ಮೈಸೂರು: “ವಿಶೇಷಚೇತನರನ್ನುತಲುಪುವುದು ಹಾಗೂ ಅವರನ್ನು ಒಳಗೊಳ್ಳುವುದು ಅತ್ಯಂತ ಮಹತ್ವದಕಾರ್ಯವಾಗಿದೆ. ಸಮಾಜದಎಲ್ಲ ಅಂಶಗಳು ಹಾಗೂ ವಿಭಾಗಗಳಲ್ಲಿ ವಿಶೇಷಚೇತನರು ಸಂಪೂರ್ಣ ಭಾಗಿಗಳಾಗಿದ್ದಾರೆ ಎಂಬುದನ್ನುಖಚಿತಪಡಿಸುವಲ್ಲಿ ಸಾಮ್ಯತೆ ಹಾಗೂ ಏಕತೆಯ ಪಾತ್ರತುಂಬಾದೊಡ್ಡದಾಗಿದೆ.ಸಮಾಜದ ಮುಖ್ಯವಾಹಿನಿಯಲ್ಲಿ ವಿಶೇಷಚೇತನರನ್ನು ಸೇರ್ಪಡೆಗೊಳಿಸುವುದು ಇಂದಿನ ಅಗತ್ಯ” ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಗೋವಾ ರಾಜ್ಯಆಯುಕ್ತರಾದಗುರುಪ್ರಸಾದ್ ಪಾವಸ್ಕರ್ ಹೇಳಿದರು.
ಸಮಗ್ರ ಶಿಕ್ಷಣದ ಕುರಿತು ಮೈಸೂರಿನ ಅಮೃತ ವಿಶ್ವವಿದ್ಯಾಪೀಠಂನಲ್ಲಿ ನಡೆಯುತ್ತಿರುವ ಎರಡನೇ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿಚಾರ ಸಂಕಿರಣದ ಮುಖ್ಯಆಶಯವಾದ ವಿಶೇಷ ಚೇತನರಿಗೆ ನ್ಯಾಯಯುತ ಹಾಗೂ ಸಮಗ್ರ ಪರಿಸರವನ್ನು ನಿರ್ಮಿಸುವ ಅಗತ್ಯತೆಯನ್ನು ಪಾವಸ್ಕರ್ ಪುಷ್ಟೀಕರಿಸಿದರು. ವಿಕಲಾಂಗ ವ್ಯಕ್ತಿಗಳ ಹಕ್ಕುಗಳನ್ನು ಪ್ರಚುರಪಡಿಸುವ ಅವರ ಅಂತರ್ದೃಷ್ಟಿ ಹಾಗೂ ಬದ್ಧತೆಗಳು ಸಂಪೂರ್ಣ ಸಮಾಜದ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತವೆ.
ನ್ಯೂಯಾರ್ಕ್ನಅಡೆಲ್ಫಿ ವಿಶ್ವವಿದ್ಯಾನಿಲಯದ ವಿಶೇಷ ಶಿಕ್ಷಣ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಪವನ್ಜಾನ್ ಆಂಟನಿಯವರು ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ವಿಕಲಾಂಗರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಸಹಕಾರ ಮಾದರಿಯ ಪ್ಯಯತ್ನಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿದವರು ಇಲ್ಲಿ ಪಡೆದ ಜ್ಞಾನ ಹಾಗೂ ಸೂಕ್ಷ್ಮ ಪರಿಜ್ಞಾನಗಳನ್ನು ಶೈಕ್ಷಣಿಕ ಪದ್ಧತಿ ಹಾಗೂ ನೀತಿಗಳಲ್ಲಿ ಮೂರ್ತ ಸ್ವರೂಪದ ಬದಲಾವಣೆಗಳನ್ನು ತರಲು ವಿನಿಯೋಗಿಸಬೇಕು ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.
