ಸಾಮಾನ್ಯವಾಗಿ ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಕೂಡ ಇರುವೆಗಳು ಕೆಲವೊಮ್ಮೆ ಬಂದು ಬಿಡುತ್ತವೆ. ಇರುವೆ ಬರದಂತೆ ತಡೆಯಲು ಹಲವಾರು ಔಷಧಗಳಿದ್ದರೂ ಅವುಗಳಿಂದ ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತದೆ. ಆದರೆ ಮನೆ ಮದ್ದುಗಳನ್ನು ಬಳಸುವುದರಿಂದ ಯಾವುದೇ ರೀತಿಯ ಹಾನಿಯಿಲ್ಲದೆ, ಇರುವೆ ಬರದಂತೆ ನೋಡಿಕೊಳ್ಳಬಹುದಾಗಿದೆ.
ಇರುವೆಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕಾಣಿಸಿಕೊಳ್ಳುತ್ತವೆ. ಜೊತೆಗೆ ಆಹಾರ ಪದಾರ್ಥಗಳನ್ನು ಇಟ್ಟು ಸ್ವಲ್ಪ ಹೊತ್ತಿನಲ್ಲಿಯೇ ಅದಕ್ಕೆ ಮುತ್ತಿಕೊಳ್ಳುತ್ತೇವೆ. ಆದರೆ ಮನೆ ಮದ್ದುಗಳನ್ನು ಬಳಸುವುದರಿಂದ ಯಾವುದೇ ರೀತಿಯ ಹಾನಿಯಿಲ್ಲದೆ ಇರುವೆ ಬರದಂತೆ ನೋಡಿಕೊಳ್ಳಬಹುದು.
ಮಳೆ ಬಿಳುತ್ತಿದ್ದಂತೆ, ಇರುವೆಗಳು ತಂಪಾದ ಸ್ಥಳಗಳನ್ನು ಹುಡುಕುತ್ತವೆ, ಸಾಮನ್ಯವಾಗಿ ಮನೆಯ ಅಡುಗೆಮನೆ ಮತ್ತು ವಾಶ್ ರೂಮ್ ನಂತಹ ಸ್ಥಳಗಳನ್ನು ಇವು ಆವರಿಸಿಕೊಂಡಿರುತವೆ. ಇವು ಸಣ್ಣ ಸಣ್ಣ ಗೂಡುಗಳನ್ನು ಮಾಡಿಕೊಳ್ಳುವ ಮೂಲಕ ಮುತ್ತಿಗೆ ಹಾಕುತ್ತವೆ. ಅದಲ್ಲದೆ ಆಹಾರ ಪದಾರ್ಥಗಳನ್ನು ಹಾಳು ಮಾಡುತ್ತವೆ. ಹಾಗಾಗಿ ಅವುಗಳನ್ನು ದೂರವಿರಿಸಲು ಕೆಲವು ಸುಲಭ ಸಲಹೆಗಳು ಇಲ್ಲಿವೆ.
ಇರುವೆಗಳ ಪ್ರವೇಶ ದ್ವಾರಗಳಲ್ಲಿ ಸ್ವಲ್ಪ ಸುಣ್ಣದ ಪುಡಿಯನ್ನು ಸಿಂಪಡಿಸಿ ಅಥವಾ ಅದರಲ್ಲಿಯೇ ಗೆರೆಯನ್ನು ಎಳೆದರೆ ಇರುವೆಗಳು ದೂರ ಓಡುತ್ತವೆ.
ಇರುವೆಗಳು ಬರುವ ಜಾಗದಲ್ಲಿ ನಿಂಬೆ ರಸವನ್ನು ಹಿಂಡಿ ಅಥವಾ ಕೆಲವು ನಿಂಬೆಯ ಸಿಪ್ಪೆಗಳನ್ನು ತುಂಡು ಮಾಡಿ ಇರಿಸಿ. ಇರುವೆಗಳು ನಿಂಬೆಯ ವಾಸನೆಯನ್ನು ಇಷ್ಟಪಡದ ಕಾರಣ ಇರುವೆಗಳು ಬರುವುದಿಲ್ಲ. ಅಥವಾ ನೀವು ನೆಲವನ್ನು ಒರೆಸುವ ನೀರಿನಲ್ಲಿ ನಿಂಬೆ ರಸವನ್ನು ಸೇರಿಸಿಯೂ ನೆಲವನ್ನು ಸ್ವಚ್ಛಗೊಳಿಸು ತುಂಬಾ ಉತ್ತಮವಾದದ್ದು.
ಇರುವೆಗಳು ಸಕ್ಕರೆಯನ್ನು ಪ್ರೀತಿಸುತ್ತವೆ ಆದರೆ ಮೆಣಸನ್ನಲ್ಲ. ಆದ್ದರಿಂದ, ನಿಮ್ಮ ಮನೆಯ ಇರುವೆ ಬರುವ ಸ್ಥಳಗಳಲ್ಲಿ ಸ್ವಲ್ಪ ಮೆಣಸನ್ನು ಅಥವಾ ಮೆಣಸಿನ ಹುಡಿಯನ್ನು ಸಿಂಪಡಿಸಿದರೆ ಇರುವೆ ಸಾಧ್ಯತೆ ಕಡಿಮೆ ಇರುತ್ತದೆ.
ಬಿಳಿ ವಿನೆಗರ್ ನ್ನು ನೀರಿನ ದ್ರಾವಣದಲ್ಲಿ ಮಿಶ್ರಣ ಮಾಡಿ ಮತ್ತು ಅದಕ್ಕೆ ಕೆಲವು ಸಾರಭೂತ ತೈಲಗಳನ್ನು ಸೇರಿಸಿ. ಇರುವೆಗಳು ಪ್ರವೇಶಿಸುವ ಜಾಗದಲ್ಲಿ ಪ್ರತಿದಿನ ಈ ದ್ರಾವಣವನ್ನು ಸಿಂಪಡಿಸುತ್ತಾ ಇರುವುದರಿಂದ ಇರುವೆಗಳು ಹತ್ತಿರ ಬರುವುದಿಲ್ಲ.
ಪುದೀನಾ, ಕೀಟ ನಿವಾರಕವಾಗಿದೆ ಏಕೆಂದರೆ ಇದು ಬಲವಾದ ಪರಿಮಳವನ್ನು ಹೊಂದಿದ್ದು, ಅಂತಹ ಪರಿಮಳಗಳನ್ನು ಇರುವೆಗಳು ಸಹಿಸಿಕೊಳ್ಳುವುದಿಲ್ಲ.
ಇರುವೆಗಳನ್ನು ನೈಸರ್ಗಿಕವಾಗಿ ತೊಡೆದು ಹಾಕಲು ಉಪ್ಪು ಅತ್ಯುತ್ತಮ ಮತ್ತು ಅಗ್ಗದ ಮಾರ್ಗವಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ನೀರನ್ನು ಕುದಿಸಿ ಮತ್ತು ನೀರಿಗಿಂತ ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇರಿಸಿ. ನಂತರ ಇರುವೆ ಬರುವ ಕಡೆಗಳಲ್ಲಿ ಸಿಂಪಡಿಸಿದರೆ ಇರುವೆ ಬರುವುದನ್ನು ತಡೆಯಬಹುದು.