ಜಾಗತಿಕ ಮಾರುಕಟ್ಟೆಯಲ್ಲಿ ದರಗಳು ಕುಸಿಯುತ್ತಿದ್ದು, ಇದರ ಪರಿಣಾಮ ಭಾರತದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿ ಅಡಿಗೆ ಎಣ್ಣೆ ಪ್ರತಿ ಲೀಟರ್ ಗೆ 30 ರೂಪಾಯಿ ಇಳಿತ ಕಂಡಿದೆ. ಸಾಮಾನ್ಯ ಜನರಿಗೆ ಇದು ಬಂಪರ್ ಆಫರ್ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ದರಗಳ ಇಳಿಕೆಗೆ ಅನುಗುಣವಾಗಿ ತೈಲದ ಎಂ ಆರ್ ಪಿ ದರಗಳನ್ನು ಕಡಿಮೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಈಗಾಗಲೇ ತೈಲ ಕಂಪನಿಗಳಿಗೆ ಮಹತ್ವದ ನಿರ್ದೇಶನ ನೀಡಿದೆ.
ಅದಾನಿ ವಿಲ್ಮಾರ್ ಎಂಡಿ ಮತ್ತು ಸಿಇಒ ಯಾಂಗ್ಶು ಮಲ್ಲಿಕ್ ಅವರು ಜನವರಿಯಿಂದ ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡುತ್ತಿದ್ದೇವೆ, ವಸ್ತುಗಳ ಬೆಲೆ ಕುಸಿತವೇ ಇದಕ್ಕೆ ಕಾರಣ ಎಂದಿದ್ದಾರೆ.
ಕಳೆದ 2 ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಖಾದ್ಯ ತೈಲಗಳ ಬೆಲೆ ಪ್ರತಿ ಟನ್ಗೆ 200ರಿಂದ 250 ಡಾಲರ್ಗಳಷ್ಟು ಇಳಿಕೆಯಾಗುತ್ತಿದೆ. ಹಾಗಾಗಿ ಮುಂಬರುವ ಅವಧಿಯಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.