ಮಂಗಳೂರು: ಅಯೋಧ್ಯೆಯಲ್ಲಿ ರಾಷ್ಟ್ರ ಮಂದಿರವಾಗಿ ರಾಮ ಮಂದಿರ ನಿರ್ಮಾಣ ಆಗಿದೆ. ನ್ಯಾಯಾಲಯದ ತೀರ್ಪಿನ ಆದೇಶದಂತೆ ಮಂದಿರ ನಿರ್ಮಾಣ ಆಗಿದೆ ಎಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಮಂದಿರ ಹಿಂದೂಗಳ ಭಾವನೆ ಮಾತ್ರವಲ್ಲ ಇಡೀ ರಾಷ್ಟ್ರದ ಭಾವನೆ ಅಯೋಧ್ಯೆಯ ಹೋರಾಟದ ಸಂದರ್ಭದಲ್ಲೇ ಕಾಂಗ್ರೆಸ್ ಟೀಕೆ ಮಾಡಿತ್ತು.ರಾಮನ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿತ್ತು ಕಾಂಗ್ರೆಸ್ ಗೆ ಈ ದೇಶದ ಸಂಸ್ಕೃತಿಯ ಬಗ್ಗೆ ಗೌರವವಿಲ್ಲ ,ಈ ದೇಶದ ಆದರ್ಶ ಪುರುಷರ ಬಗ್ಗೆ ನಂಬಿಕೆಗಳಿಲ್ಲ.ಈ ದೇಶದ ಪುರಾಣ ಮತ್ತು ಇತಿಹಾಸದ ಬಗ್ಗೆ ನಂಬಿಕೆಯಿಲ್ಲದ ಪಕ್ಷ ಕಾಂಗ್ರೆಸ್ ಕೇವಲ ಮತದ ಆಸೆಗೋಸ್ಕರ ತುಷ್ಟೀಕರಣ ನೀತಿಯನ್ನು ಅವಲಂಬಿಸುತ್ತಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಯಾಕೆ ಟಾಯ್ಲೆಟ್ ಕಟ್ಟಿ ಅಂತಾನು ಕಾಂಗ್ರೆಸ್ ಹೇಳಿದೆ. ಇವತ್ತು ಇಡೀ ದೇಶ ಜಗತ್ತೇ ಸಂಭ್ರಮಿಸುತ್ತಿದೆ ಈ ಸಂದರ್ಭ ಸಚಿವ ರಾಜಣ್ಣ ಮೂರ್ಖತನದ ಹೇಳಿಕೆ ನೀಡಿದ್ದಾರೆ.ಇದು ಕಾಂಗ್ರೆಸ್ ನ ಮಾನಸಿಕತೆ, ಬೌದ್ಧಿಕ ದಿವಾಳಿತನವನ್ನು ತೋರಿಸುತ್ತೆ ಅಯೋಧ್ಯೆ ರಾಮ ಮಂದಿರವನ್ನು ಟಾಕೀಸ್ ಗೆ ಹೋಲಿಸಿ ಕೀಳಾಗಿ ಮಾತನಾಡಿದ್ದಾರೆ.ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತೆ ರಾಜಣ್ಣ ಅಧಿಕಾರದ ದಾಹ, ಮೋಹ, ಸ್ಥಾನಕ್ಕಾಗಿ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನ್ನು ಮೆಚ್ಚಿಸುವ ಕೆಲಸ ಮಾಡಿದ್ದಾರೆ ರಾಜಣ್ಣನಂತಹ ಮಾತು ರಾಮಮಂದಿರಕ್ಕೆ ಅವಶ್ಯಕತೆಯಿಲ್ಲ.ರಾಜಣ್ಣನ ಭಾವನೆ,ಮಾತು ಬಹುಸಂಖ್ಯಾತ ಹಿಂದುಗಳಿಗೆ ಮಾಡಿರುವ ಅವಮಾನ ರಾಜಣ್ಣನಂತಹ ಹೇಳಿಕೆ ರಾಷ್ಟ್ರವಿರೋಧಿ ಹೇಳಿಕೆ,ಭಾರತ ಮಾತ್ರವಲ್ಲದೆ ಇಂಡೋನೇಷ್ಯಾ, ಮುಸಲ್ಮಾನ ರಾಷ್ಟ್ರ ಗಳಲ್ಲಿಯೂ ರಾಮನ ಆರಾಧನೆ ಇದೆ ಇಂತಹ ರಾಮನ ಬಗ್ಗೆ ರಾಜಣ್ಣರ ಹೇಳಿಕೆ ಅವರ, ಕಾಂಗ್ರೆಸ್ ನ ಮಾನಸಿಕತೆ ತೋರಿಸುತ್ತೆ.
ಕಾಂಗ್ರೆಸ್ ಗೆ ರಾಮಮಂದಿರದ ಅವಶ್ಯಕತೆ ಇದ್ದಾಗಲು ಅದನ್ನು ವಿರೋಧಿಸಿದೆ.ಈಗ ರಾಮನ ದರ್ಶನ ಭಾಗ್ಯವನ್ನು ವಿರೋಧಿಸಿದೆ.ತುಷ್ಟೀಕರಣದ ರಾಜನೀತಿಗಾಗಿ ಈ ರೀತಿಯ ಹೇಳಿಕೆ ಕೊಡುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಮಂಗಳೂರು: ಒಳ ಮೀಸಲಾತಿ ಜಾರಿಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ವಿಚಾರ ಮಾಡಿದ ವಿಚಾರದ ಬಗ್ಗೆ ಮಾತಾಡಿದ ನಳಿನ್ ಕುಮಾರ್ ಜಾತಿ-ಜಾತಿ, ಸಮುದಾಯವನ್ನು ಒಡೆಯುವುದು ಕಾಂಗ್ರೆಸ್ ನ ಜಾಯಮಾನ.ಅವರಿಗೆ ಇಚ್ಛಾಶಕ್ತಿ ಇದ್ರೆ ಅವರೇ ಒಂದು ನಿರ್ಣಯ ತೆಗೆದುಕೊಳ್ಳಬಹುದಿತ್ತು.ಅವರಿಗೆ ಇಚ್ಛಾಶಕ್ತಿಯ ಕೊರತೆಯಿದೆ ಕೇವಲ ಓಟಿಗೋಸ್ಕರ ಈ ರೀತಿಯ ನಾಟಕವನ್ನು ಸಿದ್ದರಾಮಣ್ಣ ಮಾಡ್ತಿದ್ದಾರೆ ಎಂದು ಹೇಳಿದರು.