ಬೆಂಗಳೂರು : ಭಾರತದಲ್ಲಿನ ಪ್ರಮುಖ ಜೀವ ವಿಮಾ ಸಂಸ್ಥೆಯಾಗಿರುವ ಎಚ್ಡಿಎಫ್ಸಿ ಲೈಫ್,ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆಯಿಂದ 2024ರಲ್ಲಿ ‘ಕೆಲಸ ಮಾಡಲು ಅತ್ಯುತ್ತಮವಾಗಿರುವ ಭಾರತದ ಕಂಪನಿ’ಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ.
ಕಂಪನಿಯು ಒಟ್ಟಾರೆಯಾಗಿ 11ನೇ ಸ್ಥಾನವನ್ನು ಪಡೆದಿದೆ ಮತ್ತು ‘ಜೀವ ವಿಮೆಯಲ್ಲಿ ಉದ್ಯಮದಲ್ಲಿಯೇ ಅತ್ಯುತ್ತಮ ಕಂಪನಿ’ಎಂದು ಗೌರವಿಸಲ್ಪಟ್ಟಿದೆ. ಕಂಪನಿಯು ದಶಕದ ಕಾಲ ಮನ್ನಣೆಯನ್ನು ಪಡೆದಿದ್ದು, ಪ್ರತಿಷ್ಠಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.
ಭಾರತದ ಮೊದಲ ಖಾಸಗಿ ಜೀವ ವಿಮಾದಾರರಲ್ಲಿ ಒಬ್ಬರಾದ ಎಚ್ಡಿಎಫ್ಸಿ ಲೈಫ್ 32,000 ಉದ್ಯೋಗಿಗಳನ್ನು ಹೊಂದಿದೆ.ಉತ್ಕೃಷ್ಟತೆ, ಜನರ ತೊಡಗಿಸಿಕೊಳ್ಳುವಿಕೆ, ಸಮಗ್ರತೆ, ಗ್ರಾಹಕ ಕೇಂದ್ರಿತತೆ ಮತ್ತು ಸಹಯೋಗದ ಮೌಲ್ಯಗಳ ಮೇಲೆ ಸ್ಥಾಪಿಸಲಾಗಿರುವ ಈ ಸಂಸ್ಥೆಯು ಸಾಂಸ್ಥಿಕ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತದೆ.
ಈ ಪ್ರಮಾಣೀಕರಣವು ಕಂಪನಿಯ ಮೌಲ್ಯಾಧರಿತ ಸಂಸ್ಕೃತಿಯನ್ನು ಮತ್ತು ಎಲ್ಲಾ ಪಾಲುದಾರರಿಗೆ ಮೌಲ್ಯವನ್ನು ತಲುಪಿಸುವ ಕಂಪನಿಯ ಬದ್ಧತೆಗೆ ಸಾಕ್ಷಿಯಾಗಿದೆ.
ಈ ಕುರಿತು ಮಾತನಾಡಿರುವ ಎಚ್ಡಿಎಫ್ಸಿ ಲೈಫ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ವಿಭಾಷ್ ನಾಯಕ್, “2024ರಲ್ಲಿ’ಕೆಲಸ ಮಾಡಲು ಅತ್ಯುತ್ತಮವಾಗಿರುವಭಾರತದ ಕಂಪನಿ’ಗಳಲ್ಲಿ ಒಂದುಮತ್ತು ‘ಜೀವ ವಿಮೆಯಲ್ಲಿ ಉದ್ಯಮದಲ್ಲಿಯೇ ಅತ್ಯುತ್ತಮ ಕಂಪನಿ’ ಎಂದು ಗುರುತಿಸಿಕೊಳ್ಳಲು ನಮಗೆ ಹೆಮ್ಮೆ ಇದೆ. ನಮ್ಮ ತಂಡಗಳ ಶ್ರದ್ಧೆ ಮತ್ತು ಬದ್ಧತೆನಮ್ಮ ಯಶಸ್ಸಿಗೆ ಕಾರಣವಾಗಿದೆ. ನಾವು ಅವರ ಬೆಳವಣಿಗೆಗೆ ಮತ್ತು ಅವರ ಯೋಗಕ್ಷೇಮ ನೋಡಿಕೊಳ್ಳಲು ಬದ್ಧರಾಗಿದ್ದೇವೆ. ಎಲ್ಲಾ ಭಾರತೀಯರಿಗೆ ಆರ್ಥಿಕ ಭದ್ರತೆ ಒದಗಿಸಲು ನಾವು ಶ್ರಮಿಸುತ್ತಿದ್ದೇವೆ ಮತ್ತು 2047ರ ವೇಳೆಗೆ ‘ಎಲ್ಲರಿಗೂ ವಿಮೆ’ ಎಂಬ ನಮ್ಮ ಗುರಿಯನ್ನು ಸಾಧಿಸುವತ್ತ ಗಮನಹರಿಸುತ್ತಿದ್ದೇವೆ” ಎಂದು ಹೇಳಿದರು.