ಮಂಗಳೂರು: ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ 2024-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು 20.07.2024 ಶನಿವಾರ ಸಂಜೆ ಹೋಟೆಲ್ ದೀಪಾ ಕಂಫರ್ಟ ನಲ್ಲಿ ಜರಗಿತು.
ಅಧ್ಯಕ್ಷರಾಗಿ ಟಾಲಿ ಕಂಪ್ಯೂಟರ್ಸ್ ನ ಮಾಲಕರಾದ ಜಗದೀಶ್ ಅಧಿಕಾರ ಸ್ವೀಕರಿಸಿದರು.ಉಪಾಧ್ಯಕ್ಷರಾಗಿ ಶ್ರೀ ಭಾರತಿ ಸಿಸ್ಟಮ್ಸನ ಮಾಲಕರಾದ ಶಂಕರನಾರಾಯಣ ಕಾರಂತ್, ಕಾರ್ಯದರ್ಶಿಯಾಗಿ ಡಿಯೊಟೆಕ್ಗ್ಲೋಬಲ್ನ ಪಾಲುದಾರರಾದರವಿ ಭಟ್, ಖಜಾಂಚಿಯಾಗಿ ಚತುರ್ಟೆಕ್ನಾಲಜಿಸ್ನ ಮಾಲಕರಾದ ಜಯಪ್ರಕಾಶ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶ್ರೀನಿಧಿ ಸಿಸ್ಟಮ್ಸನ ಮಾಲಕರಾದ ರಾಜೇಶ್ ಅಧಿಕಾರ ಸ್ವೀಕರಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರ್ಯಎಂಟರ್ ಪ್ರೈಸಸ್ ನ ನಿರ್ದೆಶಕರಾದ ಮುರಳಿ ಎಚ್., ಸಾಫ್ಟ್ಲಿಂಕ್ ಮಾಲಕರಾದ ಗಣೇಶ್, ಐ ಕೇರ್ ಕಂಪ್ಯೂಟರ್ಸ್ ನ ಮಾಲಕರಾದ ಲೋಕೇಶ್, ಇಲೆಕ್ಟ್ರೊಟೆಕ್ ಸಿಸ್ಟಮ್ಸ್ನ ಪಾಲುದಾರರಾದ ಭರತ್ ಶೆಟ್ಟಿ, ಎ.ಎನ್.ಎಂಟರ್ ಪ್ರೈಸಸ್ ನ ಪಾಲುದಾರರಾದ ನಿರಂಜನ್ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷರಾದ ಭರತ್ ಶೆಟ್ಟಿ ತಮ್ಮನಿರ್ಗಮನ ಭಾಷಣದಲ್ಲಿ ಸಂಸ್ಥೆಯ ಕಳೆದ ಅವಧಿಯ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು.
ಅಧಿಕಾರ ವಹಿಸಿಕೊಂಡ ಅಧ್ಯಕ್ಷರಾದಜಗದೀಶ್ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಭರತ್ ಶೆಟ್ಟಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು ಮತ್ತು ಭಾರತೀಯ ಜನತಾ ಪಕ್ಷದ ಶಿಕ್ಷಣ ಪ್ರಕೋಷ್ಟದ ರಾಜ್ಯ ಸದಸ್ಯರಾಗಿ ಆಯ್ಕೆಯಾದ ಮುರಳಿ ಹೆಚ್ ಅವರನ್ನುಗೌರವಿಸಲಾಯಿತು.
ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ(ಎಮ್ಐಟಿಡಿಎ) ಪೂರ್ವಧ್ಯಕ್ಷರಾದ ಗೋಪಿನಾಥ್, ಕೇತನ್ಚಂದ್ರಾನ, ಸಾಯಿ ರಾವ್ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ಶಂಕರ್ ನಾರಾಯಣ ಪ್ರಾರ್ಥನೆ ನೆರವೇರಿಸಿದರು, ಜಗದೀಶ್ ಸ್ವಾಗತಿಸಿ, ರವಿ ಭಟ್ ವಂದನಾರ್ಪಣೆ ಸಲ್ಲಿಸಿದರು. ಮುರಳಿ ಕಾರ್ಯಕ್ರಮವನ್ನು ನಿರೂಪಿಸಿದರು.