ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್, ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ ಅಧೀನದ ಭಾರತದ ಪ್ರಮುಖ ಪೇಮೆಂಟ್ಸ್ ಮತ್ತು ಹಣಕಾಸು ಸೇವೆಗಳ ವಿತರಣಾ ಕಂಪನಿ ಆಗಿರುವ ಪೇಟಿಎಂ ಸಹಭಾಗಿತ್ವದಲ್ಲಿ ಇಂದು ಸ್ಯಾಮ್ಸಂಗ್ ವ್ಯಾಲೆಟ್ ನಲ್ಲಿ ಫ್ಲೈಟ್, ಬಸ್, ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಪಾಲುದಾರಿಕೆಯು ಸ್ಯಾಮ್ಸಂಗ್ ವಾಲೆಟ್ ಮೂಲಕ ನೇರವಾಗಿ ಅತ್ಯುತ್ತಮವಾದ ಮತ್ತು ಸಂಯೋಜಿತ ಬುಕಿಂಗ್ ಸೌಕರ್ಯವನ್ನು ಒದಗಿಸುವ ಮೂಲಕ ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪೇಟಿಎಂ ಮೂಲಕ ಸ್ಯಾಮ್ ಸಂಗ್ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ಒದಗಿಸಲಾಗುತ್ತದೆ.
ಫ್ಲೈಟ್ಗಳು ಮತ್ತು ಬಸ್ ಬುಕಿಂಗ್ಗಳು, ಚಲನಚಿತ್ರ ಟಿಕೆಟ್ ಖರೀದಿಗಳು ಮತ್ತು ಕಾರ್ಯಕ್ರಮಗಳ ಬುಕಿಂಗ್ಗಳು ಸೇರಿದಂತೆ ಎಲ್ಲವೂ ಸ್ಯಾಮ್ಸಂಗ್ ವ್ಯಾಲೆಟ್ ನಲ್ಲಿ ಸಂಯೋಜಿಸಲ್ಪಟ್ಟಿದ್ದು, ಈ ಪಾಲುದಾರಿಕೆಯ ಮೂಲಕ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಬಳಕೆದಾರರು ಈಗ ಪೇಟಿಎಂನ ಈ ಸೇವೆಗಳ ಸಂಪೂರ್ಣ ಲಾಭವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಗ್ಯಾಲಕ್ಸಿ ಸ್ಮಾರ್ಟ್ಫೋನ್ ಬಳಕೆದಾರರು ಫ್ಲೈಟ್, ಬಸ್ ಮತ್ತು ಚಲನಚಿತ್ರ ಬುಕಿಂಗ್ಗಾಗಿ ಪೇಟಿಎಂ ಆಪ್ ಅನ್ನು ಮತ್ತು ಕಾರ್ಯಕ್ರಮಗಳ ಟಿಕೆಟ್ ಬುಕಿಂಗ್ಗಾಗಿ ಪೇಟಿಎಂ ಇನ್ಸೈಡರ್ ಆಪ್ ಅನ್ನು ಬಳಸುತ್ತಾರೆ. ಈಗ ‘ಆಡ್ ಟು ಸ್ಯಾಮ್ಸಂಗ್ ವ್ಯಾಲೆಟ್’ ಫೀಚರ್ ಅನ್ನು ಬಳಸಿಕೊಂಡು ಗ್ರಾಹಕರು ನೇರವಾಗಿ ಸ್ಯಾಮ್ಸಂಗ್ ವ್ಯಾಲೆಟ್ಗೆ ತಾವು ಬುಕಿಂಗ್ ಮಾಡಿದ ಟಿಕೆಟ್ಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ವಿಮಾನ ನಿಲ್ದಾಣಗಳು, ಬಸ್ ಟರ್ಮಿನಲ್ಗಳು, ಸಿನಿಮಾ ಹಾಲ್ಗಳು, ಕಾರ್ಯಕ್ರಮದ ಸ್ಥಳಗಳು ಇತ್ಯಾದಿಗಳನ್ನು ಪ್ರವೇಶಿಸಲು ಅವರಿಗೆ ಈ ವ್ಯವಸ್ಥೆ ಅನುಕೂಲತೆಯನ್ನು ಒದಗಿಸುತ್ತದೆ. ಸ್ಯಾಮ್ಸಂಗ್ ಇಂಡಿಯಾ ಮತ್ತು ಪೇಟಿಎಂ ಹೊಸದಾಗಿ ಪ್ರಾರಂಭಿಸಲಾದ ಸೇವೆಗಗಳ ಮೊದಲ ಬುಕಿಂಗ್ ಮಾಡುವಾಗ ರೂ. 1150 ರವರೆಗಿನ ಅತ್ಯಾಕರ್ಷಕ ರಿಯಾಯಿತಿ ಕೊಡುಗೆಗಳನ್ನು ಶೀಘ್ರದಲ್ಲೇ ಪರಿಚಯಿಸಲಾಗುತ್ತದೆ.
