ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಧಿಕಾ ಪಂಡಿತ್ ಪೋಸ್ಟ್ ಸಾಮಾನ್ಯವಾಗಿ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಸದ್ಯ ಮನೆ, ಮಕ್ಕಳು ಎಂದು ಬ್ಯುಸಿ ಆಗಿರುವ ಈ ನಟಿ ಹಾಕುವ ಪೋಸ್ಟ್ಗಳಿಗೆ ಅಭಿಮಾನಿಗಳು ಕಾಯುತ್ತಿರುತ್ತಾರೆ.
ಇದೀಗ ಅಪ್ಪಂದಿರ ದಿನಾಚರಣೆಯ ಪ್ರಯುಕ್ತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ರಾಧಿಕಾ ಪಂಡಿತ್ ಗಂಡ ರಾಕಿಂಗ್ ಸ್ಟಾರ್ ಯಶ್ ತನ್ನ ಮಗಳು ಅಯ್ರ ಕಾಲಿಗೆ ನೈಲ್ ಪೋಲಿಷ್ ಹಾಕುತ್ತಿರುವುದು, ಮಗ ಅಥರ್ವ ಯಶ್ ಜೊತೆ ಚೆಸ್ ಆಡಲು ಕುಳಿತಿರುವುದು, ಹಾಗೆ ತಮ್ಮ ತಂದೆ, ಮತ್ತು ತನ್ನ ಸಹೋದರನ ಜೊತೆ ಇರುವ ಫ್ಯಾಮಿಲಿ ಫೋಟೋ ಶೇರ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ “ನಾನು ಯಾವಾಗಲೂ ಅಪ್ಪನ ಮಗಳು,ಯಾವಾಗಲು ಏನೇ ಬೇಕಿದ್ದರು ಅವರ ಬಳಿಯೇ ಓಡುತ್ತೇನೆ. ಅವರೇ ನನ್ನ ಮಾರ್ಗದರ್ಶಿ, ಹೀರೋ, ನನ್ನ ಆಧಾರ.ನನ್ನ ಮಕ್ಕಳು ಅವರ ತಂದೆ ಯಶ್ ಜೊತೆಗೆ ಅಂತಹದೆ ಬಂಧವನ್ನು ನೋಡಿದಾಗ ಖುಷಿಯಾಗುತ್ತದೆ” ಎಂದು ಬರೆದುಕೊಂಡಿದ್ದಾರೆ. ಮತ್ತು ಎಲ್ಲರಿಗು ಅಪ್ಪಂದಿರ ದಿನದ ಶುಭಾಶಯ ತಿಳಿಸಿದ್ದಾರೆ.
ಈ ಪೋಸ್ಟ್ ಗೆ ಅಭಿಮಾನಗಳ ಮೆಚ್ಚುಗೆ ಸಿಕ್ಕಿದೆ.