ರಾಷ್ಟ್ರ: ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವು ಪ್ರವರ್ಧಮಾನಕ್ಕೆ ಬರುತ್ತಿರುವ ಹೊತ್ತಿನಲ್ಲಿ, ಫ್ಲಿಪ್ಕಾರ್ಟ್ ನ ಕಂಪನಿಯಾಗಿರುವ ಕ್ಲಿಯರ್ಟ್ರಿಪ್ ‘ದರ್ಶನ್ ಡೆಸ್ಟಿನೇಷನ್ಸ್’ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಯೋಧ್ಯೆಯಲ್ಲಿ ದೇವಾಲಯ ಉದ್ಘಾಟನೆಯಾಗುವ ಮುನ್ನ ಉಂಟಾದ ಅಭೂತಪೂರ್ವ ಪ್ರಯಾಣಾಸಕ್ತಿ ಮತ್ತು ಈ ದೇವಾಲಯ ನಗರಕ್ಕೆ ತೆರಳುತ್ತಿರುವ ಗಣ್ಯರು ಮತ್ತು ಸೆಲೆಬ್ರಿಟಿಗಳ ಕೋಲಾಹಲದ ಮಧ್ಯೆಯೇ ಅಯೋಧ್ಯೆಗೆ ಭೇಟಿ ನೀಡಲು ಬಯಸುವ ಹಿರಿಯ ನಾಗರಿಕರಿಗೆ 1008 ಉಚಿತ ವಿಮಾನ ಟಿಕೆಟ್ಗಳನ್ನು ನೀಡುವ ಮೂಲಕ ಭಕ್ತರಿಗೆ ಭಗವಂತನ ಆಶೀರ್ವಾದವನ್ನು ಪಡೆಯಲು ಕ್ಲಿಯರ್ಟ್ರಿಪ್ ಸಹಾಯ ಮಾಡುತ್ತಿದೆ. ಈ ಕೊಡುಗೆಯು ಫ್ಲಿಪ್ಕಾರ್ಟ್ ಟ್ರಾವೆಲ್ ಪ್ಲಾಟ್ಫಾರ್ಮ್ಗಳಲ್ಲಿಯೂ ಲಭ್ಯವಿರುತ್ತದೆ.
“ದರ್ಶನ್ ಡೆಸ್ಟಿನೇಷನ್ಸ್” ಅಡಿಯಲ್ಲಿ ನಡೆಯುತ್ತಿರುವ ಈ ಉಪಕ್ರಮದೊಂದಿಗೆ, ಕ್ಲಿಯರ್ಟ್ರಿಪ್ ಮತ್ತು ಫ್ಲಿಪ್ಕಾರ್ಟ್ ಟ್ರಾವೆಲ್ ವಿವಿಧ ಧಾರ್ಮಿಕ ಸ್ಥಳಗಳಿಗೆ ವಿಮಾನಗಳು*, ಹೋಟೆಲ್ಗಳು ಮತ್ತು ಬಸ್ಗಳಲ್ಲಿ ವಿಶೇಷ ದರಗಳನ್ನು ಒದಗಿಸುತ್ತಿವೆ. ಅಯೋಧ್ಯೆ, ಮಧುರೈ, ತಿರುಪತಿ, ಅಮೃತಸರ, ಭೋಪಾಲ್, ಶಿರಡಿ, ಬೋಧಗಯಾ, ಕೊಚ್ಚಿ, ಕತ್ರಾ (ಜಮ್ಮು) ಸೇರಿದಂತೆ ಭಾರತದ ಕೆಲವು ಪೂಜ್ಯ ಆಧ್ಯಾತ್ಮಿಕ ಸ್ಥಳಗಳಿಗೆ ಬಸ್, ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ಗಳಲ್ಲಿ ಪ್ರಯಾಣಿಕರು 20% ರಿಯಾಯಿತಿಯನ್ನು ಪಡೆಯಬಹುದು. ಈ ಉಪಕ್ರಮವು ಭಕ್ತರಿಗೆ ವಿಮಾನಗಳು, ಹೋಟೆಲ್ಗಳು ಮತ್ತು ಬಸ್ಗಳಾದ್ಯಂತ ರಿಯಾಯಿತಿ ದರಗಳನ್ನು ನೀಡಲು ಮಾಡಲಾದ ಅಪೂರ್ವ ಕಾರ್ಯಕ್ರಮವಾಗಿದೆ.