ನ್ಯೂಯಾರ್ಕ್ನಅಡೆಲ್ಫಿ ವಿಶ್ವವಿದ್ಯಾನಿಲಯದ ವಿಶೇಷ ಶಿಕ್ಷಣ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಸ್ಟೀಫನ್ ಎಮ್ ಶೋರ್ ವಿಚಾರ ಸಂಕಿರಣದ ಆಶಯ ಭಾಷಣವನ್ನು ಮಾಡಿದರು. ತಮ್ಮ ಭಾಷಣದಲ್ಲಿಆಟಿಸಂನ 4 ‘ಎ’ ಗಳ ಚೌಕಟ್ಟು ಬಗ್ಗೆ ವಿವರಿಸಿದರು. ಆಟಿಸಂಹಾಗೂ ನ್ಯೂರೋಡೈವಜೆðಟ್ ಇರುವವ್ಯಕ್ತಿಗಳು ವಯಸ್ಕ ಹಂತಕ್ಕೆ ಬರುವಸಮಯದಲ್ಲಿಆಟಿಸಂನ 4 ʼಎʼಗಳಚೌಕಟ್ಟು ಒದಗಿಸ ಬಹುದಾದ ಮಹತ್ವಪೂರ್ಣ ಕೌಶಲಗಳು ಹಾಗೂ ತಂತ್ರಗಳ ಬಗ್ಗೆ ಅವರು ಮಾಹಿತಿ ನೀಡಿದರು. ಈ ಫ್ರೇಮ್ ವರ್ಕ್ಅರಿವು, ಸ್ವೀಕಾರ, ಹೊಗಳಿಕೆ, ಕ್ರಿಯೆ (ಅವೇರ್ನೆಸ್, ಅಕ್ಸೆಪ್ಟನ್ಸ್, ಅಪ್ರಿಸಿಯೇಶನ್, ಆಕ್ಷನ್) ಗಳ ಬಗ್ಗೆ ಇದು ವಿಶದೀಕರಿಸಿದ್ದು ನ್ಯೂರೋಡೈವರ್ಜೆಂಟ್ ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಅವರಿಗೆ ಸಹಾಯ ಮಾಡುವ ಪರಿಪೂರ್ಣ ವಿಧಾನವನ್ನು ಈ ಫ್ರೇಮ್ವರ್ಕ್ ವಿವರಿಸುತ್ತದೆ.
ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ಅಸೋಸಿಯೇಟ್ ಡೀನ್ ಪ್ರೊ.ಶೇಖರ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಪ್ರೊ.ಬಾಬು ಅವರು ವಿಚಾರ ಸಂಕಿರಣದ ಉದ್ದೇಶಗಳು, ಗುರಿಗಳು ಹಾಗೂ ಸಮಗ್ರ ಶಿಕ್ಷಣಕ್ಕೆ ಉತ್ತೇಜನ ಮತ್ತು ವಿಶೇಷಚೇತನರನ್ನು ಒಳಗೊಳ್ಳುವ ಮಹತ್ವದಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಶೇಷ ಶಿಕ್ಷಣಕ್ಕೆ ಮಹತ್ವ ನೀಡುವ ಹಾಗೂ ಶಿಕ್ಷಣ ಕ್ಷೇತ್ರದ ಪರಿಣತರಿಗೆ, ಸಂಶೋಧಕರಿಗೆ ಸಂಪನ್ಮೂಲ ಒದಗಿಸುವದೃಷ್ಟಿಯಿಂದ ಲೋಕಾರ್ಪಣೆಗೊಳಿಸಲಾಯಿತು. ಜೆ.ಪಿ. ಗಡ್ಕರಿಯವರʼ ಎರಾ ಆಫ್ ಅವೇಕನಿಂಗ್ ಆಫ್ಪರ್ಸನ್ಸ್ವಿತ್ಡಿಸ್ ಎಬಿಲಿಟಿಸ್ʼ, ಪವನ್ ಜಾನ್ಆಂಟನಿ ಮತ್ತು ಸ್ಟೀಫನ್ಶೋರ್ರವರʼ ಟೀಚಿಂಗ್ಅಂಡ್ ಸಪೋಟಿðಗ್ ಸ್ಟೂಡೆಟ್ಸ್ವಿತ್ಡಿಸ್ ಎಬಿಲಿಟಿಸ್ಡ್ಯುರಿಂಗ್ ಟೈಮ್ಆಫ್ ಕ್ರೈಸಿಸ್ʼ, ನವಲ್ಪಂತ್ರವರʼಆನ್ಅನ್ಪ್ಲಾನ್ಡ್ಜರ್ನಿʼ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ವಿಚಾರ ಸಂಕಿರಣವು ವಿವಿಧ ಕ್ಷೇತ್ರಗಳ ಪರಿಣತರು, ಶಿಕ್ಷಣ ತಜ್ಞರನ್ನುಒಂದೇ ವೇದಿಕೆಗೆ ತಂದಿದ್ದು, ವಿಕಲ ಚೇತನರಿಗೆ ಸಂಬಂಧಿಸಿದ ಸಮಗ್ರ ಶಿಕ್ಷಣಕ್ಕೆ ಪೂರಕವಾಗುವ ವಿವಿಧ ತಂತ್ರಗಳನ್ನು, ಯೋಜನೆಗಳನ್ನು ಚರ್ಚಿಸಲು ಅವಕಾಶ ನೀಡಿತು. ವಿಚಾರ ಸಂಕಿರಣದ ಮುಖ್ಯಆಶಯಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗೋಷ್ಠಿಗಳು, ಪ್ಯಾನೆಲ್ಡಿಸ್ಕಶನ್, ಪೋಸ್ಟರ್ ಪ್ರೆಸೆಂಟೇಶನ್ಗಳು ನಡೆದವು. ಒಟ್ಟು 47 ವಿಚಾರಗೋಷ್ಠಿಗಳು ಆಯೋಜನೆಗೊಂಡಿದ್ದು, ವಿಶೇಷಚೇತನರನ್ನು ಒಳಗೊಂಡಂತೆ 14 ಅಂತರಾಷ್ಟ್ರೀಯ ವಿಚಾರತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಂವಾದ, ಸಹಕಾರಯೋಜನೆ, ಹೊಸ ಕಲ್ಪನೆಗಳು ಪ್ರಸ್ತುತಗೊಂಡವು. ದೇಶ ವಿದೇಶಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು. ಸಾಮಾಜಿಕ-ಭಾವನಾತ್ಮಕಯೋಗಕ್ಷೇಮ, ಸ್ವತಂತ್ರಜೀವನ, ಸ್ವಯಂ ಪ್ರತಿಪಾದನೆ, ವೃತ್ತಿಕ್ಷೇತ್ರದಲ್ಲಿ ನ್ಯೂರೋ ಡೈವರ್ಸಿಟಿ, ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ, ಉನ್ನತಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಶೋಧನಾತ್ಮಕ ಲೇಖನಗಳನ್ನು ಪ್ರಸ್ತುತ ಪಡಿಸಲಾಯಿತು.
ಈ ವಿಚಾರ ಸಂಕಿರಣವುಯುಎಸ್ಎನ ನ್ಯೂಯಾರ್ಕ್ನಕಾಲೇಜ್ಆಫ್ಎಜ್ಯುಕೇಶನ್ಅಂಡ್ ಹೆಲ್ತ್ ಸೈನ್ಸಸ್, ಅಡೆಲ್ಫಿಯುನಿವರ್ಸಿಟಿ; ಕೆನಡಾದ ವೆಸ್ಟರ್ನ್ ವಿಶ್ವವಿದ್ಯಾನಿಲಯಮತ್ತು ಬೇಬೆರಿಇನ್ಕಾರ್ಪೋರೇಶನ್ನ ಸಂಯುಕ್ತಾಶ್ರಯದಲ್ಲಿ ನಡೆದಿದೆ.
ವಿಚಾರ ಸಂಕಿರಣ ಪೂರ್ವಕಾರ್ಯಾಗಾರ:
ಸಮಗ್ರ ಶಿಕ್ಷಣದ ಕುರಿತಎರಡನೇಅಂತರಾಷ್ಟ್ರೀಯ ವಿಚಾರ ಸಂಕಿರಣದ ಪೂರ್ವಭಾವಿಯಾಗಿಜುಲೈ 25ರಂದು ವಿಚಾರ ಸಂಕಿರಣ ಪೂರ್ವಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯೂಯಾರ್ಕ್ನಅಡೆಲ್ಫಿ ವಿಶ್ವವಿದ್ಯಾನಿಲಯದ ವಿಶೇಷ ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾದಡಾ.ಪವನ್ಜಾನ್ಆಂಟನಿ ವಿಚಾರ ಸಂಕಿರಣ ಪೂರ್ವಕಾರ್ಯಾಗಾರವನ್ನು ಉದ್ಘಾಟಿಸಿದರು. ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಸಮುದಾಯಆಧಾರಿತಅಂಗವೈಫಲ್ಯ ನಿರ್ವಹಣೆಯಯುನೆಸ್ಕೊಚೇರ್ನ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಬೇಬಿ ಶಾರಿ ಪಿ.ಎ. ಕಾರ್ಯಾಗಾರದಆಶಯ ಭಾಷಣವನ್ನು ಮಾಡಿದರು.