ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.
ಓಷನ್ಗೇಟ್ ಎಕ್ಸ್ಪೆಡಿಶನ್ಸ್ ನಿರ್ವಹಿಸುವ ಟೈಟಾನ್ ಸಬ್ಮರ್ಸಿಬಲ್ ಅಟ್ಲಾಂಟಿಕ್ ಸಾಗರದಲ್ಲಿ ಒಳಗಡೆ ಟೈಟಾನಿಕ್ ಅವಶೇಷಗಳ ಬಳಿ ಸ್ಪೋಟಗೊಂಡಿದೆ. ಅದರಲ್ಲಿದ್ದ ಬ್ರಿಟನ್ನ ಹಮೀಶ್ ಹಾರ್ಡಿಂಗ್, ಸ್ಟಾಕ್ಟನ್ ರಶ್ , ಪಾಲ್ ಹೆನ್ರಿ, ಪಾಕಿಸ್ತಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಪುತ್ರ ಸುಲೇಮಾನ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಅಟ್ಲಾಂಟಿಕ್ನಲ್ಲಿ ಭಾನುವಾರ ಬೆಳಿಗ್ಗೆ ಟೈಟಾನಿಕ್ ಅವಶೇಷದ ಕಡೆಗೆ ಪ್ರಯಾಣ ಆರಂಭಿಸಿದ್ದ ಟೈಟಾನ್ ಸಬ್ಮರ್ಸಿಬಲ್, ಸಂಪರ್ಕವನ್ನು ಕಳೆದುಕೊಂಡಿತ್ತು. ನಾಲ್ಕು ದಿನಗಳು ಕಳೆದರೂ ಪತ್ತೆಯಾಗಿರಲಿಲ್ಲ ಹಾಗೆಯೇ ಸಬ್ಮರ್ಸಿಬಲ್ ನ ಒಳಗೆ ಗರಿಷ್ಠ 96 ಗಂಟೆಗಳ ಕಾಲ ಸಾಕಾಗುವಷ್ಟು ಮಾತ್ರ ಆಮ್ಲಜನಕವಿತ್ತು. ಆದರಿಂದ ನಿನ್ನೆ ಸಂಜೆಯ ಸುಮಾರು 7ಗಂಟೆಗೆ ಆಮ್ಲಜನಕ ಖಾಲಿಯಾಗಿರಬಹುದು ಎಂದು ಹೇಳಲಾಗುತ್ತಿದೆ.
ಕಳೆದ 3-4 ದಿನಗಳಿಂದ ಅಮೆರಿಕ ಹಾಗೂ ಕೆನಡಾ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸಿದರು ಸಬ್ಮರ್ಸಿಬಲ್ ಪತ್ತೆಯಾಗಿರಲಿಲ್ಲ. ಆದರೆ ಈಗ ಅಮೆರಿಕ ನೌಕಾಪಡೆಯ ಸಿಬ್ಬಂದಿಗೆ ನಾಪತ್ತೆಯಾಗಿರುವ ಟೈಟಾನಿಕ್ ಜಲಾಂತರ್ಗಾಮಿಯ ಅವಶೇಷಗಳು ಕಾಣಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದ ಶ್ರೀಮಂತರು ದಾರುಣ ಅಂತ್ಯವನ್ನು ಕಂಡಿದ್ದಾರೆ. ಇನ್ನು ಈ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡುವುದಕ್ಕೆ ಹೋಗಲು ಜಗತ್ತಿನ ಶ್ರೀಮಂತರಿಗಷ್ಟೆ ಸಾಧ್ಯ ಎಂದು ಹೇಳಲಾಗುತ್ತಿದೆ. ಒಂದು ಸಾರಿ ಹೋಗಿ ಟೈಟಾನಿಕ್ ಅವಶೇಷ ನೋಡಿ ಬರಲು ಒಂದು ಟಿಕೆಟ್ ಬೆಲೆ 2.5 ಲಕ್ಷ ಅಮೆರಿಕನ್ ಡಾಲರ್, ಅಂದರೆ ಬರೊಬ್ಬರಿ 2 ಕೋಟಿ ರುಪಾಯಿ.
ಮೃತಪಟ್ಟವರ ವಿವರ:
ಸ್ಟಾಕ್ಟನ್ ರಶ್ :
ಸ್ಟಾಕ್ಟನ್ ರಶ್ ಓಷನ್ಗೇಟ್ ಎಕ್ಸ್ಪೆಡಿಶನ್ಸ್ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು, ಓಷನ್ಗೇಟ್ ಎಕ್ಸ್ಪೆಡಿಶನ್ಸ್ ವಾಷಿಂಗ್ಟನ್ ರಾಜ್ಯ ಮೂಲದ ಕಂಪನಿಯಾಗಿದ್ದು, ಇದು ಪ್ರವಾಸಿ ಡೈವ್ಗಳನ್ನು ನಿರ್ವಹಿಸುತ್ತದೆ ಮತ್ತು 2009 ರಲ್ಲಿ ಸ್ಥಾಪಿಸಲಾಯಿತು.
ಪಾಲ್-ಹೆನ್ರಿ ನರ್ಜಿಯೊಲೆಟ್:
“ಮಿಸ್ಟರ್ ಟೈಟಾನಿಕ್” ಎಂಬ ಅಡ್ಡಹೆಸರು, ಫ್ರೆಂಚ್ ಜಲಾಂತರ್ಗಾಮಿ ಆಪರೇಟರ್ ಪಾಲ್-ಹೆನ್ರಿ ನಾರ್ಜಿಯೊಲೆಟ್ ಹಡಗಿನ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು. 25 ವರ್ಷಗಳ ಕಾಲ ಫ್ರೆಂಚ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು.
ಹಮಿಶ್ ಹಾರ್ಡಿಂಗ್:
58 ವರ್ಷದ ಹಮಿಶ್ ಹಾರ್ಡಿಂಗ್, ಮೂರು ಗಿನ್ನೆಸ್ ವಿಶ್ವ ದಾಖಲೆಗಳೊಂದಿಗೆ ಬ್ರಿಟಿಷ್ ವಾಯುಯಾನ ಉದ್ಯಮಿಯಾಗಿದ್ದರು. ಒಂದು ವರ್ಷದ ಹಿಂದೆ, ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ಕಂಪನಿಯ ಮೂಲಕ ಬಾಹ್ಯಾಕಾಶ ಪ್ರವಾಸ ಮಾಡಿದ್ದರು.
ಶಹಜಾದಾ ಮತ್ತು ಸುಲೇಮಾನ್ ದಾವೂದ್:
ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದಾ ದಾವೂದ್ (48) ಕರಾಚಿಯ ಪ್ರಧಾನ ಕಚೇರಿಯ ಸಂಘಟಿತ ಎಂಗ್ರೋದ ಉಪಾಧ್ಯಕ್ಷರಾಗಿದ್ದರು. ಅವರ ಮಗ ಸುಲೇಮಾನ್ (19) ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು ಮತ್ತು ಇಬ್ಬರೂ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದರು.
ಟೈಟಾನಿಕ್ ದುರಂತದ ಕುಟುಂಬಸ್ಥನೇ ಪೈಲಟ್:
ಸ್ಟಾಕ್ಟನ್ ರಶ್ಎಂಬವರು ನಾಪತ್ತೆಯಾಗಿರುವ ಜಲಾಂತರ್ಗಾಮಿಯ ಪೈಲಟ್. ಟೈಟಾನಿಕ್ ಹಡಗಿನಲ್ಲಿ ಮುಳುಗಿ ಸತ್ತಿರುವ ಶ್ರೀಮಂತ ಕುಟುಂಬಗಳಲ್ಲಿ ಇವರ ಪತ್ನಿ ವೆಂಡಿ ರಶ್ ಕುಟುಂಬವು ಇದೆ. ಟೈಟಾನಿಕ್ ದುರಂತದಲ್ಲಿ ವೆಂಡಿ, ತಮ್ಮ ಪೂರ್ವಜರನ್ನ ಕಳೆದುಕೊಂಡಿದ್ದರು. ಈಗ ಅದರ ಅವಶೇಷಗಳನ್ನು ತೋರಿಸಲು ಹೋಗಿದ್ದ ಅವರ ಪತಿಯನ್ನು ಕಳೆದುಕೊಂಡಿದ್ದಾರೆ.