ಮಂಗಳೂರು : NIA ರಾಷ್ಟ್ರೀಯ ತನಿಖಾ ದಳ ಸಿಬ್ಬಂದಿಗಳು ರಾಜ್ಯದ ಮಸೀದಿ ಹಾಗೂ ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಪ್ರಸಾರ ಮಾಡುವ ಮದರಸಾಗಳೇ ಭಯೋತ್ಪಾದಕರ ಅಡಗು ತಾಣಗಳಾಗಿದ್ದು ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ ಎಂದು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಯಾಕೆಂದರೆ, ಮದರಸಗಳೇ ಭಯೋತ್ಪಾದಕರ ತಾಣವಾಗಿದೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ. ಬಾಂಬರ್ ಮಸೀದಿಗೆ ಹೋಗಿ ನಮಾಜ್ ಮಾಡಿ ಬಟ್ಟೆ ಬದಲಿಸಿದ್ದಾನೆ ದಿನಕ್ಕೊಂದು ಕಡೆ ತಿರುಗಾಟ ನಡೆಸುತ್ತಿದ್ದಾನೆ ಭಟ್ಕಳ ,ಬಳ್ಳಾರಿ ,ಬೆಂಗಳೂರು ಎಲ್ಲ ಕಡೆ ಸುತ್ತಾಟ ನಡೆಸಿದ್ದಾನೆ ಇವನ ಹಿಂದೆ ಉಗ್ರರ ತಂಡವೇ ಇದೆ ಎಂದು ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರನನ್ನು ಬಂಧಿಸಬೇಕಾದರೆ ರಾಷ್ಟ್ರೀಯ ತನಿಖಾ ದಳದ (NIA) ಪೊಲೀಸರು ರಾಜ್ಯದಲ್ಲಿರುವ ಎಲ್ಲ ಮದರಸಾಗಳನ್ನು ಶೋಧನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ದಿನಕ್ಕೊಂದು ವೇಷ ಬದಲಿಸಿ ತಿರುಗಾಡುವ ಬಾಂಬರ್ ಭಯೋತ್ಪಾದಕರಿಗೆ ಆಸರೆ ನೀಡುವ ಕೆಲಸವನ್ನ ಕರ್ನಾಟಕದ ಕೆಲವು ಮದರಸಗಳು ಮಾಡುತ್ತಿದೆ. ಅಲ್ಲಿದ್ದಂತಹ ಮೌಲ್ವಿಗಳು ಮಾಡುತ್ತಿದ್ದಾರೆ. ಎನ್ಐಎ ಹಾಗೂ ಪೊಲೀಸ್ ಇಲಾಖೆಗೆ ಬಲವಾಗಿ ಆಗ್ರಹ ಮಾಡುತ್ತೇನೆ. ತಾವು ಕರ್ನಾಟಕದಲ್ಲಿರುವ ಎಲ್ಲ ಮಸೀದಿಗಳು ಹಾಗೂ ಮದರಸಾಗಳ ಮೇಲೆ ದಾಳಿ ಮಾಡಿದರೆ ಆರೋಪಿ ಸಿಗುತ್ತಾನೆ ಎಂದು ವಿವಧಾತ್ಮಕ ಹೇಳಿಕೆ ನೀಡಿದ್ದಾರೆ.