ಆಧಾರ್ನಲ್ಲಿರುವ ತಮ್ಮ ದಾಖಲೆಗಳನ್ನು ಆನ್ಲೈನ್ ಮೂಲಕ ಸಾರ್ವಜನಿಕರು ಉಚಿತ ಅಪ್ಡೇಟ್ ಮಾಡಲು ಜೂನ್ 14ರ ತನಕ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅವಕಾಶ ನೀಡಿತ್ತು. ಆದರೆ ಈಗ ಅವಧಿಯನ್ನು ಸೆಪ್ಟೆಂಬರ್ 14ರ ವರೆಗೆ ಮತ್ತೆ ವಿಸ್ತರಣೆ ಮಾಡಲಾಗಿದೆ.
ಬಳಕೆದಾರರು ದಶಕದ ಹಿಂದೆ ಎಂದರೆ ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಅನ್ನು ಮಾಡಿಸಿದ್ದು, ಮಧ್ಯದಲ್ಲಿ ಅದನ್ನು ನವೀಕರಿಸಿಲ್ಲ ಎಂದಾದರೆ, ನೀಡಲಾಗಿರುವ ಅವಧಿಯೊಳಗೆ ಆಧಾರ್ಕಾರ್ಡ್ನಲ್ಲಿ ವಿಳಾಸ, ಹೆಸರು ಮತ್ತು ಇತರೆ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದುದಾಗಿದೆ.
ಆಧಾರ್ ಅಪ್ಡೇಟ್ ಮಾಡಲು ಮಾನ್ಯತೆ ಇರುವ ಗುರುತಿನ ಪುರಾವೆ ಹಾಗೂ ಆಧಾರ್ನಲ್ಲಿರುವ ವಿಳಾಸದ ಪುರಾವೆ ಒದಗಿಸುವುದು ಕಡ್ಡಾಯವಾಗಿದೆ. ಆಧಾರ್ ದಾಖಲೆಗಳ ಅಪ್ಡೇಟ್ಗೆ ಮಾತ್ರ ಈ ವಿಶೇಷ ಆಫರ್ ಲಭ್ಯವಿದೆ. ಆಧಾರ್ ವಿಳಾಸ ಬದಲಾವಣೆಗೆ ಎಂದಿನಂತೆ ಆನ್ಲೈನ್ನಲ್ಲಿ ಶುಲ್ಕವಿರಲಿದೆ.
ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
*https://myaadhaar.uidai.gov.in/ ಗೆ ಭೇಟಿ ನೀಡಿ
* ಲಾಗಿನ್ ಮಾಡಿ ಮತ್ತು ‘ಹೆಸರು/ಲಿಂಗ/ಹುಟ್ಟಿದ ದಿನಾಂಕ ಮತ್ತು ವಿಳಾಸ ನವೀಕರಣ’ ಆಯ್ಕೆಮಾಡಿ
* ‘ಆಧಾರ್ ಆನ್ಲೈನ್ನಲ್ಲಿ ನವೀಕರಿಸಿ’ ಕ್ಲಿಕ್ ಮಾಡಿ
*ಜನಸಂಖ್ಯಾ ಆಯ್ಕೆಗಳ ಪಟ್ಟಿಯಿಂದ ‘ವಿಳಾಸ’ ಆಯ್ಕೆಮಾಡಿ ಮತ್ತು ‘ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ’ ಕ್ಲಿಕ್ ಮಾಡಿ
*ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.
*ಸೇವಾ ವಿನಂತಿ ಸಂಖ್ಯೆ ರಚನೆಯಾದ ಬಳಿಕ ಅಪ್ಡೇಟ್ ಪ್ರೊಸೆಸಿಂಗ್ ಟ್ರ್ಯಾಕ್ ಮಾಡಲು ಅದನ್ನು ನೆನಪಿಟ್ಟುಕೊಳ್ಳಿ. ನಮೂದಿಸಿದ ಮಾಹಿತಿಯು ನಿಖರವಾಗಿದೆಯೇ ಎಂದು ಪರಿಶೀಲಿಸಿ, ಒಟಿಪಿ ಉಲ್ಲೇಖಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.