ಅಯೋಧ್ಯೆಯಿಂದ ಉತ್ತೇಜಿಸಲ್ಪಟ್ಟ ಆಧ್ಯಾತ್ಮಿಕ ಪ್ರವಾಸೋದ್ಯಮದ ಇತ್ತೀಚಿನ ಬೆಳವಣಿಗೆಯು ಪ್ರಯಾಣಿಕರ ಆದ್ಯತೆಗಳಲ್ಲಿನ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಕ್ಲಿಯರ್ಟ್ರಿಪ್ ಮತ್ತು ಫ್ಲಿಪ್ಕಾರ್ಟ್ ಟ್ರಾವೆಲ್, ಅನೇಕ ಪ್ಲಾಟ್ಫಾರ್ಮ್ನಾದ್ಯಂತ ಅಯೋಧ್ಯೆ ಕುರಿತಾದ ಹುಡುಕಾಟಗಳಲ್ಲಿ ಒಟ್ಟಾರೆ 1500% ಹೆಚ್ಚಳ ಆಗಿರುವುದನ್ನು ಗಮನಿಸಿದೆ.
ಈ ಕುರಿತು ಮಾತನಾಡಿದ ಕ್ಲಿಯರ್ಟ್ರಿಪ್ನ ಸಿಇಓ ಅಯ್ಯಪ್ಪನ್ ರಾಜಗೋಪಾಲ್, “ಗ್ರಾಹಕ ಕೇಂದ್ರಿತ ಕಂಪನಿಯಾಗಿ, ಕ್ಲಿಯರ್ಟ್ರಿಪ್ ನಮ್ಮ ಬಳಕೆದಾರರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ. ಶತಮಾನಗಳ-ಹಳೆಯ ಸಂಪ್ರದಾಯಗಳನ್ನು ಸಾಕಾರಗೊಳಿಸುವ ಆಧ್ಯಾತ್ಮಿಕ ಪ್ರಯಾಣಗಳು ನಮ್ಮ ಸಂಸ್ಕೃತಿಯಾ ಕೇಂದ್ರ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಹೆಚ್ಚಿನ ಜನರು ಈ ಅರ್ಥಪೂರ್ಣ ಪ್ರಯಾಣವನ್ನು ಬಯಸುತ್ತಿರುವ ಕಾರಣ, ಈ ಅನುಭವಗಳುನ್ನು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಲು ನಾವು ಬಯಸುತ್ತೇವೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯೊಂದಿಗೆ ಈ ಹೊಸ ಕೊಡುಗೆಯನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಕೊಡುಗೆ, ವಿಶೇಷವಾಗಿ ದೇಶದ ಶ್ರೀಮಂತ ಪರಂಪರೆಯ ಭಾಗಿಯಾಗಲು ಬಯಸುವ ಹಿರಿಯ ನಾಗರಿಕರಿಗೆ ಒದಗಿಸಲಿದ್ದೇವೆ. ಇದು ನಮ್ಮ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜನರಿಗೆ ದೈವಿಕ ಸ್ಥಳಗಳನ್ನು ಅನುಭವಿಸಲು ಮತ್ತು ಅವರ ಪ್ರಯಾಣದ ಆಕಾಂಕ್ಷೆಗಳನ್ನು ಸುಲಭವಾಗಿ ಪೂರೈಸಲು ನಾವು ಸ್ಫೂರ್ತಿಯಾಗುತ್ತೇವೆ ಎಂದು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.
ದರ್ಶನ್ ಡೆಸ್ಟಿನೇಷನ್ಸ್, ಕ್ಲಿಯರ್ಟ್ರಿಪ್ ಮತ್ತು ಫ್ಲಿಪ್ಕಾರ್ಟ್ ಟ್ರಾವೆಲ್ನಂತಹ ಗ್ರಾಹಕ-ಕೇಂದ್ರಿತ ಉಪಕ್ರಮಗಳ ಮೂಲಕ ಕೈಗೆಟುಕುವ ದರದಲ್ಲಿ, ಲಭ್ಯವಾಗಬಹುದಾದ ಮತ್ತು ಬಳಕೆದಾರರು ಬಯಸುವ ಉತ್ತಮ ಪ್ರಯಾಣದ ಅನುಭವವನ್ನು ಒದಗಿಸುವುದನ್ನು ಮುಂದುವರಿಸುತ್ತದೆ.