ಹೆಣ್ಣುಮಕ್ಕಳಿಗೆ ಮದುವೆಗೂ ಮುನ್ನ ತಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ನಿಮ್ಮ ಮದುವೆ ದಿನವೂ ಹತ್ತಿರ ಬರುತ್ತಿದೆಯಾ? ಹಾಗಿದ್ರೆ ನಿಮ್ಮ ಸ್ಕಿನ್ ಗ್ಲೋಯಿಂಗ್ ಆಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ..
• ನಿದ್ದೆ ಸ್ಕಿಪ್ ಮಾಡದಿರಿ: ಮದುವೆಗೂ ಮುನ್ನ ನಿದ್ದೆಗೆಡಬೇಡಿ, ಇದರಿಂದ ನಿಮಗೆ ಡಾರ್ಕ್ ಸರ್ಕಲ್, ಸ್ಟ್ರೆಸ್ ಹೆಚ್ಚಾಗುವ ಸಾಧ್ಯತೆ ಇದೆ.
• ನಿಮ್ಮ ಆಹಾರದಲ್ಲಿ ಫೈಬರ್ ಅಂಶವಿರಲಿ: ಸೇವಿಸುವ ಆಹಾರದ ಕಡೆ ಗಮನವಿರಲಿ. ಉತ್ತಮ ಆಹಾರದಿಂದ ಪಿಂಪಲ್ಸ್, ಅಸಿಡಿಟಿ ಕಡಿಮೆಯಾಗುತ್ತದೆ.
• ಫೇಶಿಯಲ್ ಟ್ರೀಟ್ ಮೆಂಟ್ ಪಡೆಯುವ ಮುನ್ನ ಎಚ್ಚರವಿರಲಿ: ಸಣ್ಣಪುಟ್ಟ ಕಡೆಗಳಲ್ಲಿ ಫೇಶಿಯಲ್ ಮಾಡಿಸಿಕೊಳ್ಳುವ ಬಗ್ಗೆ ಗಮನವಿರಲಿ. ಇದರಿಂದ ನಿಮ್ಮ ತ್ವಚೆ ಹಾನಿಯಾಗುವ ಸಾಧ್ಯತೆ ಇದೆ.
• ಮಾಯಿಶ್ಚರೈಸರ್, ಸನ್ ಸ್ಕ್ರೀನ್ ತಪ್ಪದೇ ಹಚ್ಚಿ: ಮನೆಯಿಂದ ಹೊರಗೆ ಹೋಗುವ ಮುನ್ನ ತಪ್ಪದೇ ಮಾಯಿಶ್ಚರೈಸರ್ ಮತ್ತು ಸನ್ ಸ್ಕ್ರೀನ್ ಹಚ್ಚಿಕೊಳ್ಳಿ.
• ಕನ್ಸೀಲರ್, ಫೌಂಡೇಶನ್ ಗಳನ್ನು ಸರಿಯಾಗಿ ಬಳಸಿ: ನಿಮ್ಮ ಮದುವೆ ದಿನ ಬಳಸುವ ಕನ್ಸೀಲರ್ ಹಾಗೂ ಫೌಂಡೇಶನ್ ಕ್ರೀಮ್ ಗಳ ಬಗ್ಗೆ ಗಮನವಿರಲಿ. ನಿಮ್ಮ ಸ್ಕಿನ್ ಟೋನ್ ಗೆ ಮ್ಯಾಚ್ ಆಗುವ ಬಣ್ಣ ಬಳಸಿ.
• ಹೆಚ್ಚಾಗಿ ನೀರು ಕುಡಿಯಿರಿ: ಮದುವೆ ಸಮಯದಲ್ಲಿ ದೇಹ ಹೈಡ್ರೇಟ್ ಆಗಿರುವುದು ತುಂಬಾ ಮುಖ್ಯವಾಗುತ್ತದೆ. ಇದರಿಂದ ತ್ವಚೆ ಕ್ಲಿಯರ್ ಹಾಗೂ ಪಿಂಪಲ್ ಫ್ರೀ ಆಗಿರುತ್ತದೆ.