ಮಕ್ಕಳಿಗೆ ಹೊರೆಯಾಗುತ್ತಿರುವ ಸ್ಕೂಲ್ ಬ್ಯಾಗ್ ಗಳು. ಶಾಲಾ ಮಕ್ಕಳಿಗೆ ಒದುವುದು ಬರೆಯುವುದಕ್ಕಿಂತಲೂ ಹೊರೆ ಎನಿಸಿರಿವುದು ಪುಸ್ತಕದ ಹೊರೆ. ಸಣ್ಣ ವಯಸ್ಸಿನಲ್ಲಿಯೇ ಬಾರವಾದ ಬ್ಯಾಗ್ನ್ನು ಹೊತ್ತು ದಿನಾಲು ಶಾಲೆಗೆ ಹೋಗುವುದು. ಮೈಲಿ ಗಟ್ಟಲೆ ನಡೆದು ಹೋಗುವವರಿಗೆ ಒಂದು ಸಾಹಸದ ಕೆಲಸವೇ ಸರಿ.ಇನ್ನು ಬಸ್ಸಿನಲ್ಲಿ ಓಡಾಡುವುದು ಅಂತೂ ಇನ್ನು ಶೋಚನಿಯ ಸಂಗತಿ.
೨೦೧೯-೨೦ನೇ ಸಾಲಿನಲ್ಲಿ ಸರಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ೧ರಿಂದ ೧೦ ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕವು ವಿದ್ಯಾರ್ಥಿಯ ದೇಹದ ಸರಾಸರಿ ತೂಕದ ಶೇ.೧೦ರಷ್ಟು ಮೀರಬಾರದು ಎಂದು ರಾಜ್ಯ ಸರಕಾರ ಆದೇಶಿಸಿತ್ತು. ಕೇಂದ್ರ ಸರಕಾರದ ಸೂಚನೆಯನ್ನು ಪಾಲಿಸಲು ರಾಜ್ಯ ಸರಕಾರ ಎಲ್ಲ ಕ್ರಮ ಕೈಗೊಂಡಿತ್ತು.
ಪ್ರತಿ ತಿಂಗಳಿನ ಮೂರನೇ ಶನಿವಾರವನ್ನು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಅಂದು ಶಿಕ್ಷಕರು ಪಠ್ಯಪುಸ್ತಕ ಅಥವಾ ಇತರ ಪೂರಕ ಸಾಮಗ್ರಿಗಳ ಅವಶ್ಯಕತೆಯಿಲ್ಲದೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿತ್ತು.
ಆದರೆ ಈ ಕ್ರಮಗಳನ್ನು ಗಾಳಿಗೆ ತೂರಿದಂತೆ ಕಾಣುತ್ತಿದೆ. ಮಕ್ಕಳ ಪುಸ್ತಕದ ಹೊರೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗಮನಿಸಿದಂತೆ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಪುಸ್ತಕಗಳನ್ನು ಸ್ಕೂಲ್ ನಲ್ಲಿಯೇ ಇರಿಸುತ್ತಾರೆ. ಹೋಮ್ ವರ್ಕ್ ಕೊಟ್ಟಿರುವಂತಹ ಪುಸ್ತಕಗಳನ್ನು ಮಾತ್ರ ಮನೆಗೆ ಕೊಟ್ಟು ಕಳುಹಿಸುತ್ತಾರೆ.
ಆದರೆ ಕೆಲವು ಸ್ಕೂಲ್ಗಳಲ್ಲಿ ಈ ಒಂದು ದಿನಚರಿಯನ್ನು ಶಿಕ್ಷಕರು ಪಾಲಿಸಿಕೊಂಡು ಬಂದಿರದ ಕಾರಣ ವಿದ್ಯಾರ್ಥಿಗಳು ಹೊರೆಯನ್ನು ಹೊರಬೇಕಾದ ಪರಿಸ್ಥಿತಿ ಬಂದಿದೆ. ಕಟ್ಟು ನಿಟ್ಟಾಗಿ ಪ್ರತಿ ಸ್ಕೂಲ್ ನ ಶಿಕ್ಷಕರು ಮಕ್ಕಳ ಪುಸ್ತಕವನ್ನು ಶಾಲೆಯಲ್ಲಿ ಇರಿಸಿ ಅಗತ್ಯವಾದ ಪುಸ್ತಕಗಳನ್ನು ನೀಡಿ ಮಕ್ಕಳ ಪುಸ್ತಕದ ಬಾರವನ್ನು ಇಳಿಸುವುದರ ಬಗ್ಗೆ ಯೋಚನೆ ಮಾಡಲೇ ಬೇಕು.