ಗೋವಾ: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಯವರು ಮೇ 04, ರಂದು ಗೋವಾಗೆ ಆಗಮಿಸಿ ಎಸ್. ಸಿ. ಓ. (ಶಾಂಗೈ ಸಹಕಾರ ಸಂಘಟನೆ) ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
12 ವರ್ಷಗಳ ವರೆಗೆ ಭಾರತಕ್ಕೆ ಯಾವುದೇ ಪಾಕಿಸ್ತಾನ ವಿದೇಶಾಂಗ ಸಚಿವರ ಭೇಟಿ ನೀಡಿರಲಿಲ್ಲ. ಆದರೆ 12 ವರ್ಷಗಳ ನಂತರ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಮೊದಲ ಹಿರಿಯ ನಾಯಕ ಬಿಲಾವಲ್ ಭುಟ್ಟೋ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗೋವಾದ ವಿಮಾನ ನಿಲ್ದಾಣಕ್ಕೆ ಬಿಲಾವಲ್ ಭುಟ್ಟೋ ಬಂದಿಳಿದಾಗ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಕಿಸ್ತಾನ-ಅಪಘಾನಿಸ್ತಾನ- ಇರಾನ್ ವಿಭಾಗದ ಜಂಟಿ ಕಾರ್ಯದರ್ಶಿ ಜೆ.ಪಿ.ಸಿಂಗ್ ಸ್ವಾಗತಿಸಿದರು.
ಉಭಯ ದೇಶಗಳ ನಡುವೆ ಸಂಘರ್ಷಗಳು ನಡೆಯುತ್ತಿರುವಾಗಲೇ, ಈ ಸಮಯದಲ್ಲಿ ಭಾರತಕ್ಕೆ. ಭುಟ್ಟೋ ಭೇಟಿ ನೀಡಿರುವುದು ಅಚ್ಚರಿ ತಂದಿದೆ.
ಈ ಹಿಂದೆ 2011ರಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಇರುವಾಗ ಅಂದಿನ ಪಾಕಿಸ್ತಾನ ವಿದೇಶಾಂಗ ಸಚಿವೆ ಆದ ಹಿನಾ ರಬ್ಬಾನಿ ಖಾರ್ ಅವರು ಭಾರತಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದರು.