ಬಾಗಲಕೋಟೆ: ಆಲಮಟ್ಟಿ ಹಿನ್ನೀರಿಗಾಗಿ ಬಹುದೊಡ್ಡ ನಗರವಾದ ಬಾಗಲಕೋಟೆ ಜನತೆ ತಮ್ಮ ಮನೆ, ಮಠ ತ್ಯಾಗ ಮಾಡಿದ್ದಾರೆ. ಅವರಿಗಾಗಿ ಪುನರ್ ವಸತಿ ಕಲ್ಪಿಸಲು ನವನಗರದ ಸ್ಥಾಪಿಸಲಾಗಿದೆ. ಬೃಹತ್ ಪ್ರಮಾಣದಲ್ಲಿರುವ ಈ ಹೊಸ ನಗರಕ್ಕೆ ಮೂಲಕ ಸೌಕರ್ಯ ನಿರ್ವಹಣೆ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಕಾರ್ಪಸ್ ಫಂಡ್ ಮೇಲೆ ಕಾಮಲೆ ಕಣ್ಣು ಕಣ್ಣು ಬಿದ್ದಿತ್ತು..!!
ಈ ಸತ್ಯ ಕಹಿಯಾದರು ಒಪ್ಪಿಕೊಳ್ಳಲೆ ಬೇಕು. ಮುಳಗಡೆ ನಗರಿ ಬಾಗಲಕೋಟೆ ಸಂತ್ರಸ್ತರಿಗೆ ನವನಗರದ ಯೂನಿಟ್-1, ಯೂನಿಟ್-2 ನಿರ್ಮಾಣ ಮಾಡಲಾಗಿದೆ. ಯೂನಿಟ್-3 ಇನ್ನೇನು ನಿರ್ಮಾಣ ಆಗಬೇಕಿದೆ. ಆದರೇ ಯೂನಿಟ್-1 ರಲ್ಲಿನ ಮೂಲೆ ನಿವೇಶನ ಹರಾಜಿನಿಂದ ಈ ವರೆಗೆ ಬರೋಬ್ಬರಿ (ಬಡ್ಡಿ ಸೇರಿ) 370 ಕೋಟಿ ರೂ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧೀಕಾರವು ಬ್ಯಾಂಕ್ ನಲ್ಲಿ ಠೇವಣಿ ಇರಿಸಿದೆ. ಇದರಿಂದ ಬಂದ0ತಹ ಬಡ್ಡಿ ಹಣದಲ್ಲಿ ನವನಗರದ ನಿರ್ವಹಣೆ ಮಾಡಲಾಗುತ್ತದೆ. ಆದರೇ ಈ ಹಣವನ್ನು ಹಿಂದಿರುಸುವ0ತೆ ಕೃಷ್ಣಾ ಭಾಗ್ಯ ಜಲ ನಿಗಮ ಬಿಟಿಡಿಎಗೆ ಪತ್ರ ಬರೆದು 31-3-2023 ಆದೇಶ ಮಾಡಿತ್ತು. ಚುನಾವಣೆ ಸಮಯದಲ್ಲಿ ಇದರ ಹಿಂದೆ ಯಾರ ಕೈವಾಡ?, ಒತ್ತಡ ಇತ್ತಾ?, ಇದರ ಹಿಂದಿನ ಉದ್ದೇಶ? ಮರ್ಮವೇನು ಎನ್ನುವ ನೂರಾರು ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ.
ಏನಿದು ಕಾರ್ಪಸ್ ಫಂಡ್:
ನವನಗರದಲ್ಲಿ ನೀರು ಸರಬರಾಜು, ಒಳ ಚರಂಡಿ, ವಿದ್ಯುತ್ ದೀಪಗಳು, ರಸ್ತೆ ಹಾಗೂ ಒಳ ಚರಂಡಿ, ಉದ್ಯಾನವನಗಳ ಹಾಗೂ ಇತರೆ ನಿರ್ವಹಣೆಗಾಗಿ ಪ್ರತಿ ವರ್ಷ ಹಣ ಬೇಕು. ಸರ್ಕಾರದಿಂದ ಪ್ರತ್ಯೇಕ ಅನುದಾನ ಪಡೆಯುದಕ್ಕಿಂತ ಸಂತ್ರಸ್ತರ ಅನುಕೂಲಕ್ಕಾಗಿ ಎರಡು ದಶಕಗಳ ಹಿಂದೆ ಯೂನಿಟ್-1 ರಲ್ಲಿನ ಮೂಲೆ ನಿವೇಶನ ಹರಾಜು ಪ್ರಕ್ರಿಯೆ ಆರಂಭಿಸಿ ಅದರಿಂದ ಬಂದ ಹಣವನ್ನು ಬಿಟಿಡಿಎ ಬ್ಯಾಂಕನಲ್ಲಿ ಠೇವಣಿ ಮಾಡುತ್ತದೆ. ಇದಕ್ಕೆ ಕಾರ್ಪಸ್ ಫಂಡ್ ಎನ್ನಲಾಗುತ್ತದೆ. ಈ ಮೊದಲು 200 ಕೋಟಿ ರೂ., ಕಳೆದ ಮೂರು ವರ್ಷಗಳಲ್ಲಿ ಹರಾಜು ಮಾಡಲಾದ ನಿವೇಶನದಿಂದ 150 ಕೋಟಿ ರೂ. ಹಾಗೂ ಬಡ್ಡಿ ಸೇರಿ ಲಭ್ಯವಿರುವ ಒಟ್ಟು 377 ಕೋಟಿ ರೂ. ಬಿಟಿಡಿಎ ಬಳಿ ಇದೆ. ಇದನ್ನು ಹಿಂಪಡೆಯಲು ಕೃಷ್ಣಾ ಭಾಗ್ಯ ಜಲ ನಿಗಮ ನಿ. ಆದೇಶಿಸಿತ್ತು.
