ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಷ್ಯ ತುಂಬಾ ಟ್ರೆಂಡಿಂಗ್ ಆಗಿದೆ. ಅದೇನೆಂದರೆ ಫೋಟೋಶೂಟ್. ತುಂಬಾ ಜನರಿಗೆ ಸಿನಿಮಾ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಕೂಡಾ ಇಂತಹ ಫೋಟೋಶೂಟ್ಗಳಿಂದ. ಹಾಗೆಯೇ ಅದೆಷ್ಟೋ ಜನರು ಟ್ರೊಲ್ ಪೇಜ್ಗಳಿಗೆ ಆಹಾರವಾಗುತ್ತಿರುವುದು ಸುಳ್ಳಲ್ಲ.
ಸುಮಾರು ವರ್ಷಗಳ ಹಿಂದೆ ಒಂದು ಮದುವೆ ಮಾಡುವುದು ಅಂದ್ರೆ ದೊಡ್ಡ ಕೆಲಸ, ಅದರಲ್ಲೂ ಸಾಮಾನ್ಯ ಜನರಿಗೆ ಇಡೀ ಜೀವನ ಪರ್ಯಂತ ದುಡಿದ ಹಣ ಮದುವೆಯಲ್ಲೇ ಖರ್ಚಾಗುತ್ತಿತ್ತು.
ಹಾಗೆಯೇ ಮದುವೆಯ ನಂತರ ಒಂದು ಸಣ್ಣ ಫೋಟೋ ಆಲ್ಬಮ್. ಆಮೇಲೆ ಸಿಡಿ, ಡಿವಿಡಿ ಬಂತು. ಆದರೆ ಇವಾಗೆಲ್ಲ ಡಿಜಿಟಲ್ ಯುಗ ಪ್ರಿವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಮತ್ತು ವೆಡ್ಡಿಂಗ್, ಪ್ರತಿ ತಿಂಗಳಿಗೊಮ್ಮೆ ಸೆಲೆಬ್ರೇಶನ್ ಹೀಗೆ ನಡೀತಾನೆ ಇರುತ್ತೆ. ಕೆಲವು ಫೋಟೋಶೂಟ್ಗಳಂತೂ ಹೀಗೂ ಮಾಡಬಹುದಾ ಅನ್ನೋ ರೀತಿಯಲ್ಲಿ ಇರುತ್ತವೆ.
ಇತೀಚಿಗೆ ಅರೆ ಬೆತ್ತಲಾಗಿ ಫೋಟೋ ಶೂಟ್, ಕೆಸರಿನಲ್ಲಿ ಫೋಟೋ ಶೂಟ್, ನೀರಿನಲ್ಲಿ ಫೋಟೋ ಶೂಟ್, ಗದ್ದೆಯಲ್ಲಿ, ಸಂತೆಯಲ್ಲಿ, ಮರ್ಡರ್ ನಡೆದಂತೆ ಹೀಗೆ ವಿಚಿತ್ರ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಪೋಟೋ ವೈರಲ್ ಆಗುವಂತೆ ಮಾಡುತ್ತಿದ್ದಾರೆ.
ಕಳೆದ ಬಾರಿ ಫಿಲಿಪೈನ್ಸ್ ನ ಜೋಡಿಗಳಿಬ್ಬರೂ ಕೆಸರು ಗದ್ದೆಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಸಖತ್ ವೈರಲ್ ಆಗಿತ್ತು. ಅಲ್ಲಿ ಇಬ್ಬರೂ ಸಹ ಕೃಷಿಕ ಕುಟುಂಬದಿಂದ ಬಂದಿರೋದರಿಂದ ವ್ಯವಸಾಯದ ಬಗ್ಗೆ ಹೆಚ್ಚು ಮಹತ್ವ ನೀಡಲು ಗದ್ದೆಯಲ್ಲಿ, ಕೆಸರನ್ನು ಮೈಗೆ ಅಂಟಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದರು. ಆದರೆ ಇಲ್ಲಿ ಒಂದು ಜೋಡಿ ಅದಕ್ಕೂ ಒಂದು ಹೆಜ್ಜೆ ಮುಂದೆ ಬಂದಿದೆ.
ಹೌದು, ಇಲ್ಲಿ ಒಂದು ಜೋಡಿ ಕಸ, ಪ್ಲಾಸ್ಟಿಕ್, ಇನ್ನಿತರ ತಾಜ್ಯ ತುಂಬಿರುವ ಮೋರಿಯಲ್ಲಿ ಈ ಜೋಡಿ ಫೋಟೋ ತೆಗೆಸಿಕೊಂಡಿದೆ. ವಿಭಿನ್ನವಾಗಿ ಇರಬೇಕೋ ಅಥವಾ ಅರಿವು ಮೂಡಿಸಲೋ ಗೊತ್ತಿಲ್ಲ ಆದರೂ ಈ ಮಾದರಿಯ ವಿಚಿತ್ರ ಫೋಟೋಶೂಟ್ಗಳನ್ನು ನೋಡಿದವರೆಲ್ಲಾ ಇದೇನಪ್ಪ ವಿಚಿತ್ರ ಅಂತಿದ್ದಾರೆ