಮಾಣದಲ್ಲಿ ಶಕ್ತಿಯನ್ನು ಬಿಡುವುದಿಲ್ಲ.
ನಿಮ್ಮ ಮೊಬೈಲ್ ಚಾರ್ಜರ್ನ್ನು ಬಳಸಿ:
ಮೊಬೈಲ್ ಅನ್ನು ಬಹುಬೇಗ ಚಾರ್ಜ್ ಮಾಡುವುದಕ್ಕಾಗಿ ಬೇರೆ ಬೇರೆ ಫಾಸ್ಟ್ ಚಾರ್ಜರ್ ಮೊರೆಹೋಗುವವರೇ ಹೆಚ್ಚು. ಆದರೆ, ಫಾಸ್ಟ್ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ ಮತ್ತು ಮೊಬೈಲ್ ಕೂಡ ಹಾಳಾಗುತ್ತದೆ. ಹಾಗಾಗಿ, ನೀವು ಫೋನ್ ಖರೀದಿಸಿದಾಗ ನೀಡಿದ ಚಾರ್ಜರ್ನಲ್ಲೇ ಫೋನನ್ನು ಚಾರ್ಜ್ ಮಾಡುವುದು ಉತ್ತಮ.