ನಮ್ಮ ದೇಶದಲ್ಲಿ ಬ್ರಿಟಿಷ್ ಶಿಕ್ಷಣ ಪದ್ಧತಿ ಬಂದಾಗಿನಿಂದ ಮಕ್ಕಳು, ಪಾಲಕರು ವಿದ್ಯೆಯನ್ನು ಬಹು ಸಂಕುಚಿತ ಅರ್ಥದಲ್ಲಿ ತಿಳಿದುಕೊಂಡು ಬಳಸಲಾರಂಭಿಸಿದರು. ಪಡೆದ ಅಂಕಗಳು ಮತ್ತು ಕೀರ್ತಿ ಕೇವಲ ಪದವಿ, ಪದಕಗಳಿಗಷ್ಟೇ ಸೀಮಿತವಾದಂತೆ ಕಾಣುತ್ತದೆ. ಆ ಸಮಯಕ್ಕೆ ಅಭ್ಯಾಸ ಮಾಡಿ ಒಳ್ಳೆಯ ಅಂಕಗಳಿಸಿ ಉತ್ತಮ ಶ್ರೇಣಿಯಲ್ಲಿ ಪಾಸಾದರೆ ಮುಗಿಯಿತು ಮುಂದಿನ ತರಗತಿಯ ಅಭ್ಯಾಸ ನಾಳೆಯಿಂದ ಪ್ರಾರಂಭಿಸಿದರೆ ಅಲ್ಲಿಗೆ ಹಿಂದಿನದ್ದು ಮುಗಿಯಿತು. ನಮ್ಮಲ್ಲಿ ಒಂದು ಗಾದೆಯಿದೆ ಮುಂದಿನದ್ದೇಲ್ಲ ಬಾಯಿಪಾಠ ಹಿಂದಿನದ್ದೇಲ್ಲ ಸಪಾಠ ಅಂದರೆ ಕೇವಲ ಮೂರು ಅಥವಾ ಆರು ತಿಂಗಳು ನೆನೆಪಿನಲ್ಲಿವಷ್ಟೇ ನಮ್ಮ ತಲೆಯನ್ನು ನಾವು ಸಿದ್ಧ ಪಡಿಸಿಕೊಂಡಿದ್ದೇವೆ. ಆದರೆ ಇದು ನಮ್ಮ ಗುರುಕುಲದ ಶಿಕ್ಷಣ ಪದ್ದತಿಯಲ್ಲ. ಗುರುಕುಲದಲ್ಲಿ ಎಲ್ಲವೂ ಮುಖೋದ್ಗತವಾಗಿರುತ್ತಿತ್ತು ಉದಾಹರಣೆಗೆ ನಮ್ಮ ವೇದಗಳನ್ನೇ ತೆಗೆದುಕೊಳ್ಳಿ ಸಹಸ್ರಾರು ವರ್ಷದಿಂದ ಬಾಯಿಯಿಂದ ಬಾಯಿಗೆ ಸಾಗುತ್ತ ಬಂದಿವೆ. ಗುರುಕುಲ ಶಿಕ್ಷಣದ ಮತ್ತೊಂದು ಗಮನಾರ್ಹ ಅಂಶವೆಂದರೆ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು ಜೀವನದಲ್ಲಿ ವಿದ್ಯೆ ಇಲ್ಲದಿದ್ದರೂ ಸಾಮಾನ್ಯ ಜ್ಞಾನದಿಂದಾರೂ ಜೀವನವನ್ನು ನಡೆಸುವ ಮಟ್ಟಿಗೆ ಗುರುಕುಲವು ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದ್ದವು ಆದರೆ ಇಂದಿನ ಶಿಕ್ಷಣ ವಿದ್ಯಾರ್ಥಿಗಳನ್ನು ಮಾರ್ಕ್ಸವಾದಿ (ಅಂಕವಾದಿ)ಯನ್ನಾಗಿ ಮಾಡುತ್ತಿವೆ. ಪ್ರಾಯೋಗಿಕ ಜ್ಞಾನ ಅತ್ಯಂತ ಕನಿಷ್ಠ ಮಟ್ಟದಲ್ಲಿ ನಾವು ನಮ್ಮ ಯುವಜನಾಂಗಕ್ಕೆ ನೀಡುತ್ತಿದ್ದೆವೆ ಎಂದರೆ ತಪ್ಪಾಗಲಾರದು.
ಇದಕ್ಕೆ ಜ್ವಲಂತ ಉದಾಹರಣೆಗಳು ಸಿಗುತ್ತವೆ. ಲೇಟೆಸ್ಟ್ ಅಂದರೆ ನಮ್ಮ ಓಲಂಪಿಕ್ ಕುಸ್ತಿಪಟುಗಳ ಉದಾಹರಣೆ. ದಂಗಲ್ ಚಿತ್ರದಲ್ಲಿ ನೋಡಿದಂತೆ ತಮ್ಮನ್ನು ಚುಡಾಯಿಸುವ ಹುಡುಗರ ವಿರುದ್ಧ ತಿರುಗಿಬೀಳುವ ಹುಡುಗಿಯರು ಅವರನ್ನು ಹಣ್ಷುಗಾಯಿ ನೀರುಗಾಯಿ ಮಾಡುವುದನ್ನು ನೋಡಿದ ಅಪ್ಪ ತನ್ನ ಮಕ್ಕಳನ್ನು ಕುಸ್ತಿಪಟುಗಳನ್ನಾಗಿ ಬೆಳೆಸುತ್ತಾನೆ. ಅವರೇ ಪೋಘಟ್ ಸಹೋದರಿಯರು. ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮೆಡಲ್ಲುಗಳನ್ನು ