ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಘಟ್ಟವಾಗಿಯೇ ಇರುತ್ತದೆ. ಇದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಮದುವೆಗೆ ಮೊದಲು ಭೇಟಿಯಾಗಲು ಬಯಸುತ್ತಾರೆ. ವಿಶೇಷವಾಗಿ ಆನ್ಲೈನ್ ಮ್ಯಾಟ್ರಿಮೋನಿಯಲ್ ಯುಗದಲ್ಲಿ, ಇದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಹಿಂದಿನ ಕಾಲದಲ್ಲಿ ಆಗಿದ್ದರೆ ಒಮ್ಮೆ ಹುಡುಗಿ ಅಥವಾ ಹುಡುಗನನ್ನು ನೋಡಿದರೆ ಮುಗಿದಿತ್ತು. ಆದರೆ ಈಗಿನ ಕಾಲ ಬದಲಾಗಿದೆ ಮದುವೆ ಫಿಕ್ಸ್ ಆದ ಕೂಡಲೇ ಹುಡುಗ ಮತ್ತು ಹುಡುಗಿಗೆ ತುಂಬಾ ಅರ್ಥ ಮಾಡಿಕೊಳ್ಳುದಿರುತ್ತದೆ ಎಂದು ತಿಳಿದು ಅವರು ಪುನಃ ಭೇಟಿಯಾಗಲು ಇಚ್ಚಿಸುತ್ತಾರೆ. ಕೇವಲ ಫೋಟೋಗಳನ್ನು ನೋಡುವುದರಿಂದ ಅಥವಾ ಫೋನ್ನಲ್ಲಿ ಮಾತನಾಡುವುದರಿಂದ ಆ ವ್ಯಕ್ತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈಗಿನವರ ಅಭಿಪ್ರಾಯ.
ಇಂತಹ ಪರಿಸ್ಥಿತಿಯಲ್ಲಿ, ನೀವೂ ಕೂಡ ನಿಮ್ಮ ಭಾವಿ ಬಾಳಸಂಗಾತಿಯನ್ನು ಮೊದಲ ಬಾರಿಗೆ ಭೇಟಿ ಮಾಡಲು ನೀವು ಯೋಚಿಸುತ್ತಿದ್ದರೆ, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಭೇಟಿಯ ಸಮಯದಲ್ಲಿ ನೀವು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿಯುವುದಾದರೆ,
ನೀವು ಮೊದಲ ಸಾರಿ ನಿಮ್ಮ ಬಾಳ ಸಂಗಾತಿಯನ್ನು ಭೇಟಿಯಾಗಲು ಹೋಗುತ್ತಿದ್ದರೆ, ಹೋಗುವ ವೇಳೆ ಯೋಗ್ಯ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ.
ಭೇಟಿಯಾಗಲು ಶಾಂತ ಮತ್ತು ಸುಂದರವಾದ ಸ್ಥಳವನ್ನು ಆಯ್ಕೆ ಮಾಡಿ
ಸಾರ್ವಜನಿಕ ಸ್ಥಳಗಳು ಅಥವಾ ಮಾಲ್ಗಳಲ್ಲಿ ಭೇಟಿಯಾಗುವುದರಿಂದ, ನಿಮ್ಮಿಂದ ಪರಸ್ಪರತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ. ನೀವು ನಿಮ್ಮ ಮೊದಲ ಭೇಟಿಯನ್ನು ಸುಂದರವಾದ ಕೆಫೆ ಅಥವಾ ಸುಂದರವಾದ
ರೆಸ್ಟೋರೆಂಟ್ನಲ್ಲಿ ಭೇಟಿಯಾದರೆ ಉತ್ತಮ. ಅಲ್ಲಿ ನೀವು ಕುಳಿತು ಅವರೊಂದಿಗೆ ಶಾಂತಿಯುತವಾಗಿ ಮಾತನಾಡಬಹುದು.
ಹಲವು ಬಾರಿ ಹುಡುಗರು ತಮಾಷೆ ಮಾಡುವ ಮೂಲಕ ಹುಡುಗಿಯನ್ನು ತ್ವರಿತವಾಗಿ ಮೆಚ್ಚಿಸಬಹುದು ಅಂದುಕೊಳ್ಳುತ್ತಾರೆ. ಆದರೆ ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹುಡುಗಿಯರು ತಮಾಷೆಯ ಹುಡುಗರನ್ನು ಇಷ್ಟಪಡುತ್ತಾರೆ. ಆದರೆ ನಿಮ್ಮ ಜೋಕ್ ಮತ್ತು ಜೋಕ್ನ ವ್ಯಾಪ್ತಿಯನ್ನು ನೀವು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ.
ಒಂದು ಹುಡುಗಿ ಹುಡುಗನನ್ನು ತನ್ನ ಸಂಗಾತಿಯನ್ನಾಗಿ ಮಾಡಲು ಬಯಸಿದಾಗ, ತನ್ನ ಸಂಗಾತಿಯು ತನ್ನನ್ನು ಮತ್ತು ತನ್ನ ಕುಟುಂಬವನ್ನು ಗೌರವಿಸಬೇಕು ಎಂದು ಬಯಸುತ್ತಾಳೆ ಎಂಬುದು ನಿಮಗೆ ತಿಳಿದಿರಬೇಕು. ಅದರ ಪ್ರಕಾರ ನಡೆದುಕೊಳ್ಳುವುದು ಉತ್ತಮ.