ಬೆಂಗಳೂರು : ವರಾಹಿ ಲಕ್ಷ್ಮಿ ಸಿಲ್ಕ್ಸ್ ಬೆಂಗಳೂರಿನ ಜಯನಗರದ ಜಗದೀಶ್ ಹೋಟೆಲ್ಸ್ ನಲ್ಲಿ ಅವರ ಬೆಂಗಳೂರಿನ ಉತ್ಪನ್ನ ಪ್ರದರ್ಶನ ಮತ್ತು ಮಾರಾಟವನ್ನು ಪ್ರಾರಂಭಿಸಿದ್ದಾರೆ.
ವರಾಹಿ ಲಕ್ಷ್ಮಿ ಸಿಲ್ಕ್ಸ್ ಇತ್ತೀಚೆಗೆ ಬೆಂಗಳೂರಿನಲ್ಲಿ ಅವರ ಮೊದಲ ವಿಶೇಷ ಪ್ರದರ್ಶನವನ್ನು ಕಾಂಚೀಪುರಂನ ಶುದ್ಧ ರೇಷ್ಮೆಯ ವಿವಾಹದ ಸೀರೆಗಳಿಂದ ಪ್ರಾರಂಭಿಸಿತು ಮತ್ತು ವಿಶ್ವಾಸಾರ್ಹ ಗುಣಮಟ್ಟದ ಕಾಂಚೀಪುರಂ, ಅರನಿ ಸೀರೆಗಳು, ಧರ್ಮಾವರಂ ಸೀರೆಗಳು, ಉಪ್ಪದ ಮತ್ತು ಕೈಮಗ್ಗದ ಸೀರೆಗಳನ್ನು ಪೂರೈಸುತ್ತಿದೆ.
ಈ ಪ್ರದರ್ಶನ ಹಾಗೂ ಮಾರಾಟ ಕುರಿತು ವರಾಹಿ ಲಕ್ಷ್ಮಿ ಸಿಲ್ಕ್ಸ್ ಎಂ.ಡಿ. ಎಸ್.ಕೆ.ಬಿ. ಪಿ ಗೋಪಿನಾಥ್, “ನಾವು ನೇಕಾರರಿಂದ ನೇರವಾಗಿ ನೇಯ್ದ ಡಿಸೈನರ್ ಸೀರೆಗಳನ್ನು ತರಲು ಬಹಳ ಉತ್ಸುಕರಾಗಿದ್ದೇವೆ. ರೇಷ್ಮೆಯು ಎಲ್ಲ ಸಂದರ್ಭಗಳಿಗೂ ಹೊಂದುವ ಉನ್ನತ ಉತ್ಪನ್ನವಾಗಿದೆ. ನಮ್ಮ ವಿಶೇಷತೆಯು ವಧುವಿನ ಮತ್ತು ವಿವಾಹದ ಉಡುಗೊರೆಯ ಸೀರೆಗಳ ಬೆಲೆ, ಗುಣಮಟ್ಟ ಮತ್ತು ಶ್ರೇಣಿಯಲ್ಲಿರುವುದರಿಂದ ನಾವು ಬೆಂಗಳೂರು ಮಾರುಕಟ್ಟೆಯಲ್ಲಿ ಮಹತ್ತರ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ” ಎಂದರು.
ಪ್ರಾಚೀನತೆಯು ವರಾಹಿ ಲಕ್ಷ್ಮಿ ಸಿಲ್ಕ್ಸ್ ಸಂಕೇತವಾಗಿದ್ದು ಅದು ರೀಟೇಲ್ ಖರೀದಿಗೆ ಸಗಟು ದರದಲ್ಲಿ ಮೂಲ ಗುಣಮಟ್ಟ ನೀಡುತ್ತದೆ. ಈ ಆಕರ್ಷಕ ಹಣಕ್ಕೆ ತಕ್ಕ ಮೌಲ್ಯ ವರ್ಷಪೂರ್ತಿ ಇರುತ್ತದೆ. ಸೀರೆಗಳು ರೂ.500ರಿಂದ 2 ಲಕ್ಷದವರೆಗೆ ಲಭ್ಯವಿರುತ್ತವೆ.
ವರಾಹಿ ಲಕ್ಷ್ಮಿ ಸಿಲ್ಕ್ಸ್ 1000ಕ್ಕೂ ಹೆಚ್ಚು ಕೈಮಗ್ಗಗಳನ್ನು ಹೊಂದಿದ್ದು ಅವುಗಳ ವಿಶೇಷ ಸಂಗ್ರಹವು ಸಗಟು ದರದಲ್ಲಿ ದೊರೆಯುವುದರಿಂದ ಮಧ್ಯವರ್ತಿಗಳನ್ನು ನಿವಾರಿಸುತ್ತದೆ ಮತ್ತು ಗ್ರಾಹಕರಿಗೆ ಅನುಕೂಲಗಳನ್ನು ನೇರವಾಗಿ ವರ್ಗಾಯಿಸುತ್ತದೆ. ಈ ಪ್ರದರ್ಶನವು ಅಪರೂಪದ ಅನಂತ ಶುದ್ಧ ಕಾಂಚೀಪುರಂ ಸೀರೆಗಳು, ಅರನಿ ಸೀರೆಗಳು, ಬನಾರಸ್ ಸೀರೆಗಳು, ಧರ್ಮಾವರಂ ಸೀರೆಗಳು, ಉಪ್ಪದ ಸೀರೆಗಳು, ಕೈಮಗ್ಗದ ಸೀರೆಗಳು, ಜರಿ ಕೋಟ ಸೀರೆಗಳು ಮತ್ತು ಡಿಸೈನರ್ ಸೀರೆಗಳಿವೆ. ಖರೀದಿಸಿದ ಪ್ರತಿ ಸೀರೆಯೂ ಸಿಲ್ಕ್ ಮಾರ್ಕ್ ಮತ್ತು ಶುದ್ಧತೆಯ ಪ್ರಮಾಣ ಪತ್ರ ಹೊಂದಿರುತ್ತದೆ.
ಈ ಪ್ರದರ್ಶನವು ಜುಲೈ 26ರಿಂದ 28, 2024ರವರೆಗೆ ನಡೆಯಲಿದೆ