ಆಧುನಿಕ ಜೀವನಶೈಲಿ, ಧೂಳು, ಕಾರ್ಖಾನೆಗಳ ಶಾಖ ಇದೆಲ್ಲದರ ಕಾರಣ ಬೇಸಿಗೆಯ ಶಾಖ ಅತ್ಯಂತ ಪರಿಣಾಮಕಾರಿಯಾಗಿದೆ. ಇದರಿಂದ ದೇಹವು ಬೆವರಲಾರಂಭಿಸಿ ಒಮ್ಮೊಮ್ಮೆ ದುರ್ವಾಸನೆ ತರುತ್ತದೆ.
ಈ ವಾಸನೆ ಇಂದಾಗಿ ಮತ್ತೊಬ್ಬರೊಂದಿಗೆ ಇರುವಾಗ ಮುಜುಗರ ತರುತ್ತದೆ. ಹಾಗಾಗಿ ಇದರಿಂದ ತಪ್ಪಿಸಲು ಒಂದಿಷ್ಟು ಟಿಪ್ಸ್
1) ತಣ್ಣೀರಿನ ಸ್ನಾನ ಉತ್ತಮ ಆದರೆ ಅದರೊಂದಿಗೆ ರೋಜ್ ವಾಟರ್ ಲೆವೆಂಡರ್ ಮುಂತಾದ ಸುಗಂಧಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆ ದೂರ ಮಾಡಬಹುದು.
2) ಅಲೋವೆರಾ ರಸವನ್ನು ದೇಹಕ್ಕೆ ಲೇಪಿಸಿ ಸ್ನಾನ ಮಾಡುವುದರಿಂದ ದೇಹದ ದುರ್ಗಂಧವನ್ನು ದೂರ ಮಾಡುವುದರ ಜೊತೆಗೆ ಚರ್ಮವನ್ನು ಮೃದುವಾಗಿಸಲು ಸಹಕಾರಿಯಾಗುತ್ತದೆ.
3) ಚರ್ಮದ ಮೇಲಿನ ಸೂಕ್ಷ್ಮ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹೊಂದುವುದಾಗಿಂದಲೂ ಬೆವರಿನ ವಾಸನೆ ಬರುತ್ತದೆ ಇದನ್ನು ಸರಿಪಡಿಸಲು ಸ್ನಾನದ ನೀರಿಗೆ ಬೇವಿನ ಎಲೆಯ ಬೆರೆಸಿ ಸ್ನಾನ ಮಾಡುವುದರಿಂದ ಈ ಸಮಸ್ಯೆಯಿಂದ ದೂರವಿರಬಹುದು.
4) ನಿಂಬೆ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಸ್ನಾನ ಮಾಡುವುದರಿಂದ ಬೆವರಿನ ವಾಸನೆ ದೂರ ಮಾಡಬಹುದು.
5) ಬಳಸಿದ ಬಟ್ಟೆಯನ್ನೇ ಮತ್ತೆ ಬಳಸುವುದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ಆಗಬಹುದು ಇದರಿಂದ ಮೈ ತುರಿಕೆ, ಬೆವರಿನ ಸಮಸ್ಯೆಗಳು ಜಾಸ್ತಿ ಆಗುತ್ತದೆ ಹಾಗಾಗಿ ಪ್ರತಿದಿನ ಶುಭ್ರ ಬಟ್ಟೆಯನ್ನು ಧರಿಸಿ.
6) ನಾವು ಸೇವಿಸುವ ಆಹಾರ ಪದಾರ್ಥಗಳು- ಹೆಚ್ಚಾಗಿ ಕರಿದ ಪದಾರ್ಥಗಳು, ಮಸಾಲೆಯುಕ್ತ ಆಹಾರ ಇದೆಲ್ಲದರ ಆಮ್ಲೀಯ ಅಂಶದಿಂದಾಗಿ ದೇಹದ ಉಷ್ಣತೆ ಹೆಚ್ಚಾಗಿ ಬೆವರುವಂತೆ ಮಾಡುತ್ತದೆ.