ಮಂಗಳೂರು: ಅರುಣ್ಯ ಫೌಂಡೇಶನ್ ಮತ್ತು ದಾಸ್ ಕುಡ್ಲ ಇವೆಂಟ್ಸ್ ಸಹಯೋಗದಲ್ಲಿ ಎಲ್ಲಾ ವಯೋಮಿತಿಯ ಸ್ಪರ್ಧಿಗಳನ್ನು ಹೊಂದಿರುವಂತಹ ಜಗತ್ತಿನ ಪ್ರಪ್ರಥಮ ಪ್ರಯೋಗ, ಕರಾವಳಿ ಕರ್ನಾಟಕ ಮೆಗಾ ಮ್ಯೂಸಿಕಲ್ ರಿಯಾಲಿಟಿ ಶೋ, ‘ಸಿಂಗರ್ಸ್ ಪ್ರೀಮಿಯರ್ ಲೀಗ್ (ಎಸ್ಪಿಎಲ್ 23): ಕರಾವಳಿ ಕೋಯಲ್ ಚಾಂಪಿಯನ್ಸ್ 2023’ ಕಾರ್ಯಕ್ರಮವು ಮೇ 31 ಮತ್ತು ಜೂನ್ 1 ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಮೇ 31, 9.04 ಕ್ಕೆ ಜ್ಞಾನೋದಯದ ಉದಯ್ ಗುರೂಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅದರ ನಂತರ ಸಿಂಗರ್ಸ್ ಪ್ರೀಮಿಯರ್ ಲೀಗ್ (ಎಸ್ಪಿಎಲ್ 23) ನ ಮೊದಲ ಸುತ್ತು ನಡೆಯಲಿದೆ.
ಎಸ್ಪಿಎಲ್23ರ ಆಯೋಜನೆ ಕಳೆದ ನವೆಂಬರಿನಿಂದ ನಡೆದಿದ್ದು, ರಾಜ್ಯದೆಲ್ಲೆಡೆಯಿಂದ ಒಟ್ಟು 453 ಸ್ಪರ್ಧಿಗಳು ಮೊದಲ ಹಾಗೂ ಮೆಗಾ ಅಡಿಷನ್ನಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಒಟ್ಟು 72 ಸ್ಪರ್ಧಿಗಳು ಆಯ್ಕೆಯಾಗಿದ್ದು, 9 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸ್ಪರ್ಧಿಸಲಿವೆ.
ಕಲಾವಿದರು ಮೇ 29 ರಿಂದ ಮುಖ್ಯ ಸಂಯೋಜಕರು ಮತ್ತು ಸಂಗೀತ ಕಲಾವಿದರ ಸುಪರ್ದಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಹಿರಿಯ ಸಮಾಜ ಸೇವಕ ಸುರೇಶ್ ಬಲ್ಲಾಳ್, ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯ ಡಾ. ಕೇಶವರಾಜ್, ವೆನ್ಲಾಕ್ ಆಸ್ಪತ್ರೆಯ ಜೀವಸಾರ್ಥಕತೆ (ಸೊಟ್ಟೊ) ಸಂಯೋಜಕಿ ಪದ್ಮಾ ವೇಣೂರು, ವೆರಿಟೊ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪೆಜತ್ತಾಯ, ದೊಡ್ಮನೆ ಅಪ್ಪು ಯುವಸೇನೆಯ ಜನಾರ್ದನ ಬಾಬು, ಹಿನ್ನೆಲೆ ಗಾಯಕ ಮತ್ತು ಕಾರ್ಯಕ್ರಮದ ಮುಖ್ಯ ಸಂಯೋಜಕ ರಮೇಶ್ಚಂದ್ರ ಉಪಸ್ಥಿತರಿರಲಿದ್ದಾರೆ.
ಅಂಗಾಂಗ ದಾನ ಮತ್ತು ನೇತ್ರದಾನಕ್ಕಾಗಿ ನೋಂದಣಿ ಶಿಬಿರವು ಈ ದಿನ ಪ್ರಾರಂಭವಾಗುತ್ತದೆ ಮತ್ತು ಜೂನ್ 1 ರಂದು ಸಹ ಮುಂದುವರಿಯುಲಿದೆ.
ರಮೇಶ್ಚಂದ್ರ, ಮುಖ್ಯ ಸಂಯೋಜಕರು ವಿಕ್ರಮ್ ಕೆ., ಮ್ಯಾನೆಜಿಂಗ್ ಟ್ರಸ್ಟಿ, ಅರುಣ್ಯ ಫೌಂಡೇಶನ್, ಸದಾಶಿವದಾಸ್, ದಾಸ್ ಕುಡ್ಲ ಇವೆಂಟ್ಸ್ ಹಾಗೂ ನಾರಾಯಣರಾಜ್ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಅರುಣ್ಯ ಫೌಂಡೇಶನ್ ಹಾಗೂ ದಾಸ್ ಕುಡ್ಲ ಇವೆಂಟ್ಸ್ ಬಗ್ಗೆ
ಅರುಣ್ಯ ಫೌಂಡೇಶನ್ ಕೃಷಿ, ಗ್ರಾಮೀಣಾಭಿವೃದ್ಧಿ, ಯುವಸಬಲೀಕರಣ, ಕಲೆ, ಸಂಸ್ಕೃತಿ, ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದು, ಕಳೆದ 5 ವರ್ಷಗಳಿಂದ ಸಕ್ರೀಯವಾಗಿದೆ. ದಾಸ್ ಕುಡ್ಲ ಇವೆಂಟ್ಸ್ ರಾಜ್ಯದ ಸಂಗೀತ ಕಲಾವಿದರಿಗೆ ಪ್ರೊತ್ಸಾಹ, ಹಾಗೂ ವೇದಿಕೆಯನ್ನು ನೀಡುತ್ತಿದೆ. ಸುರ್ಸಂಗಮ್ ಆರ್ಕೆಸ್ಟ್ರಾ ಮೂಲಕ ಮಂಗಳೂರು ದಸರಾ ಆಚರಣೆಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಸತತವಾಗಿ ಆರು ವರ್ಷಗಳ ಕಾಲ ಆಯೋಜಿಸಿರುವುದು, ಕರಾವಳಿಯ ಸಂಗೀತ ಪ್ರಿಯರ ಮನಸ್ಸಿನಲ್ಲಿ ಗಾಢವಾದ ಛಾಪು ಮೂಡಿಸಿದೆ.