ಟ್ರಿಪ್ ಅಂದ್ರೆ ಎಲ್ಲರಿಗೂ ಇಷ್ಟ ಆಗುತ್ತೆ. ಪರಿಸರ, ಬೆಟ್ಟ-ಗುಡ್ಡ, ಡಾಬಾಗಳು, ರೆಸಾರ್ಟ್, ಲಾಂಗ್ ಡ್ರೈವ್ ಹೀಗೆಲ್ಲ ನೆನಪಿಸಿಕೊಂಡರೆ ಸಾಕು ಮನಸ್ಸಿಗೆ ಖುಷಿಯಾಗುತ್ತೆ. ಇನ್ನು ಈ ಟ್ರಿಪ್ ಅನ್ನು ಪ್ಲಾನ್ ಮಾಡಿ ನೀವೊಬ್ಬರೇ ಯಾವುದೇ ಹಿಂಜರಿಕೆ, ಒತ್ತಡವಿಲ್ಲದೆ ಹೊರಟರೆ ಹೇಗಿರಬಹುದು ಅಂತ ಒಮ್ಮೆ ಯೋಚಿಸಿ.
ಒಮ್ಮೆ ತಪ್ಪದೇ ಸೋಲೋ ಟ್ರಿಪ್ ಟ್ರೈ ಮಾಡಿ.. ನೀವು ಟ್ರಿಪ್ ಪ್ಲಾನ್ ಮಾಡುವಾಗ ಈ ಟಿಪ್ಸ್ ಗಳನ್ನು ನೆನಪಿನಲ್ಲಿಡಿ..
• ಮುಂಚಿತವಾಗಿ ಪ್ಲಾನ್ ಮಾಡಿ: ಸ್ಥಳ, ದಿನಾಂಕ ಮತ್ತು ಸ್ಟೇ ಎಲ್ಲಿ ಅನ್ನೋದನ್ನ ಪಕ್ಕಾ ಪ್ಲಾನ್ ಮಾಡಿ.
• ತುಂಬಾ ಲಗೇಜ್ ಬೇಡ. ಆದಷ್ಟು ಲೈಟ್ ಆಗಿರುವ ಲಗೇಜ್ ಇದ್ದರೆ ಎಲ್ಲಾದರೂ ಹೊತ್ತುಕೊಂಡು ಹೋಗಬಹುದು.
• ಆದಷ್ಟು ನೈಟ್ ಜರ್ನಿ ಮಾಡಿ, ಬೆಳಗ್ಗೆ ಹೊತ್ತಿಗೆ ನಿಮ್ಮ ಡೆಸ್ಟಿನೇಷನ್ ರೀಚ್ ಆಗಿರಿ.
• ಅಲ್ಲಿ ಹೊಸ ಸಂಪರ್ಕಗಳನ್ನು ಪಡೆಯುವುದನ್ನು ಮರೆಯಬೇಡಿ. ಇದು ನಿಮಗೆ ಮುಂದೆ ಯಾವತ್ತಾದರೂ ಸಹಾಯವಾಗಲಿದೆ.
• ಅಲ್ಲಿ ವಾಸ ಮಾಡುವ ಜನರನ್ನು ಒಮ್ಮೆ ಭೇಟಿ ಮಾಡಿ ಅವರನ್ನು ಮಾತನಾಡಿಸಿ ಅವರ ಜೀವನದ ಬಗ್ಗೆ ಒಂದಿಷ್ಟು ಚರ್ಚೆ ಮಾಡಿ.
• ಹೊಸತನ್ನು ಕಲಿಯೋದನ್ನು ಮರೆಯಲೇಬೇಡಿ.
• ಎಲ್ಲಿಗೆ ಹೊರಟರು ನಿಮ್ಮ ಅತ್ಯಗತ್ಯ ವಸ್ತುಗಳನ್ನು ಜೊತೆಗೆ ತಗೊಂಡು ಹೋಗೋದನ್ನು ಮರೆಯಬೇಡಿ.
• ಅಲ್ಲಿನ ಸುಂದರ ದೃಶ್ಯಗಳನ್ನು ನಿಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಿರಿ.
• ಅಲ್ಲಿನ ಊಟ ಹಾಗೂ ಭಾಷೆಯನ್ನು ಕಲಿಯಬಹುದು.
• ನಿಮ್ಮ ಕುಟುಂಬದವರಿಗೆ ನೀವಿರುವ ಸ್ಥಳದ ಬಗ್ಗೆ ಮಾಹಿತಿ ಕೊಟ್ಟಿರಿ.
• ನಿಮ್ಮ ದಾಖಲಾತಿಗಳನ್ನು ಸುರಕ್ಷಿತವಾಗಿ ಇಡಿ.