ಆಧಾರ್ನಲ್ಲಿರುವ ತಮ್ಮ ದಾಖಲೆಗಳನ್ನು ಆನ್ಲೈನ್ ಮೂಲಕ ಸಾರ್ವಜನಿಕರು ಉಚಿತ ಅಪ್ಡೇಟ್ ಮಾಡಲು ಜೂನ್ 14ರ ತನಕ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅವಕಾಶ ನೀಡಿದೆ. ಆಧಾರ್ ದಾಖಲೆಗಳ ಅಪ್ಡೇಟ್ಗೆ ಮಾನ್ಯತೆ ಇರುವ ಗುರುತಿನ ಪುರಾವೆ ಹಾಗೂ ಆಧಾರ್ನಲ್ಲಿರುವ ವಿಳಾಸದ ಪುರಾವೆ ಒದಗಿಸುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಧಾರ್ ದಾಖಲೆಗಳ ಅಪ್ಡೇಟ್ಗೆ ಮಾತ್ರ ಈ ವಿಶೇಷ ಆಫರ್ ಲಭ್ಯವಿದೆ. ಆಧಾರ್ ವಿಳಾಸ ಬದಲಾವಣೆಗೆ ಎಂದಿನಂತೆ ಆನ್ಲೈನ್ನಲ್ಲಿ ಶುಲ್ಕವಿದ್ದು, ಉಳಿದ ಮಾಹಿತಿಗಳ ಬದಲಾವಣೆಗೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವುದು ಕಡ್ಡಾಯವಾಗಿದೆ.
ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
ಆಧಾರ್ ದಾಖಲೆಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು https://myaadhaar.uidai.gov.in/ ಪೋರ್ಟಲ್ಗೆ ಭೇಟಿ ನೀಡಿ ಪರಷ್ಕರಣೆ ಮಾಡಬಹುದು. ಈ ಅವಕಾಶ ಜೂನ್14ರವರೆಗೆ ಮಾತ್ರ ಇರಲಿದೆ. ಆಧಾರ್ ಕೇಂದ್ರಕ್ಕೆ ಹೋಗಿ ದಾಖಲೆಗಳನ್ನು ಅಪ್ಡೇಟ್ ಮಾಡಲು ಬಯಸಿದರೆ ಮೊದಲಿನಂತೆಯೇ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ತಿಳಿಸಿದೆ.
ಆನ್ಲೈನ್ ವಿಳಾಸ ಅಪ್ಡೇಟ್ಗೆ ಮಾತ್ರ ಅವಕಾಶ:
ಆನ್ಲೈನ್ಲ್ಲಿ ಆಧಾರ ವಿಳಾಸವನ್ನು 50 ರೂ. ಶುಲ್ಕ ಪಾವತಿ ಮಾಡಿ ಅಪ್ಡೇಟ್ ಮಾಡಲು ಅವಕಾಶವಿದೆ. ಇದಕ್ಕೆ ಜೂನ್ 14ರವರೆಗೂ ಹಾಗೂ ನಂತರವೂ ಶುಲ್ಕದಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ.ಇದರ ಹೊರತಾಗಿ ಹೆಸರು, ಲಿಂಗ, ಜನ್ಮ ದಿನಾಂಕ, ಪೋಟೋ, ಮೊಬೈಲ್ ನಂಬರ್ ಮತ್ತು ಬಯೋಮೆಟ್ರಿಕ್ಗಳನ್ನು ಪರಿಷ್ಕರಿಸಲು ಸಾರ್ವಜನಿಕರು ಸಮೀಪದ ಆಧಾರ್ ಕೇಂದ್ರಕ್ಕೆ ತೆರಳಲೇಬೇಕು. ಇವುಗಳನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡಲು ಸಾಧ್ಯವಿಲ್ಲ. ಆಧಾರ್ ಕೇಂದ್ರಕ್ಕೆ ತೆರಳಿ ಅಪ್ಡೇಟ್ ಮಾಡಿಸಿದರೆ 50 ರೂ. ಶುಲ್ಕವನ್ನು ತೆರಬೇಕಾಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ತಿಳಿಸಿದೆ.