ಮಂಗಳೂರು: ಸಂಯುಕ್ತ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಅರ್ಪಿಸುವ ‘ಕಡಲನಾಡ ಸಂಗೀತೋತ್ಸವ 2024’ ಸಂಗೀತ ದಿಗ್ಗಜರ ಮಹಾಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 20, 3024 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಲನಚಿತ್ರ ಸಂಗೀತ ಗಾಯಕರು ಮತ್ತು ನಿರ್ದೇಶಕರಾದ ವಿ ಮನೋಹರ್, ಗುರುಕಿರಣ್. ಮಣಿಕಾಂತ್ ಕದ್ರಿ ಹಾಗೂ ಅನುರಾಧ ಭಟ್ ಸಾರಥ್ಯದಲ್ಲಿ ಕರಾವಳಿಯ ಅತೀ ದೊಡ್ಡ ಸಂಗೀತ ಹಬ್ಬ ಪ್ರಪ್ರಥಮ ಬಾರಿಗೆ ಸ್ಟಾರ್ ಮ್ಯೂಸಿಕಲ್ ನೈಟ್ ನಡೆಯಲಿದೆ.
ಈ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರು, ರಾಷ್ಟ್ರ ಪ್ರಶಸ್ತಿ ವಿಜೇತರು ರಮೇಶ್ಚಂದ್ರ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯುಕ್ತ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಮಂಗಳೂರು ಅಧ್ಯಕ್ಷರು ಕೆ.ಕೆ ನೌಶದ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ, ನಿರ್ಮಾಪಕರು-ನಿರ್ದೇಶಕರು ವಿಜಯ ಕುಮಾರ್ ಕೊಡಿಯಾಲ್ ಬೈಲ್, ಖ್ಯಾತ ಚಲನಚಿತ್ರ ನಟ, ನಿರ್ಮಾಪಕರು-ನಿರ್ದೇಶಕರು ಡಾ| ದೇವದಾಸ್ ಕಾಪಿಕಾಡ್, ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟ, ದ.ಕ.-ಉಡುಪಿ ಕಾರ್ಯಾಧ್ಯಕ್ಷರು ಸಿ.ಎಚ್.ಖಾಲಿದ್ ಉಜಿರೆ,ಭಂಡಾರಿ ಬಿಲ್ಢರ್ಸ್ ಮ್ಹಾಲಕರು ಲಕ್ಷ್ಮೀಶ್ ಭಂಡಾರಿ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ದ.ಕ.-ಉಡುಪಿ ಅಧ್ಯಕ್ಷರು ದೀಪಕ್ ರಾಜ್ ಉಳ್ಳಾಲ್, ನಮ್ಮ ಟಿ.ವಿ. ವಾಹಿನಿ ನಿರ್ದೇಶಕರು ಕದ್ರಿ ಶಿವಶರಣ್ ಶೆಟ್ಟಿ, ವಿ4 ನ್ಯೂಸ್ ವಾಹಿನಿ ನಿರ್ದೇಶಕರು ಲಕ್ಷ್ಮಣ್ ಕುಂದರ್, ಉದ್ಯಮಿ,ಸಮಾಜ ಸೇವಕರು ಲತೀಫ್ ಗುರುಪುರ,ಖ್ಯಾತ ಚಲನಚಿತ್ರ ನಟ ಭೋಜರಾಜ ವಾಮಂಜೂರು,ಉದಯೋನ್ಮುಖ ಚಲನಚಿತ್ರ ನಟ ಅನೂಪ್ ಸಾಗರ್,ದ.ಕ. ಜಿಲ್ಲಾ ಕ್ಯಾಟರರ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷರು ಸುಧಾಕರ್ ಕಾಮತ್,ದ.ಕ. ಜಿಲ್ಲಾ ಕ್ಯಾಟರರ್ ಅಸೋಸಿಯೇಶನ್ ದೀಪಕ್ ಕೋಟ್ಯಾನ್,ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು ಲ.ಡಾ.ಇ.ಕೆ.ಎ ಸಿದ್ದೀಕ್ ಅಡ್ಡೂರ್,ಖ್ಯಾತ ಕೊಂಕಣಿ ಗಾಯಕರು ಪ್ರೇಮ್ ಕುಮಾರ್ ಲೋಬೊ ಇವರು ಆಗಮಿಸಲಿದ್ದಾರೆ.
ಈ ಸಂಗೀತ ಹಬ್ಬದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಪ್ರಖ್ಯಾತ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ದಿನ ಪೂರ್ತಿ ಈ ಸಂಗೀತ ಹಬ್ಬವು ನಡೆಯಲಿದೆ.