ಪೇಟಿಎಂ ಆಪ್ ಪ್ರಯಾಣ ಮತ್ತು ಕಾರ್ಯಕ್ರಮ ಬುಕಿಂಗ್ಗಾಗಿ ಭಾರತೀಯರು ಬಳಸುವ ಅತ್ಯುತ್ತಮ ತಾಣವಾಗಿರುವುದರಿಂದ, ಸ್ಯಾಮ್ಸಂಗ್ ಜೊತೆಗಿನ ಈ ಪಾಲುದಾರಿಕೆಯು ಅದರ ಸೇವೆಗಳನ್ನು ಬಳಸಿಕೊಳ್ಳಲು ಬಳಕೆದಾರರಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಮತ್ತು ಈ ಪ್ರಯತ್ನದ ಮೂಲಕ ಗ್ರಾಹಕರಿಗೆ ಹೆಚ್ಚು ಅನುಕೂಲತೆಯನ್ನು ಒದಗಿಸಲಾಗುತ್ತದೆ.
ಪೇಟಿಎಂ ಜೊತೆಗಿನ ಸ್ಯಾಮ್ಸಂಗ್ ಇಂಡಿಯಾದ ಪಾಲುದಾರಿಕೆಯು ಸ್ಯಾಮ್ಸಂಗ್ ವ್ಯಾಲೆಟ್ ಮೂಲಕ ಬಳಕೆದಾರರ ಅನುಕೂಲತೆಯನ್ನು ಹೆಚ್ಚಿಸುವ ಅತ್ಯುತ್ತಮ ಸೇವೆಗಳನ್ನು ಒದಗಿಸುವ ಸ್ಯಾಮ್ಸಂಗ್ ಬದ್ಧತೆಯನ್ನು ಸಾರುತ್ತದೆ. ಸ್ಯಾಮ್ ಸಂಗ್ ವ್ಯಾಲೆಟ್ ಬಳಕೆದಾರರ ಡಿಜಿಟಲ್ ಜೀವನಕ್ಕೆ ಅಗತ್ಯವಿರುವ ಎಲ್ಲವನ್ನೂ ಹೊಂದಿರುವ ಬಳಸಲು ಸುಲಭವಾದ ಮತ್ತು ಸುರಕ್ಷಿತವಾದ ವೇದಿಕೆಯಾಗಿದೆ.
