ಪುತ್ತೂರು: ಕರ್ನಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಲ್ಲಿ ಭಾರೀ ಕಳ್ಳತನ ನಗದು, ಚಿನ್ನ ದೋಚಿ ಪರಾರಿಯಾದ ಖದೀಮರು.
ಕೇರಳ-ಕರ್ನಾಟಕ ಗಡಿ ಭಾಗದಲ್ಲಿರುವ ಕರ್ನಾಟಕ ಬ್ಯಾಂಕ್. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಡ್ಯನಡ್ಕ. ಕೋಟ್ಯಾಂತರ ರೂಪಾಯಿ ದೋಚಿರುವ ಖದೀಮರು.
ಸುಮಾರು 20 ವರುಷ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಬ್ಯಾಂಕ್. ಕಿಟಕಿ ಮುರಿದು ಒಳನುಗ್ಗಿದ ಕಳ್ಳರಿಂದ ಭಾರೀ ಕಳವು ನಡೆದಿದೆ.
ಬ್ಯಾಂಕ್ ನ ಸುತ್ತಲೂ ಕಾಡು-ಪೊದೆಗಳೇ ಆವರಿಸಿದೆ.ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್. ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.