ಮಂಗಳೂರು: ಯಾವುದೇ ಸಾಹಿತ್ಯದ ರಚನೆ ಮಾತೃ ಭಾಷೆಯ ಸರಿಯಾದ ಋಣ ಸಂದಾಯದ ಅವಕಾಶವಾಗಿದೆ. ನಮ್ಮ ಸುತ್ತಲಿನ ಸಹೋದರ ಭಾಷೆಯಲ್ಲಿ ಸಾಹಿತ್ಯದ ಓದುವ ಹವ್ಯಾಸ ಬಹಳಷ್ಟು ಲಾಭದಾಯಕ ಎಂದು ಹಿರಿಯ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಪಿಂಗಾರ ಸಾಹಿತ್ಯ ಬಳಗದಿಂದ ಮಣಿಪಾಲದ ದಶರಥನಗರದಲ್ಲಿ ಆಂಟನಿ ಲೂವಿಸ್ ಅವರ ಅಂಗಳದಲ್ಲಿ ಇಪ್ಪತ್ತನೆಯ ವರುಷದ ಬಹುಭಾಷಾ ಕವಿ ಗೋಷ್ಟಿಯ ಅಧ್ಯಕ್ಷರಾಗಿ ಮಾತನಾಡಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ವಾಗತದ ಮಾತನಾಡಿದ ಡಾ ಸುರೇಶ ನೆಗಳಗುಳಿ ಮಾತನಾಡಿ ಸಾಹಿತಿ ಆಗಲು ಆಶಯ, ಆಕ್ರೋಶ, ಅಶಾಭಾವಗಳು ಬೇಕು ಮತ್ತು ಓದುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು.
ಕನ್ನಡ, ಕೊಂಕಣಿ, ತುಳು, ತೆಲುಗು, ಹಿಂದಿ ಪಂಚಭಾಷಾ ಕವಿಗೋಷ್ಟಿಗೆ ಹಿರಿಯ ಕೊಂಕಣಿ ಸಾಹಿತಿ ಡಾ ನಾಗೇಶ್ ಕುಮಾರ್ ಚಾಲನೆ ನೀಡಿ ಕವಿತೆ ಹಾಡಿದರು.
ಪನ್ವಾರ್ ಕೊಂಕಣಿ ಮಾನಸಿಕ ಸಂಪಾದಕರಾದ ಜ್ಞಾನದೇವ್ ಮಲ್ಯಾ ಕವಿಗಳಿಗೆ ಪುಸ್ತಕ ನೀಡಿದರು. ಎಲ್ಲಾ ಕವಿಗಳಿಗೆ ನೂರ ಒಂದು ರೂಪಾಯಿ ದಕ್ಷಿಣೆ ತಾಂಬೂಲ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಅನಿತಾ ಸಿಕ್ವೇರಾ ವಂದಿಸಿದರು. ಡಾಕ್ಟರೇಟ್ ಪ್ಲಾವಿಯಾ ಕ್ಯಾಸ್ಟಲಿನೊ ನಿರೂಪಿಸಿದರು.ಕವಿಗಳಾದ ವಿನೋದ ಪ್ರಕಾಶ್ ಪಡುಬಿದ್ರಿ, ಸುಮಾಕಿರಣ್ ಬಸ್ರೂರು, ಪ್ರೆಮಾ ಆರ್ ಶೆಟ್ಟಿ ಮುಲ್ಕಿ, ಯಶೋಧ ಗಾಣಿಗ ಕುಂದಾಪುರ, ವಸಂತಿ ಅಂಬಪಾಡಿ, ಕೆ ವಾಣಿಶ್ರೀ ಆಶೋಕ್ ಐತಾಳ್, ದಿಯಾ ಉದಯ್ ಡಿಯು, ನೇಹನ್ ಕ್ರಾಸ್ಟಾ ಉಡುಪಿ, ವ ಉಮೇಶ್ ಕಾರಂತ ಕುಂದಾಪುರ, ಮಂಜುನಾಥ ಗುಡ್ಮಿ, ಆಶ್ವಿನಿ ಕೆ, ಮಾಲತಿ ರಮೇಶ್ ಕೆಮ್ಮಣ್ಣು, ಪ್ರೇಮ ಬಸನಗೌಡ ಬಿರಾದಾರ, ಅನಿತಾ ಸಿಕ್ವೇರಾ, ಡಾಕ್ಟರೇಟ್ ಪ್ಲಾವಿಯಾ ಕ್ಯಾಸ್ಟಲಿನೊ, ಜ್ಞಾನದೇವ್ ಮಲ್ಯಾ ಮಣಿಪಾಲ, ಡಾ ನಾಗೇಶ್ ಕುಮಾರ್, ರೇಮಂಡ್ ಡಿಕೂನಾ ತಾಕೊಡೆ, ಡಾ ಸುರೇಶ ನೆಗಳಗುಳಿ ಮತ್ತು ಆಂಟನಿ ಲೂಯಿಸ್ ತಮ್ಮ ಕವಿತೆಗಳು ಸಾಧರಪಡಿಸಿದರು. ಜ್ಯೋತಿ ಲೂವಿಸ್ ಮತ್ತು ಆಲನ್ ಸಿಕ್ವೇರಾ ಸಹಕರಿದರು.