ಶಾಂತಿ ಜಲಪಾತವು ಝಡ್ ಪಾಯಿಂಟ್ಗೆ ಚಾರಣ ಹಾದಿಯಲ್ಲಿ ಸಿಗುವ ಸಣ್ಣ ಆದರೆ ಉಲ್ಲಾಸಕರ ಜಲಪಾತವಾಗಿದೆ. ಇದು ಚಿಕ್ಕಮಗಳೂರಿನ ಅಜ್ಞಾತ ನೈಸರ್ಗಿಕ ಅದ್ಭುತಗಳಲ್ಲಿ ಒಂದಾಗಿದೆ. ಕಡಿಮೆ ಪ್ರಮಾನದಲ್ಲಿ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಹಾಗಾಗಿ ಹೆಸರಿಗೆ ತಕ್ಕಂತೆ ಪ್ರಾಶಾಂತವಾಗಿ ಹರಿಯುತ್ತಿದೆ.
ಕರ್ನಾಟಕದ ಸುಂದರ ಕಾಡುಗಳಲ್ಲಿ ನೆಲೆಗೊಂಡಿರುವ ಶಾಂತಿ ಜಲಪಾತವು ಮನಸಿಗ್ಗೆ ನೆಮ್ಮದಿ ಬಯಸುವವರಿಗೆ ಉತ್ತಮ ಸ್ಥಳವಾಗಿದೆ. ಹಚ್ಚ ಹಸಿರಿನಿಂದ ಸುತ್ತುವರೆದಿರುವ ಶಾಂತಿ ಜಲಪಾತವು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಸ್ನೇಹಿತರು, ಕುಟುಂಬ ಅಥವಾ ಕೆಲವು ಸಾಹಸವನ್ನು ಬಯಸುವ ಇಲ್ಲಿಗೆ ಭೇಟಿ ನೀಡಬಹುದು.
ಹಚ್ಚ ಹಸಿರಿನ ಪರಿಸರದ ನಡುವೆ ನೆಲೆಸಿರುವ ಶಾಂತಿ ಜಲಪಾತವು ಬೆಟ್ಟದ ತುದಿಯಿಂದ ಕೆಳಗಿಳಿದು ಕೆಳಗಿನ ಕಣಿವೆಯನ್ನು ತಲುಪುತ್ತದೆ. ಬೆಟ್ಟಗಳಿಂದ ನೀರು ಚಿಮ್ಮುವ ಶಬ್ದ ಮತ್ತು ಕಾಡಿನಲ್ಲಿ ದೂರದಿಂದ ಪಕ್ಷಿಗಳ ಚಿಲಿಪಿಲಿ ಸದ್ದು ಮನಸ್ಸಿಗೆ ಉತ್ತಮ ಪರಿಣಾಮವನ್ನು ಬೀರಬಹುದು. ಇದು ಮನಮೆಚ್ಚುವ ಅದ್ಭುತವಾದ ನೈಸರ್ಗಿಕ ಸೌಂದರ್ಯವಾಗಿದೆ. ಹಸಿರು ಬೆಟ್ಟಗಳ ಹಿನ್ನೆಲೆಯಲ್ಲಿ ಶಾಂತಿ ಜಲಪಾತವು ಮೋಡಿಮಾಡುವ ನೋಟವನ್ನು ಒದಗಿಸುತ್ತದೆ. ಜಲಪಾತಕ್ಕೆ ಹೋಗುವ ರಸ್ತೆಗಳು ಮರದ ಬೆಟ್ಟಗಳು ಮತ್ತು ಆಳವಾದ ಕಣಿವೆಗಳ ರಮಣೀಯ ನೋಟಗಳನ್ನು ಸಹ ಹೊಂದಿವೆ. ಇಲ್ಲಿಗೆ ಭೇಟಿ ನೀಡುವವರು ಈ ದೃಶ್ಯಗಳನ್ನು ಸಂಪೂರ್ಣವಾಗಿ ಆನಂದಿಸಿಬಹದು.
ಈ ಜಲಪಾತವು ತಾಜಾತನದ ಅನುಭವನ್ನು ನೀಡುತ್ತದೆ.ರಮಣೀಯ ಸೌಂದರ್ಯದ ಹೊರತಾಗಿ, ಈ ಜಲಪಾತವು ಝಡ್ ಪಾಯಿಂಟ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ನಿಲುಗಡೆಯಾಗಿ ಕಾರ್ಯನಿರ್ವಹಿಸುತ್ತದೆ. ಶಾಂತಿ ಜಲಪಾತದ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಬಹುದು, ಬಂಡೆಗಳ ಮೇಲೆ ಕುಳಿತು ಕೊಂಚ ಆರಾಮ ತೆಗೆದುಕೋಳ್ಳುವ ಮೂಲಕ ಒತ್ತಡದಿಂದ ಮುಕ್ತರಾಗಬಹುದು. ಇದರ ನೀರು ಬೇಸಿಗೆಯ ತಿಂಗಳುಗಳಲ್ಲಿಯೂ ಸಹ ತಂಪಾಗಿರುತ್ತದೆ.
ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ವೀಕ್ಷಿಸಲು ಝಡ್ ಪಾಯಿಂಟ್ ಒಂದು ಸುಂದರವಾದ ಸ್ಥಳವಾಗಿದೆ. ಮತ್ತು ಮೇಲ್ಭಾಗಕ್ಕೆ ಹೋಗುವ ಮಾರ್ಗವು ಒಂದು ಬದಿಯಲ್ಲಿ ಆಳವಾದ ಕಣಿವೆಗಳನ್ನು ಮತ್ತು ಮತ್ತೊಂದೆಡೆ ಬೆಟ್ಟಗಳನ್ನು ಹೊಂದಿದೆ. ಚಾರಣದ ನಿಜವಾದ ಸಾಹಸವು ಶಾಂತಿ ಜಲಪಾತದ ನಂತರವೇ ಪ್ರಾರಂಭವಾಗುತ್ತದೆ. ಚಾರಣವು ಈ ಪ್ರದೇಶದ ಗುಡ್ಡಗಾಡು ಇಳಿಜಾರುಗಳು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳ ಬೆರಗುಗೊಳಿಸುವ ನೋಟಗಳನ್ನು ಒದಗಿಸುತ್ತದೆ.
ಶಾಂತಿ ಜಲಪಾತಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್ನಿAದ ನವೆಂಬರ್. ಇಲ್ಲಿಗೆ ಭೇಟಿ ನೀಡಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.