ಮಂಗಳೂರು: ರಾಜಕೀಯದಲ್ಲಿ ಯಾವುದೂ ಶಾಶ್ವತ ಹಾಗೂ ಅಸಾಧ್ಯ ಇಲ್ಲ.ರಾಜಕಾರಣ ಸಾಧ್ಯತೆಗಳ ಕಲೆ, ಹೀಗಾಗಿ ಇಲ್ಲಿ ಬದಲಾವಣೆ ವಿಶ್ವಾಸವಿದೆ.ಹೀಗಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡ್ತಾ ಇದೀವಿ ಎಂದು ಕಾಂಗ್ರೆಸ್ ಸಮಾವೇಶ ಮೈದಾನದ ಬಳಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಈ ಭಾಗದಲ್ಲಿ ನಾವು ಗೆಲ್ಲೋ ಸಾಧ್ಯತೆ ಹೆಚ್ಚಿದೆ.ಇಲ್ಲಿ ನಿರುದ್ಯೋಗ ಇದೆ, ಇಲ್ಲಿನ ಜನ ಬೇರೆ ಕಡೆ ಉದ್ಯೋಗಕ್ಕೆ ಹೋಗ್ತಾ ಇದಾರೆ. ಸೌದಿ, ಬೆಂಗಳೂರು, ಮುಂಬೈ ಕಡೆ ಇಲ್ಲಿನವರು ಹೋಗ್ತಾ ಇದಾರೆ.
ಇಲ್ಲಿ ಎಷ್ಟೇ ಶಿಕ್ಷಣ ಸಂಸ್ಥೆಗಳಿದ್ರೂ ಮಕ್ಕಳು ಡ್ರಾಪ್ ಔಟ್ ಆಗ್ತಿದಾರೆ.ಇಲ್ಲಿ ಧರ್ಮ ರಾಜಕೀಯ ಇದೆ, ಬಿಜೆಪಿ ಅಭಿವೃದ್ಧಿ ಮಾಡ್ತಾ ಇಲ್ಲ.ಈ ಜಿಲ್ಲೆಯ ಬಗ್ಗೆ ನಾವು ಹೊಸ ಅಲೋಚನೆ ಮಾಡ್ತೀವಿ ಉದ್ಯೋಗ ಸೃಷ್ಟಿಸ್ತೇವೆ, ಸಂಜೆ ಏಳು ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ.ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು.ಇಲ್ಲಿನ ಬ್ಯಾಂಕ್ ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗ್ತಾ ಇದೆ.
ದೇವಸ್ಥಾನಗಳಲ್ಲಿ ಭಕ್ತಿಯಿಂದ ಇರ್ತಾರೆ, ಅದೇ ವ್ಯವಹಾರಗಳಲ್ಲೂ ಇರಬೇಕು.ಜೆರೋಸಾ ಶಾಲೆ ವಿಚಾರದಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತೆ.ಯಾರೇ ರಾಜಕೀಯ ಮಾಡಿದ್ರೂ ಕಾನೂನು ಕೆಲಸ ಮಾಡಲಿದೆ. ಅವರು ಹೋರಾಟ ಮಾಡ್ತಾ ಇರಲಿ, ಕಾನೂನು ಕೆಲಸ ಮಾಡುತ್ತೆ.
ನಮ್ಮ ರಾಜ್ಯಕ್ಕೆ ಅನ್ಯಾಯ ಆದಾಗ ಬಿಜೆಪಿ ಮಾತನಾಡಿಲ್ಲ.ಬಿಜೆಪಿ ರಾಜಕಾರಣ ಮಾಡ್ತಾ ಇದೆ.ನಾನು ದೇವೇಗೌಡ, ಕುಮಾರಸ್ವಾಮಿ ವಿರುದ್ದ ನಿಂತಿದ್ದವನು.ಅನಿತಾ ಕುಮಾರಸ್ವಾಮಿ ನನ್ನ ಸಹೋದರನ ವಿರುದ್ದ ನಿಂತರೂ ಗೆದ್ದಿದ್ದಾನೆ.
ಬಿಜೆಪಿ-ಜೆಡಿಎಸ್ ಒಟ್ಟಾಗಿ ನನ್ನ ಸಹೋದರನ ವಿರುದ್ದ ನಿಂತಾಗಲೂ ಗೆದ್ದಿದ್ದಾನೆ. ಸುರೇಶ್ ದೆಹಲಿಯಲ್ಲಿ ಕೂರೂವ ಎಂಪಿ ಅಲ್ಲ, ಅವನು ಹಳ್ಳಿಯ ಎಂಪಿ.ಸುರೇಶ್ ಗೆ ಪ್ರತ್ಯೇಕವಾದ ಮತದಾರರ ಭಾವನೆ ಗೊತ್ತಿದೆ.
ದೇವೇಗೌಡ, ಕುಮಾರಸ್ವಾಮಿ ನಮ್ಮಲ್ಲಿ ಎಂಪಿ ಆಗಿದ್ದರು. ಹಳೆಯ ಎಂಪಿಗಳು ಹಾಗೂ ಈ ಎಂಪಿಯ ವ್ಯತ್ಯಾಸ ಜನ ನೋಡಿದ್ದಾರೆ.
ಪ್ರತೀ ಹಳ್ಳಿ, ರಸ್ತೆ, ಅಭಿವೃದ್ಧಿ, ಮನೆಗಳ ಅಭಿವೃದ್ಧಿ ಆಗಿದೆ.ಯಾರನ್ನೇ ನಿಲ್ಲಿಸಿದ್ರೂ ಮತದಾರ ಉತ್ತರ ಕೊಡ್ತಾನೆ, ಮತದಾರ ಪ್ರಜ್ಞಾವಂತ ಇದಾನೆ.
ಕುಮಾರಸ್ವಾಮಿ ನಿಂತರೂ ನನಗೆ ಯಾವುದೇ ಬೇಜಾರಿಲ್ಲ.ಯಾರೇ ನಿಂತರೂ ನಾವು ಸ್ವಾಗತ ಮಾಡ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.