ಸ್ಯಾಂಡಲ್ವುಡ್ ನಾಯಕ ನಟ ನೀನಾಸಂ ಸತೀಶ್ ಮ್ಯಾಟ್ನಿ ಸಿನಿಮಾದ ಶೂಟಿಂಗ್ ಕೆಲಸ ಪೂರ್ಣಗೊಂಡಿದೆ ಇನ್ನೇನು ಕೇಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದೆ ಎಂದು ನಾಯಕ ನಟ ನೀನಾಸಂ ಸತೀಶ್ ತುಂಬಾ ಖುಷಿ ವ್ಯಕ್ತಪಡಿಸಿದರು.
ಮ್ಯಾಟ್ನಿ ಸಿನಿಮಾದಲ್ಲಿ “ಸಂಜೆ ಮೇಲೆ ಸುಮ್ನೆ ಹಂಗೆ ಪೋನ್ ಮಾಡ್ಲಾ ನಿಂಗೆ ” ಅನ್ನುವ ಹಾಡು ಇದೆ ಅಂತೆ. ಅದು ಸೂಪರ್ ಹಿಟ್ ಆಗುತ್ತದೆ ಅನ್ನುವ ನಿರೀಕ್ಷೆ ಈಗಲೇ ಮೂಡಿದೆ ಅಂತ ಸತೀಶ್ ನೀನಾಸಂ ಹೇಳುತ್ತಾರೆ.
ಮ್ಯಾಟ್ನಿ ಚಿತ್ರದಲ್ಲಿ ಇಬ್ಬರು ಹೀರೋಯಿನ್ಸ್ ಇದ್ದು, ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ, ನೀನಾಸಮ ಸತೀಶ್ ಅವರಿಗೆ ಜೋಡಿ ಆಗಿದ್ದಾರೆ. ಈ ನಾಯಕಿಯರಿಗೆ ಒಂದೊಂದು ಸ್ಪೆಷಲ್ ಸಾಂಗ್ ಕೂಡ ಈ ಚಿತ್ರದಲ್ಲಿದೆ ಅಂತಾ ಸತೀಶ್ ತಿಳಿಸಿದ್ದಾರೆ.
ಮನಾಲಿಯಲ್ಲಿ ಅದಿತಿ ಪ್ರಭುದೇವ ಮತ್ತು ಸತೀಶ್ ಜೋಡಿಯ ಹಾಡನ್ನ ಚಿತ್ರೀಕರಿಸಿದ್ದಾರೆ. ಈ ಹಾಡು ಕೂಡ ಸೂಪರ್ ಆಗಿಯೇ ಮೂಡಿ ಬಂದಿದೆ.
ಸಂಜೆ ಮೇಲೆ ಸುಮ್ನೆ ಹಂಗೆ ಪೋನ್ ಮಾಡ್ಲಾ ನಿಂಗೆ ಅನ್ನುವ ಹಾಡಲ್ಲಿ ರಚಿತಾ ರಾಮ್ ಇದ್ದಾರೆ. ಹೀಗೆ ಒಳ್ಳೆ ಹಾಡುಗಳೆ ಮ್ಯಾಟ್ನಿ ಸಿನಿಮಾದಲ್ಲಿವೆ.ಮ್ಯಾಟ್ನಿ ಪಕ್ಕಾ ಎಂಟರಟೈನರ್ ಸಿನಿಮಾ ಅಂತಾ ಸುಳಿವು ನೀಡತ್ತಿದ್ದಾರೆ ಸಿನಿಮಾ ತಂಡದವರು.
ಮ್ಯಾಟ್ನಿ ಸಿನಿಮಾವೊಂದು ಕಂಪ್ಲೀಟ್ ಪ್ಯಾಕೇಜ್ ಆಗಿದೆ. ಪ್ರೇಕ್ಷಕರು ಈ ಚಿತ್ರವನ್ನ ತುಂಬಾನೆ ಎಂಜಾಯ್ ಮಾಡುತ್ತಾರೆ ಅಂತ ನೀನಾಸಂ ಸತೀಶ್ ಭರವಸೆಯ ಮಾತುಗಳನ್ನ ಈಗಲೇ ಹೇಳಿಕೊಂಡಿದ್ದಾರೆ.
ಮ್ಯಾಟ್ನಿ ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ, ಪೂರ್ಣ ಮತ್ತು ನಾಗಭೂಷಣ್ ಅಭಿನಯಿಸಿದ್ದಾರೆ. ಈ ಮೂಲಕ ಸಿನಿಮಾ ಸಖತ್ ಎಂಟರಟೈನಮೆಂಟ್ ಆಗೇ ಇರುತ್ತದೆ ಅನ್ನುವ ಖುಷಿಯನ್ನ ಕೂಡ ಸತೀಶ್ ಈಗ ಶೇರ್ ಮಾಡಿದ್ದಾರೆ.
ಮ್ಯಾಟ್ನಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕ್ಯಾಮೆರಾಮನ್ ಸುಧಾಕರ್ ಎಸ್ ರಾಜ್ ಕೆಲಸವನ್ನು ಸತೀಶ್ ತುಂಬಾನೇ ಮೆಚ್ಚಿಕೊಂಡಿದ್ದಾರೆ. ಇನ್ನು ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ.
ಸದ್ಯಕ್ಕೆ ಸಿನಿಮಾ ತಂಡ ಡಬ್ಬಿಂಗ್ ಕೆಲಸವನ್ನ ಪೂರ್ಣಗೊಳಿಸಿದೆ. ಅದೇ ಖುಷಿಯಲ್ಲಿಯೇ ಇಡೀ ಟೀಮ್ ರಿಲೀಸ್ ನ ತಯಾರಿಯತ್ತ ಕೆಲಸ ಮಾಡುತ್ತಿದೆ.