ಈ ಕುರಿತು ಮಾತನಾಡಿರುವ ಸ್ಯಾಮ್ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ನ ಹಿರಿಯ ನಿರ್ದೇಶಕ ಮಧುರ್ ಚತುರ್ವೇದಿ, “ಸ್ಯಾಮ್ಸಂಗ್ ವ್ಯಾಲೆಟ್ ಭಾರತದಲ್ಲಿನ ಜನಪ್ರಿಯ ಮೊಬೈಲ್ ಟ್ಯಾಪ್ ಮತ್ತು ಪೇಮೆಂಟ್ ವೇದಿಕೆ ಆಗಿದೆ. 2017ರಲ್ಲಿ ವ್ಯಾಲೆಟ್ ಸೇವೆ ಪ್ರಾರಂಭವಾದಾಗಿನಿಂದ ನಿರಂತರವಾಗಿ ವಿಕಸನ ಹೊಂದುತ್ತಲೇ ಇದೆ. ಈಗ ಪೇಟಿಎಂ ಸಹಯೋಗದೊಂದಿಗೆ ಸ್ಯಾಮ್ಸಂಗ್ ವ್ಯಾಲೆಟ್ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಈ ಫೀಚರ್ ಗಳು ಗ್ಯಾಲಕ್ಸಿ ಸ್ಮಾರ್ಟ್ಫೋನ್ ಬಳಕೆದಾರರಿಗೆ ಹಲವು ಆಪ್ ಗಳನ್ನು ಬಳಸುವ ಅಗತ್ಯವೇ ಇಲ್ಲದೇ ಒಂದೇ ಕಡೆ ಬಸ್ ಮತ್ತು ಏರ್ಲೈನ್ ಟಿಕೆಟ್ಗಳು, ಹಾಗೆಯೇ ಚಲನಚಿತ್ರ ಮತ್ತು ಕಾರ್ಯಕ್ರಮ ಟಿಕೆಟ್ಗಳನ್ನು ಸುಲಭವಾಗಿ ಖರೀದಿಸಲು ಅನುವು ಮಾಡಿ ಕೊಡುತ್ತದೆ. ಇದಲ್ಲದೆ, ಬಳಕೆದಾರರು ತಮ್ಮ ಗ್ಯಾಲಕ್ಸಿ ಸ್ಮಾರ್ಟ್ಫೋನ್ನ ಮುಖಪುಟದಲ್ಲಿ ಅಥವಾ ಹೋಮ್ ಸ್ಕ್ರೀನ್ ನಲ್ಲಿ ಸ್ವೈಪ್ ಮಾಡುವ ಮೂಲಕ ಈ ಟಿಕೆಟ್ಗಳನ್ನು ಖರೀದಿಸಬಹುದು” ಎಂದು ಹೇಳಿದರು.
ಈ ಕುರಿತು ಮಾತಾಡಿರುವ ಪೇಟಿಎಂ ವಕ್ತಾರರು, “ಮೊಬೈಲ್ ಪಾವತಿಗಳ ಪ್ರವರ್ತಕರಾಗಿ, ಭಾರತೀಯರಿಗೆ ಅನುಕೂಲವನ್ನು ಒದಗಿಸಲು ಮತ್ತು ಬಳಕೆದಾರರಿಗೆ ಉತ್ತಮ ಸೌಕರ್ಯವನ್ನು ಒದಗಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ, ಗ್ರಾಹಕ ಎಲೆಕ್ಟ್ರಾನಿಕ್ಸ್ ವಿಭಾಗದ ದೈತ್ಯ ಕಂಪನಿ ಆಗಿರುವ ಸ್ಯಾಮ್ಸಂಗ್ ಇಂಡಿಯಾ ಜೊತೆಗೆ ಪಾಲುದಾರರಾಗಲು ನಾವು ಸಂತೋಷ ಪಡುತ್ತೇವೆ. ಸ್ಯಾಮ್ಸಂಗ್ನ ಅತ್ಯಾಧುನಿಕ ತಂತ್ರಜ್ಞಾನವನ್ನು ಪೇಟಿಎಂ ನ ವ್ಯಾಪಕ ಶ್ರೇಣಿಯ ಸೇವೆಗಳ ಜೊತೆಗೆ ಸಂಯೋಜಿಸುವ ಮೂಲಕ ಗ್ರಾಹಕರು ತಮ್ಮ ಬುಕಿಂಗ್ ಮತ್ತು ಪಾವತಿಗಳನ್ನು ಒಂದೇ ಏಕೀಕೃತ ಪ್ಲಾಟ್ಫಾರ್ಮ್ ಮೂಲಕ ನಿರ್ವಹಿಸಬಹುದಾದ ಪ್ರಕ್ರಿಯೆಯನ್ನು ನಾವು ಹಿಂದೆಂದಿಗಿಂತಲೂ ಸುಲಭಗೊಳಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಲಭ್ಯತೆ
ಸ್ಯಾಮ್ಸಂಗ್ ವ್ಯಾಲೆಟ್ ಬಳಕೆದಾರರು ತಮ್ಮ ಆಪ್ ಅನ್ನು ಅಪ್ಡೇಟ್ ಮಾಡುವ ಮೂಲಕ ಹೊಸ ಸೇವೆಗಳನ್ನು ಪಡೆಯಬಹುದು.
ಸ್ಯಾಮ್ಸಂಗ್ ವ್ಯಾಲೆಟ್ನಲ್ಲಿ ಹೊಸ ಪ್ರೋಗ್ರಾಮ್ ಗಳು ಮತ್ತು ಇತರ ಆಫರ್ ಗಳು
ಸ್ಯಾಮ್ಸಂಗ್ ವ್ಯಾಲೆಟ್ ಶೀಘ್ರದಲ್ಲೇ ರೆಫರಲ್ ಪ್ರೋಗ್ರಾಂ ಅನ್ನು ಪ್ರಾರಂಭಿಸಲಿದೆ. ಪ್ರತಿ ಬಾರಿ ನೀವು ಹೊಸ ಬಳಕೆದಾರರನ್ನು ರೆಫರ್ ಮಾಡಿದಾಗ ಅವರು ಸ್ಯಾಮ್ಸಂಗ್ ವ್ಯಾಲೆಟ್ ನಲ್ಲಿ ಯಶಸ್ವಿಯಾಗಿ ನೋಂದಣಿ ಮಾಡಿದ ಬಳಿಕ ನಂತರ ರೆಫರರ್ ಮತ್ತು ರೆಫರಿ ಇಬ್ಬರೂ ಅಮೆಜಾನ್ ನ ರೂ. 100 ಮೌಲ್ಯದ ಗಿಫ್ಟ್ ಕಾರ್ಡ್ ಅನ್ನು ಪಡೆಯುತ್ತಾರೆ. ಇದರರ್ಥ ಸ್ಯಾಮ್ಸಂಗ್ ವಾಲೆಟ್ ಅನ್ನು ಬಳಸಲು ನಿಮ್ಮ ಆಪ್ತರು ಮತ್ತು ಆತ್ಮೀಯರನ್ನು ಆಹ್ವಾನಿಸುವುದರಿಂದ ನೀವು ರೂ. 300 ವರೆಗೆ ಗಳಿಸಬಹುದು.
ಸ್ಯಾಮ್ಸಂಗ್ ವ್ಯಾಲೆಟ್ ಟ್ಯಾಪ್ ಆಂಡ್ ಪೇ ಆಫರ್
ಸ್ಯಾಮ್ಸಂಗ್ ವ್ಯಾಲೆಟ್ ಸುರಕ್ಷಿತ ಮತ್ತು ಅನುಕೂಲಕರವಾದ ಟ್ಯಾಪ್ ಟು ಪೇ ಫೀಚರ್ ಅನ್ನು ಒದಗಿಸುತ್ತದೆ. ಸ್ಯಾಮ್ಸಂಗ್ ಶೀಘ್ರದಲ್ಲೇ ಸ್ಯಾಮ್ಸಂಗ್ ವ್ಯಾಲೆಟ್ ಟ್ಯಾಪ್ ಆಂಡ್ ಪೇ ಆಫರ್ ಅನ್ನು ಪ್ರಕಟಿಸಲಿದೆ. ಬಳಕೆದಾರರು ತಮ್ಮ ಆಯ್ಕೆಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಮೊಬೈಲ್ ಟ್ಯಾಪ್ ಆಂಡ್ ಪೇ ಫೀಚರ್ ಬಳಸಿಕೊಂಡು ಪಾವತಿ ಮಾಡಬಹುದು. ಆಫರ್ ಅವಧಿಯಲ್ಲಿ, ಬಳಕೆದಾರರು ನಾಲ್ಕು ಟ್ಯಾಪ್ ಆಂಡ್ ಪೇ ವಹಿವಾಟುಗಳನ್ನು ಪೂರ್ಣಗೊಳಿಸಿದಾಗ ರೂ. 250 ಮೌಲ್ಯದ ಅಮೆಜಾನ್ ನ ಗಿಫ್ಟ್ ಕಾರ್ಡ್ ಅನ್ನು ಪಡೆಯುತ್ತಾರೆ.