ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು, ರಿಫ್ರೆಶ್ ಮೂಡ್ನಲ್ಲಿರಲು ಮತ್ತು ತಮ್ಮ ಕೆಲಸದ ಮೇಲೆ ಗಮನ ಹರಿಸಲು ‘ವೈ-ಬ್ರೇಕ್ – ಯೋಗ ಅಟ್ ಆಫೀಸ್ ಚೇರ್‘ (ಆಫೀಸ್ ಚೇರ್ನಲ್ಲಿ ಯೋಗ) ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ.
ಸೋಮವಾರ ನೀಡಿರುವ ಆದೇಶದಲ್ಲಿ ಸಚಿವಾಲಯಗಳು/ಇಲಾಖೆಗಳು ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಈ ಹೊಸ ಯೋಗ ಪ್ರೋಟೋಕಾಲ್ನ್ನು ಅಳವಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ವೈ-ಬ್ರೇಕ್ – ಯೋಗ ಅಟ್ ಆಫೀಸ್ ಚೇರ್ ಅನ್ನು ಆಯುಷ್ ಸಚಿವಾಲಯವು ಪರಿಚಯಿಸಿದೆ, ಇದು ಕೆಲಸದ ಸ್ಥಳದಲ್ಲಿ ಒತ್ತಡ, ರಿಫ್ರೆಶ್ ಮತ್ತು ಮರು-ಕೇಂದ್ರೀಕರಿಸುವ ಉದ್ದೇಶದಿಂದ ಪರಿಚಯಿಸಲ್ಪಟ್ಟಿದೆ.
ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ, ಸಚಿವಾಲಯ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಹೊರಗೆ ಹೋಗಿ ಯೋಗಾಭ್ಯಾಸ ಮಾಡಲು ಸಾಧ್ಯವಾಗದ ಅಧಿಕಾರಿಗಳಿಗೆ ಆಯುಷ್ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.
ಅಧಿಕಾರಿಗಳು ಈಗ ತಮ್ಮ ಕಚೇರಿಯ ಕುರ್ಚಿಯಲ್ಲಿ ಕುಳಿತುಕೊಂಡು “ವೈ-ಬ್ರೇಕ್ ವರ್ಕ್ಪ್ಲೇಸ್ ಯೋಗ” ಎಂಬ ಅಲ್ಪಾವಧಿಯ ಯೋಗವನ್ನು ಕುರ್ಚಿಯಲ್ಲಿ ಅಭ್ಯಾಸ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಯೋಗ ಅಟ್ ಚೇರ್ಗಳನ್ನು ತಮ್ಮ ಎಲ್ಲ ಉದ್ಯೋಗಿಗಳು ಅಳವಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ಆದೇಶ ನೀಡಿದ್ದು, ಈ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸುವಂತೆ ಕೇಳಿಕೊಂಡಿದೆ.