ನವನಗರ ಹಸ್ತಾಂತರಕ್ಕೆ ಸೂಚನೆ?
ಆದೇಶ ಪತ್ರದಲ್ಲಿ ಕಾರ್ಪಸ್ ಫಂಡ್ ಅಷ್ಟೆ ಅಲ್ಲದೆ ಅನೇಕ ವಿಷಯಗಳ ಪ್ರಸ್ತಾಪ ಆಗಿದೆ. ನವನಗರದ ಯೂನಿಟ್ -1 ಮಾ.31 2023 ರೊಳಗೆ ಬಾಗಲಕೋಟೆ ನಗರಸಭೆಗೆ ಹಸ್ತಾಂತರ ಮಾಡಬೇಕು, ಯೂನಿಟ್-2 ಕ್ಕೆ ಸಂಬAದಿಸಿದ ಮೂಲ ಸೌಕರ್ಯ ಒದಗಿಸುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಈಗಿನಿಂದಲೇ ನಗರಸಭೆಗೆ ಮುಂದಿನ ನಿರ್ವಹಣೆಗಾಗಿ ಶೀಘ್ರದಲ್ಲಿ ಹಸ್ತಾಂತರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪಸ್ತಾವನೆ ಸಲ್ಲಿಸಬೇಕು, ಮೂಲೆ ನಿವೇಶನದ ಮೊತ್ತವನ್ನು ಆರ್ಥಿಕ ಇಲಾಖೆಯ ಅನುಮತಿ ಪಡೆದು ಈ ಹಣದಲ್ಲಿ ಪುನರ್ ವಸತಿ, ಪುನರ್ ನಿರ್ಮಾಣ ಮತ್ತು ಭೂ ಸ್ವಾಽÃನ ಪ್ರಕ್ರಿಯೆಗಳಿಗೆ ವಿನಿಯೋಗಿಸುವುದು, 2022-2023 ಸಾಲಿನಲ್ಲಿ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ಹೊರತು ಪಡಿಸಿ ನಿಗಮದಿಂದ ಹೊಸದಾಗಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿರುವುದು, ಅದರಂತೆ 377 ಕೋಟಿ ರೂ. ನಿಗಮಕ್ಕೆ ಉಪಯೋಗಿಸಿಕೊಳ್ಳಲು ಅನುಮೋದನೆ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿತ್ತು. ಬಿಟಿಡಿಎದಿಂದ ಹಿಂಪಡೆದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತವು ನಿಯಮಾನುಸಾರ ಉಪಯೋಗಿಸಲು ಸಹಮಿತಿ ನೀಡಿದೆ. ಈ ಹಣ ಕೂಡಲೇ ಎಸ್ಬಿಐ ಬ್ಯಾಂಕ್ ಕಾವೇರಿ ಭವನ ಶಾಖೆ ವರ್ಗಾಹಿಸಲು ಸೂಚಿಸಲಾಗಿತ್ತು.
ನಾನು ಶಾಸಕ ಆಯ್ಕೆಯಾದ ಬಳಿಕ ಈ ವಿಷಯ ಗಮನಕ್ಕೆ ಬಂದಿತ್ತು. ಸಂತ್ರಸ್ತರ ವಿಷಯದಲ್ಲಿ ಚಲ್ಲಾಟವಾಡುವುದು ಸರಿಯಲ್ಲ. ತಕ್ಷಣಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿದ ಅಽಕಾರಿಗಳಿಗೆ ಬಿಟಿಡಿಎದಿಂದ 370 ಕೋಟಿ ರೂ. ತೆಗೆದುಕೊಳ್ಳದಂತೆ ತಿಳಿಸಿದ್ದೇನೆ. ಸಂಬAಧಪಟ್ಟ ಸಚಿವರಿಗೂ ಮಾತನಾಡಿದ್ದೇನೆ. ಬಾಗಲಕೋಟೆ ಅಭಿವೃದ್ಧಿ ವಿಷಯದಲ್ಲಿ ರಾಜಿ ಇಲ್ಲ. ಕಾರ್ಪಸ್ ಫಂಡ್ ವರ್ಗಾವಣೆಗೆ ಅವಕಾಶ ನೀಡಲ್ಲ. ನವನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಹೇಳಿದರು.