ಮಂಗಳೂರು: ಆಧುನಿಕ ಯುಗದಲ್ಲಿ ಎಲ್ಲವೂ ಬದಲಾಗುತ್ತಿದ್ದರೂ ತುಳುನಾಡಿನ ದೈವಾರಾಧನೆ ಇಂದಿಗೂ ಮೂಲಸ್ವರೂಪವನ್ನ ಉಳಿಸಿಕೊಂಡಿದೆ.ಕೆಲವೊಂದು ಕಡೆಗಳಲ್ಲಿ ಮಿತಿ ಮೀರಿದ ಅಬ್ಬರದ ದೈವಾರಾಧನೆ ನಡೆದು ಆಡಂಬರವಾಗುತ್ತಿದೆ ಅನ್ನೋ ಆರೋಪವೂ ಇದೆ.ಈ ನಡುವೆ ಇತ್ತೀಚೆಗೆ ಬಂಟ್ವಾಳದ ರಾಯಿ ಎಂಬಲ್ಲಿ ನಡೆದ ಸಾಂಪ್ರದಾಯಿಕ ಬದ್ಧವಾದ ದೈವಾರಾಧನೆ ನಡೆದಿದೆ.ದೊಂದಿಯ ಬೆಳಕಿನಲ್ಲಿ ದೈವ ಮಂತ್ರದೇವತೆಯ ಕೋಲ ನಡೆದು ಎಲ್ಲರನ್ನ ಮಂತ್ರಮುಗ್ಧಗೊಳಿಸಿದೆ.
ಬಂಟ್ವಾಳದ ರಾಯಿ ಮಾಬೆಟ್ಟು ವಿಶ್ವನಾಥ ಶೆಟ್ಟಿಯವರ ಮನೆಯಲ್ಲಿ ನಡೆದ ಮಂತ್ರದೇವತೆಯ ಕೋಲ ಸಂಪ್ರದಾಯಿಕ ಬದ್ಧವಾಗಿ ನಡೆದಿದೆ.ಬೆಂಕಿಯ ದೀವಟಿಗೆಯ ಬೆಳಕಿನಲ್ಲಿ ಮಂತ್ರದೇವತೆ ಮಾಯದಿಂದ ಜೋಗದ ರೂಪಕ್ಕೆ ಇಳಿದು ನಂಬಿದವರಿಗೆ ತನ್ನ ವೈಭವವನ್ನು ತೋರಿಸಿದೆ.ಸಿರಿಸಿಂಗಾರದ ಸೇವೆಯನ್ನು ಪಡೆದು ಪ್ರಸನ್ನಳಾದ ಮಂತ್ರದೇವತೆಯ ಅಬ್ಬರ ದೀವಟಿಗೆಯ ಬೆಳಕಿನಲ್ಲಿ ಬೇರೆ ಲೋಕವನ್ನೇ ಧರೆಗಿಳಿಸುವಂತೆ ಮಾಡಿದೆ.