ಮಂಗಳೂರು : ಇದೇಜುಲೈ 25 ರಿಂದ 27 ರವರೆಗೆಅಮೃತ ವಿಶ್ವವಿದ್ಯಾಪೀಠಂ ಮೈಸೂರುಕ್ಯಾಂಪಸ್ನಲ್ಲಿ ಸಮಗ್ರ ಶಿಕ್ಷಣ ಕುರಿತಾದಎರಡನೇಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಈ ದ್ವೈವಾರ್ಷಿಕ ವಿಚಾರ ಸಂಕಿರಣವು ನ್ಯೂಯಾರ್ಕ್ನಅಡೆಲ್ಫಿ ವಿಶ್ವವಿದ್ಯಾನಿಲಯದ ಕಾಲೇಜ್ಆಫ್ಎಜುಕೇಶನ್ ಅಂಡ್ ಹೆಲ್ತ್ ಸೈನ್ಸಸ್, ಕೆನಡಾದ ವೆಸ್ಟರ್ನ್ ವಿಶ್ವವಿದ್ಯಾನಿಲಯ ಹಾಗೂ ಅಮೇರಿಕಾದ ಬೇಬೆರಿ ಸಂಸ್ಥೆಯ ಸಹಯೋಗದೊಂದಿಗೆ ನಡೆಯಲಿದೆ.
ಈ ವಿಚಾರ ಸಂಕಿರಣವು ವಿಚಾರ ಸಂಕಿರಣ ಪೂರ್ವಕಾರ್ಯಾಗಾರದ ಮೂಲಕ ಜುಲೈ 25ರಂದು ಬೆಳಿಗ್ಗೆ 9.30 ಕ್ಕೆ ಉದ್ಘಾಟನೆಗೊಳ್ಳಲಿದೆ. “ವಿಕಲಾಂಗ ವ್ಯಕ್ತಿಗಳ ಧ್ವನಿಗಳು” ಎಂಬ ಆಶಯದೊಂದಿಗೆ ಅನೇಕ ವಿಷಯಗಳು ಈ ವಿಚಾರ ಸಂಕಿರಣದಲ್ಲಿ ಚರ್ಚೆಗೊಳಗಾಗಲಿವೆ.
ಈ ವಿಚಾರ ಸಂಕಿರಣದಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಕರ್ನಾಟಕ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಗೋವಾ ರಾಜ್ಯಆಯುಕ್ತರಾದ ಗುರುಪ್ರಸಾದ್ ಪಾವಸ್ಕರ್, ನ್ಯೂಯಾರ್ಕ್ನಅಡೆಲ್ಫಿ ವಿಶ್ವವಿದ್ಯಾನಿಲಯದ ವಿಶೇಷ ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಸ್ಟೀಫನ್ ಶೋರೆ ಹಾಗೂ ಡಾ. ಪವನ್ಜಾನ್ಆಂಟನಿ, ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಸಮುದಾಯ ಆಧಾರಿತ ಅಂಗವೈಫಲ್ಯ ನಿರ್ವಹಣೆ ಯಯುನೆಸ್ಕೋಚೇರ್ನ ಪ್ರಾಧ್ಯಾಪಕರಾದ ಪ್ರೊ. ಬೇಬಿ ಶರಿಪಿ.ಎ., ಕೆನಡಾದ ವೆಸ್ಟರ್ನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಫಿನೋಶ್ ತಂಕಂ ಹಾಗೂ ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್ನ ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು ಅವರು ಭಾಗವಹಿಸಲಿದ್ದಾರೆ.
ಸಮಗ್ರ ಶಿಕ್ಷಣ ತಂತ್ರಗಳು ಹಾಗೂ ಅಂಗವಿಕಲ ವ್ಯಕ್ತಿಗಳ ಸಬಲೀಕರಣದ ಕುರಿತಾದ ಒಳನೋಟಗಳನ್ನು ಚರ್ಚಿಸಲು ಮತ್ತು ಹಂಚಿಕೊಳ್ಳಲು ಈ ವಿಚಾರ ಸಂಕಿರಣವು ವೇದಿಕೆಯಾಗಲಿದೆ.
ಆಸಕ್ತರುರೂ. 1770 ನ್ನು ಪಾವತಿಸಿ ವಿಚಾರ ಸಂಕಿರಣಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 8680896988 ಅಥವಾ 8086497290 ಸಂಪರ್ಕಿಸಬಹುದಾಗಿದೆ.