ಏಷ್ಯನ್ ಗೇಮ್ಸ್ಗೂ ಮುಂಚಿತವಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಮೂರು ಪಂದ್ಯಗಳ T20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಅದಕ್ಕಾಗಿ ಬಿಸಿಸಿಐ ಮುಂಬರುವ ಸರಣಿಗೆ ಬಲಿಷ್ಠ ತಂಡವನ್ನು ಈಗಾಗಲೇ ಪ್ರಕಟಿಸಿದೆ.
ಎಲ್ಲಾ 6 ಪಂದ್ಯಗಳೂ ಮೀರ್ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹರ್ಮನ್ಪ್ರೀತ್ ಕೌರ್ ಏಕದಿನ ಹಾಗೂ ಟಿ20 ಎರಡೂ ಸ್ವರೂಪದಲ್ಲೂ ಟೀಂ ಇಂಡಿಯಾವನ್ನು ನಾಯಕಿ ಸ್ಥಾನದಲ್ಲಿ ನಿಂತು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿ ಪ್ರದರ್ಶನ ನೀಡಲಿದ್ದಾರೆ.
ಹಿರಿಯ ವೇಗಿ ಶಿಖಾ ಪಾಂಡೆ, ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ರೇಣುಕಾ ಸಿಂಗ್ ಠಾಕೂರ್ ಹಾಗೂ ಬ್ಯಾಟರ್ ರಿಚಾ ಘೋಷ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ರಾಧಾ ಯಾದವ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರಿಗೂ ಸರಣಿಯಿಂದ ಕೊಕ್ ನೀಡಲಾಗಿದ್ದು, ಅನುಭವಿ ಸ್ಪಿನ್ನರ್ಗಳನ್ನ ತಂಡದಲ್ಲೇ ಉಳಿಸಿಕೊಂಡು ಬಿಸಿಸಿಐ ಈ ಪಂದ್ಯವನ್ನು ಆಡಿಸಲಿದೆ.
ಜುಲೈ 9, 11 ಮತ್ತು ಜು.13 ರಂದು ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಮತ್ತು ಜುಲೈ 16, 19 ಮತ್ತು 22 ರಂದು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ ಪ್ರಕಟಿಸಲಾಗಿದೆ.
ಭಾರತದ ಟಿ20 ತಂಡ:
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಎಸ್ ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಮಿನ್ನು ಮಣಿ.
ಭಾರತ ಏಕದಿನ ತಂಡ:
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅಮಾನ್ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಸ್ನೇಹ ರಾಣಾ.