ಇತ್ತೀಚಿನ ಜೀವನ ಶೈಲಿಗೆ ಸ್ತನ ಕ್ಯಾನ್ಸರ್ ಅನ್ನುವುದು ಸಾಮಾನ್ಯವಾದ ಕಾಯಿಲೆಯಂತಾಗಿದೆ. ಆದರೆ ಇದರ ಬಗ್ಗೆ ಹೆದರದೆ ಎಚ್ಚರಿಕೆಯಿಂದ ಆರೋಗ್ಯ ಕಾಪಾಡಿಕೊಂಡರೆ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.
ಸ್ತನ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?
ದೇಹದ ತೂಕ:
ಮೆನೊಪೋಸ್ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ದೇಹದ ತೂಕವನ್ನು ಸರಿಯಾಗಿಸಿಕೊಂಡರೆ ಕ್ಯಾನ್ಸರ್ ನಿಂದ ದೂರ ಉಳಿಯಬಹುದು.
ಮದ್ಯಪಾನ- ಧೂಮಪಾನ:
15 ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಮದ್ಯಪಾನ ಹಾಗೂ ಧೂಮಪಾನಗಳೇ ಕಾರಣ. ಈ ಚಟದಿಂದ ಸ್ತನ ಕ್ಯಾನ್ಸರ್ ಹೆಚ್ಚಾಗಿ ಬಾಧಿಸಲಿದೆ.
ಮಗುವಿಗೆ ಹಾಲುಣಿಸಿ:
ಒಂದು ಅಥವಾ ಹೆಚ್ಚು ವರ್ಷಗಳ ಕಾಲ ಮಗುವಿಗೆ ಹಾಲುಣಿಸುವುದರಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದು.
ಆಕ್ಟಿವ್ ಆಗಿರಿ:
ಪ್ರತಿದಿನ ವ್ಯಾಯಾಮ ಮಾಡುವುದರಿಂದ ಸ್ತನ ಕ್ಯಾನ್ಸರ್ ನಿಂದ ಪಾರಾಗಬಹುದು. ಕನಿಷ್ಠ ವಾರದಲ್ಲಿ 5 ದಿನ 30 ನಿಮಿಷಗಳ ವಾಕಿಂಗ್ ಮಾಡುವುದು ಉತ್ತಮ.
ಕೊಲೆಸ್ಟ್ರಾಲ್ ನಿಯಂತ್ರಣ:
ಕಡಿಮೆ ಕೊಲೆಸ್ಟ್ರಾಲ್ ಹೊಂದಿರುವ ಆರೋಗ್ಯ ಸೇವಿಸುವುದನ್ನು ರೂಢಿಸಿಕೊಳ್ಳಿ. ಇದರಿಂದ ಸ್ತನ ಕ್ಯಾನ್ಸರ್ ನ ಅಪಾಯ ಕಡಿಮೆಯಾಗುತ್ತದೆ.