ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರೂಪಕಿ ಅಪರ್ಣಾ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅರ್ಣರವರಿಗೆ 57 ರ ವಯಸ್ಸಾಗಿತ್ತು. ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು.
ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ರಾಜ್ಯ ಸರಕಾರದ ಪ್ರಾಯೋಜಿತ ಕಾಯಕ್ರಮಗಳನ್ನು ಹೆಚ್ಚಾಗಿ ಇವರೆ ನಿರೂಪಿಸುತ್ತಿದ್ದರು. ಅಪ್ಪಟ್ಟ ಕನ್ನಡ, ಶುದ್ಧವಾದ ಭಾಷೆಯ ನಿರೂಪಣಾ ಶೈಲಿಯು ಎಲ್ಲರು ಮೆಚ್ಚುವಂತಾದಾಗಿತ್ತು. ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ, ನಟಿ ಕೊನೆಯುಸಿರೆಳೆದಿದ್ದಾರೆ.
ಮಜಾ ಟಾಕೀಸ್ನ ʼವರುʼ ಆಗಿ ಎಲ್ಲರ ಮನಸ್ಸನ್ನು ಗೆದ್ದಿದ್ದ ಇವರು ಮನೆ ಮಾತಾಗಿದ್ದರು.