ಮಂಗಳೂರು: ಏಷ್ಯಾದ ಅತಿದೊಡ್ಡ ಹೈಪಮಾರ್ಕೆಟ್ ಲುಲು ಸಮೂಹವು ಮಂಗಳೂರಿನಲ್ಲಿ ತಮ್ಮ ಮೊದಲ ನೇಮಕಾತಿ ಸಂದರ್ಶನವನ್ನು ಏರ್ಪಡಿಸಿದೆ. ಯುಎಇ, ಖತಾರ್, ಬಹ್ರೇನ್, ಮಸ್ಕತ್, ಸೌದಿ ಅರೆಬಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ದೇಶಗಳನ್ನು ಒಳಗೊಂಡಂತೆ ಏಷ್ಯಾದಾದ್ಯಂತ ವ್ಯಾಪಕವಾಗಿ ನಡೆಸುತ್ತಿರುವ ಲುಲು ಸಂಸ್ಥೆ, ಈ ಪ್ರಮುಖ ರಿಟೈಲ್ ಉದ್ಯಮದ ವಿವಿಧ ಹುದ್ದೆಗಳಿಗೆ ಯುವ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ.
ಉದ್ಯೋಗವು ಮಾರಾಟ, ಕೌಂಟರ್ ಮಾರಾಟ ಮತ್ತು ಕ್ಯಾಷಿಯರ್ ಹುದ್ದೆಗಳನ್ನು ಒಳಗೊಂಡರುತ್ತವೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನೌಕರರಾಗಿ ಅನುಭವವಿರುವ ವೃತ್ತಿಪರರು ಮತ್ತು ಪೂರ್ವ ಅನುಭವವಿಲ್ಲದವರು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ ಪಿಯುಸಿಯಾಗಿದ್ದು (ಪ್ರಿ-ಯುನಿರ್ವಸಿಟಿ ಕೋರ್ಸ್), ಅರ್ಜಿದಾರರು 21 ರಿಂದ 28 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಇಂಗ್ಲಿಷ್ನಲ್ಲಿ ಸಂವಹನ ಮಾಡುವುದು ಆಭ್ಯರ್ಥಿಗಳಿಗೆ ಕಡ್ಡಾಯವಾಗಿದೆ.
ಸುಮಾರು 400 ಉದ್ಯೋಗ ಅವಕಾಶಗಳಿದ್ದು, 2023ರ ಜೂನ್ 22 ಮತ್ತು 23ರಂದು ಮಂಗಳೂರಿನ ಫೆರ್ನಾಂಡಿಸ್ ಗ್ರೂಪ್ ಕಛೇರಿಯಲ್ಲಿ ಬೆಳಿಗ್ಗೆ 9-00ರಿಂದ ಸಂಜೆ 6-00ರವರೆಗೆ ಸಂದರ್ಶನವನ್ನು ನಡೆಸಲಾಗುವುದು ಎಂದು ಫೆರ್ನಾಂಡಿಸ್ ಗ್ರೂಪ್ ಸಂಸ್ಥೆಯ ಪ್ರವರ್ತಕರಾದ ವಿಲ್ಸನ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂದರ್ಶನ ಆಫೀಸಿನ ವಿಳಾಸ: ಫೆರ್ನಾಂಡಿಸ್ ಗ್ರೂಪ್, ಮೆಟ್ರೋ ಪ್ಲಾಜಾ, 3ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲಿನ ಮಹಡಿ, ಮೋರ್ ಸೂಪರ್ ಮಾರ್ಕೆಟಿನ ಎದುದುಗಡೆ, ವಾಲೆನ್ಸಿಯಾ, ಮಂಗಳೂರು 575002
ಹೆಚ್ಚಿನ ಮಾಹಿತಿಗಾಗಿ ದೂರವಾಣಿ: +91 9686675463/ 9819044376 ಅಥವಾ www.fernandesgroup.comಗೆ ಭೇಟಿ ನೀಡಬಹುದಾಗಿದೆ.