ಬೆಂಗಳೂರು: ಭಾರತದ ಮೊದಲ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಜೀವನಾಧಾರಿತ ಕಥೆ ತೆರೆ ಮೇಲೆ ತರುವ ಸಿದ್ಧತೆ ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ದುರಂತದಲ್ಲಿ ಅಂತ್ಯಕಂಡ ಭಾರತದ ಹೆಮ್ಮೆಯ ಹುಡುಗಿಯ ಬಯೋಪಿಕ್ ಗೆ ಬಾಲಿವುಡ್ ಸ್ಟಾರ್ ನಟಿ ಶ್ರದ್ದಾ ಕಪೂರ್ ಕಾಣಿಸಿಕೊಳ್ಳಲಿದ್ದಾರಂತೆ!
ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲವಾದರೂ ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಸುದ್ದಿಗೆ ಪುಷ್ಟಿ ನೀಡುವಂತೆ ಇತ್ತೀಚಿಗೆ ಶ್ರದ್ಧಾ ಕಪೂರ್ ತನ್ನ ಹೇರ್ ಕಟ್ ಬದಲಾಯಿಸಿಕೊಂಡಿದ್ದಾರೆ. ಇದರಿಂದ ಶ್ರದ್ಧಾ ಕಲ್ಪನಾ ಚಾವ್ಲಾ ಅವರಂತೆ ಕಾಣುತ್ತಿರುವುದು ಅಭಿಮಾನಿಗಳ ಅನುಮಾನಕ್ಕೆ ಬಲ ನೀಡುವಂತಾಗಿದೆ.
ಇನ್ನು ಈ ಚಿತ್ರವನ್ನು ಬಾಲಿವುಡ್ ನ ಖ್ಯಾತ ನಿರ್ದೇಶಕ ಆನಂದ್ ಎಲ್ ರೈ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಪೋಸ್ಟರ್ವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಕಲ್ಪನಾ ಚಾವ್ಲಾ ಅನ್ ಟೋಲ್ಡ್ ಸ್ಟೋರಿ ಎಂದು ಟೈಟಲ್ ನೀಡಲಾಗಿದೆ.
ಇದರಲ್ಲಿ ಅಮೀರ್ ಖಾನ್, ಅಭಿಷೇಕ್ ಬಚ್ಚನ್ ಕೂಡ ತೆರೆ ಹಂಚಿಕೊಳ್ಳುತ್ತಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಘೋಷಿಸಿಲ್ಲ.