ನಾವಿಂದು ಫ್ಯಾಷನ್ ಯುಗದಲ್ಲಿ ಬದುಕುತ್ತಿದ್ದೇವೆ. ದಿನಕ್ಕೊಂದು ಬಟ್ಟೆ ಒಮ್ಮೆ ಹಾಕಿದ ಬಟ್ಟೆ ಇನ್ನೊಂದು ಸಲ ಹಾಕಲು ಇಷ್ಟವಾಗುವುದಿಲ್ಲ. ಯಾರದಾರು ನಮ್ಮನ್ನು ಜಡ್ಜ್ ಮಾಡುತ್ತಾರೆ ಅಥವಾ ಕೀಳಾಗಿ ಕಾಣುತ್ತಾರೆ ಎಂಬ ಮನೋಭಾವಕ್ಕೆ.
ಸಿನಿಮ ಮಂದಿ, ಮಾಡೆಲ್ ಗಳು, ಟೆಕ್ಸ್ ಸ್ಡಯಿಲ್ ಇಂಡಸ್ಟ್ರಿ ಅಂತೂ ವ್ಯವಾಹರಿಕವಾಗಿ ಸಾಕಷ್ಟು ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಪರಿಚಯಿಸುತ್ತಿದೆ. ಕ್ಯಾಶುವಲ್ಸ್ ವೇರ್, ಎರ್ ಪೋರ್ಟ್ ವೇರ್, ಪಾರ್ಟಿ ವೇರ್, ಹೀಗೆ ಹಲವು ರೀತಿಯ ಫ್ಯಾಶನ್ಗಳನ್ನು ಪರಿಚಯಿಸಿದೆ. ಅದರಲ್ಲಿ ಇಂದಿನ ಫ್ಯಾಶನ್ ಗಳಲ್ಲಿ ಒಂದಾಗಿದೆ ಸ್ಟ್ರೀಟ್ ಸ್ಟೈಲ್.
ಯಾವುದೇ ಫ್ಯಾಶನ್ ಸ್ಟುಡಿಯೋಗಳಿಂದಲ್ಲ, ಆದರೆ ತಳಮಟ್ಟದಿಂದ ಹೊರಹೊಮ್ಮಿದೆ ಎಂದು ಅಂದಾಜಿಸಲಾಗಿದೆ. ಸ್ಟ್ರೀಟ್ ಫ್ಯಾಷನ್ ಸಾಮಾನ್ಯವಾಗಿ ಯುವ ಸಂಸ್ಕೃತಿಯೊಂದಿಗೆ ಸಂಬಂಧಿಸಿದೆ ಮತ್ತು ಇದು ಹೆಚ್ಚಾಗಿ ಪ್ರಮುಖ ನಗರ ಕೇಂದ್ರಗಳಲ್ಲಿ ಕಂಡುಬರುತ್ತದೆ.
ಸಾಮನ್ಯವಾಗಿ ನಾವು ನಿಯತಕಾಲಿಕೆಗಳು ಮತ್ತು ವೃತ್ತಪತ್ರಿಕೆಗಳಲ್ಲಿ ಸೊಗಸಾದ ಬಟ್ಟೆಗಳನ್ನು ಧರಿಸಿದ ವ್ಯಕ್ತಿಗಳ ಒರಿಜಿನಲ್ ಛಾಯಾಚಿತ್ರಗಳನ್ನು ಹೊಂದಿರುತ್ತವೆ. ಸಿನಿಮಾ, ಟಿವಿ ಕಮರ್ಶಿಯಲ್ಸ್ಗಳು ಪ್ಯಾಶನ್ ಜಗತ್ತು ಸ್ಟ್ರೀಟ್ ಫ್ಯಾಷನ್ ಬಗ್ಗೆ ಪ್ರಭಾವ ಬೀರುತ್ತದೆ. ಹೆಚ್ಚಿನ ಪ್ರಮುಖ ಯುವ ಪೀಳಿಗೆಗಳು ಬೀದಿ ಫ್ಯಾಷನ್ ಸಂಸ್ಕೃತಿಯನ್ನು ಅನುಕರಿಸುತ್ತಿದೆ. ಸ್ಟ್ರೀಟ್ ಫ್ಯಾಷನ್ ಪ್ರಪಂಚದಾದ್ಯಂತ ವಿಭಿನ್ನವಾಗಿದೆ.
ಶೈಲಿ ಮತ್ತು ಫ್ಯಾಷನ್ ಗೆ “ಸ್ಟ್ರೀಟ್ ” ವಿಧಾನವು ಪ್ರಸ್ತುತ ಫ್ಯಾಷನ್ ಟ್ರೆಂಡ್ಗಳ ಮೇಲೆ ಮಾತ್ರ ಕೇಂದ್ರೀಕರಿಸುವ ಬದಲು ವೈಯಕ್ತಿಕವಾದವನ್ನು ಆಧರಿಸಿದ ಟ್ರೆಂಡ್ ಆಗಿದೆ. ಬೀದಿ ಶೈಲಿಯ ವಿಧಾನಗಳನ್ನು ಬಳಸಿಕೊಂಡು, ವ್ಯಕ್ತಿಗಳು ತಮ್ಮ ಬಹುಮುಖ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಾರೆ, ಇದು ಸ್ವತಃ ಒಂದು ರೀತಿಯ ಪ್ರದರ್ಶನವಾಗಿದೆ. ಉಡುಗೆ ಮೂಲಕ ತಮ್ಮ ಛಾಪು ಮೂಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಎಷ್ಟೋ ಸಂದರ್ಭದಲ್ಲಿ ಇನ್ನೊಬ್ಬರ ಫ್ಯಾಶನ್ ಸೆನ್ಸ್ ಬಗ್ಗೆ ಮಾತನಾಡಿಕೊಳ್ಳುವಂತೆ ಪ್ರೇರಿಪಿಸುತ್ತದೆ.
ಸ್ಟ್ರೀಟ್ ಶೈಲಿಯು ಹೆಚ್ಚಾಗಿ ಕ್ರೀಡಾ ಉಡುಪುಗಳನ್ನು ಧರಿಸುವ ಸಾಮಾನ್ಯ ಜನರನ್ನು ಒಳಗೊಂಡಿದೆ. ಇವೆಲ್ಲವು ವಿವಿಧ ಸ್ಪೋಟ್ಸ್ ವೇರ್ ಬ್ರಾಂಡ್ಗಳಿಗಾಗಿ ಕೆಲಸ ಮಾಡುವ ಸೂಪರ್ ಮಾಡೆಲ್ಗಳಿಂದ ಪ್ರಭಾವಿತವಾಗಿದೆ. ಆದ್ದರಿಂದ, ಕ್ರೀಡಾ ಉಡುಪುಗಳ ಫ್ಯಾಶನ್ ಸೆನ್ಸ್ ನಿಂದ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರುವುದು ಸುಲಭವಾಗಿದೆ.
ಈ ಶೈಲಿಯನ್ನು ಸಾಮಾನ್ಯವಾಗಿ ಹಿಂದಿ ಚಿತ್ರರಂಗದಿಂದ ನಕಲು ಮಾಡುವ ಮೂಲಕ ಭಾರತದಲ್ಲಿ ಸ್ಟ್ರೀಟ್ ಸ್ಟೈಲ್ ತನ್ನ ಹಾದಿಯಲ್ಲಿ ಸಾಗುತ್ತಿದೆ. ಭಾರತೀಯರು ಯಾವಾಗಲೂ ಫ್ಯಾಷನ್ ನಿಂದ ಆಕರ್ಷಿತರಾಗಿರುವುದರಿಂದ ಭಾರತದಲ್ಲಿ, ವಿವಿಧ ಧರ್ಮಗಳು ಈ ಬೀದಿ ಶೈಲಿಯನ್ನು ಅನುಕರಣೆ ಮಾಡಲು ಸಹಾಯ ಮಾಡುತ್ತವೆ.
ಹಿಪ್ ಹಾಪ್ ಸ್ಟ್ರೀಟ್ ವೇರ್ ಫ್ಯಾಷನ್:
ಹಿಪ್ ಹಾಪ್ ಸಂಸ್ಕೃತಿಯು ಬೇಸ್ ಬಾಲ್ ಕ್ಯಾಪ್ ಗಳು, ಬ್ಯಾಗಿ ಜೀನ್ಸ್ ಮತ್ತು ರೆಟ್ರೋ ಹಿಪ್ ಹಿಪ್ ಶೈಲಿಯು ಉನ್ನತ ಟಾಪ್ ಗಳು ಮತ್ತು ಅಡಿಡಾಸ್ ಟ್ರ್ಯಾಕ್ ಸೂಟ್ ಗಳನ್ನು ಧರಿಸುವುದಾಗಿದೆ.
ಸ್ಕೇಟ್ ವೇರ್:
ಸ್ಕೇಟ್ ಬೋರ್ಡಿಂಗ್ ಸಂಸ್ಕೃತಿಯು ಈ ಶೈಲಿಯನ್ನು ಜನಪ್ರಿಯಗೊಳಿಸಲು ಕಾರಣವಾಗಿದೆ.ಸ್ಕೇಟ್ ಫ್ಯಾಷನ್ ನ ಹೆಚ್ಚಾಗಿ ಬೇಸಿಗೆಗೆ, ಗ್ರಾಫಿಕ್ ಟೀ ಶರ್ಟ್ಗಳು, ಬೇಸ್ ಬಾಲ್ ಕ್ಯಾಪ್ ಗಳು, ವೈಡ್-ಲೆಗ್ ಶಾರ್ಟ್ಸ್ ಮತ್ತು ಐಕಾನಿಕ್ ಸ್ಕೇಟ್ ಶೂಗಳು ಸೇರಿದಂತೆ ಪ್ರಮುಖ ವಿನ್ಯಾಸಗಳು. ಈ ಉಡುಪನ್ನು ಚಳಿಗಾಲದಲ್ಲಿಯೂ ಕೂಡ ಧರಿಸಲಾಗುತ್ತದೆ, ಇವೆರಡು ಪ್ರಮುಖ ಜನಪ್ರಿಯ ಸ್ಟ್ರೀಟ್ ಸ್ಟೈಲ್ ಪ್ಯಾಷನ್ ವೇರ್ಗಳು ಆಗಿವೆ.