ಇತ್ತೀಚಿಗೆ ನಾವು ಅನೇಕ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಗಳನ್ನು ಬಳಸುತ್ತೆವೆ. ಅದರಲ್ಲಿ ಸಾಕಷ್ಟು ವೈಶಿಷ್ಟ್ಯಗಳಿರುತ್ತವೆ. ಈ ವೈಶಿಷ್ಟ್ಯಗಳು ನಮಗೆ ಸಾಕಷ್ಟು ರೀತಿಯಲ್ಲಿ ಸಹಾಯ ಕೂಡಾ ಮಾಡುತ್ತದೆ. ಅಂತೆಯೇ, ಟೆಲಿಗ್ರಾಮ್ ನಲ್ಲಿರುವ ಒಂದು ವೈಶಿಷ್ಟ್ಯದ ಬಗ್ಗೆ ಇಲ್ಲಿ ತಿಳಿಯಬಹುದಾಗಿದೆ.
ವಾಟ್ಸಾಪ್ ರೀತಿಯಲ್ಲಿಯೇ ಟೆಲಿಗ್ರಾಮ್ ಅನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಟೆಲಿಗ್ರಾಮ್ ಕೂಡಾ ತನ್ನ ಬಳಕೆದಾರರಿಗೆ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡುತ್ತಲೇ ಇದೆ. ಅದರಲ್ಲಿ ಒಂದು ಟ್ರಾನ್ಸ್ಲೇಷನ್ ಅರ್ಥಾತ್ ಭಾಷೆಯನ್ನು ಅನುವಾದ ಮಾಡುವಂತಹ ವೈಶಿಷ್ಟ್ಯ ಪ್ರಮುಖವಾಗಿದೆ.
ಅಂದರೆ, ಬಳಕೆದಾರರು ಭಾಷೆಯನ್ನು ಅನುವಾದ ಮಾಡಲು ಅಪ್ಲಿಕೇಷನ್ನಿಂದ ಹೊರಹೋಗದೆ ಯಾವುದೇ ಸಂದೇಶವನ್ನು ತಮ್ಮ ಡಿಫಾಲ್ಟ್ ಭಾಷೆಗೆ ಸುಲಭವಾಗಿ ಅನುವಾದಿಸಿಕೊಳ್ಳಬಹುದು. ಈ ಸೌಲಭ್ಯ ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಸುವವರಿಗೂ ಮಾತ್ರ ಇದನ್ನು ಉಪಯೋಗಿಸಬಹುದಾಗಿದೆ. ಈ ವೈಶಿಷ್ಟ್ಯವನ್ನು ಸೆಟಿಂಗ್ ಮಾಡಿಕೊಳ್ಳಬೇಕಾಗುತ್ತದೆ.
ಈ ಮೆಸೇಜಿಂಗ್ ಪ್ಲಾಟ್ಫಾರ್ಮ್ ಅನ್ನು ಜಾಗತಿಕವಾಗಿ ಬಳಸಲಾಗುತ್ತಿದೆ. ಹೀಗಾಗಿ, ಪ್ರಪಂಚದಾದ್ಯಂತದ ಜನರೊಂದಿಗೆ ಆಗಾಗ ಸಂವಾದ ನಡೆಸುವ ಜನರಿಗೆ ಈ ಇದು ತುಂಬಾ ಉಪಯುಕ್ತವೂ ಆಗಿದೆ. ಬೇರೆ ದೇಶದ ಭಾಷೆಗಳನ್ನು ಇಂಗ್ಲೀಷ್ ಅಥವಾ ಲಿಸ್ಟ್ನಲ್ಲಿರುವ ನಿಮಗೆ ಬೇಕಾದ ಭಾಷೆಗೆ ಅನುವಾದ ಮಾಡಿಕೊಂಡು ನೀವು ಓದಲೂಬಹುದು. ಈ ಅಪ್ಲಿಕೇಷನ್ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಕೊರಿಯನ್ ಸೇರಿ 19 ಭಾಷೆಗಳನ್ನು ಬೆಂಬಲಿಸುವ ಅವಕಾಶ ಇದರಲ್ಲಿ ಇದೆ.
ಅಂತೆಯೇ ನೀವು ಕೂಡಾ ಈ ವೈಶಿಷ್ಟ್ಯವನ್ನು ಬಳಸಲು ಬಯಸಿದರೆ ಅದನ್ನು ಸೆಟ್ ಮಾಡಲು ಈ ರೀತಿ ಆಗಿ ಮಾಡಿ.
ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸ್ಮಾರ್ಟ್ಫೋನ್ನಲ್ಲಿ ಟೆಲಿಗ್ರಾಮ್ ಅಪ್ಲಿಕೇಷನ್ ಓಪನ್ ಮಾಡಿ.
ಪೇಜ್ ನ ಮೇಲ್ಭಾಗದಲ್ಲಿರುವ ‘ಮೂರು-ಸಾಲು’ ಐಕಾನ್ ಮೇಲೆ ಟ್ಯಾಪ್ ಮಾಡಿ.
ಸೆಟ್ಟಿಂಗ್ಗೆ ಹೋಗಿ ಅಲ್ಲಿ ಭಾಷೆಯನ್ನು ಕ್ಲಿಕ್ ಮಾಡಿ
ಭಾಷೆಯ ಮೆನುವಿನ ಮೇಲ್ಭಾಗದಲ್ಲಿ, ನಿಮಗೆ ‘Show Translate Button’ ಎಂಬುದು ಕಾಣುತ್ತದೆ. ಅದನ್ನು ಆನ್ ಮಾಡಿ
Show Translate ಬಟನೆ ಕೆಳಗೆ.
`ಅನುವಾದಿಸಬೇಡಿ’ (Do Not Translate)
ಎಂಬ ಇನ್ನೊಂದು ಆಯ್ಕೆ ಕೂಡಾ ನಿಮಗೆ.
ಕಾಣಿಸುತ್ತದೆ. ಇಲ್ಲಿ ನಿಮಗೆ ಅನುವಾದಿಸಲು
ಬೇಡದ ಭಾಷೆಗಳನ್ನು ಆಯ್ಕೆ
ಮಾಡಿಕೊಳ್ಳಲೂಬಹುದು
ಇದಾದ ಬಳಿಕ ನೀವು ಸಂದೇಶವನ್ನು ಅನುವಾದಿಸಲು ಬಯಸುವ ವೈಯಕ್ತಿಕ ಚಾಟ್ ಅಥವಾ ಗುಂಪು ಚಾಟ್ಗೆ ಹೋಗಿ ನಿಮ್ಮ ಡಿಫಾಲ್ಟ್ ಭಾಷೆಗೆ ನೀವು ಅನುವಾದಿಸಲು ಬಯಸುವ ಸಂದೇಶದ ಮೇಲೆ ಟ್ಯಾಪ್ ಮಾಡಿ ಪಾಪ್-ಅಪ್ ಮೆನುವಿನಲ್ಲಿ ಕಾಣಿಸುವ ಟ್ರಾನ್ಸ್ಲೇಟ್ ಅನ್ನು ಟ್ಯಾಪ್ ಮಾಡಿ.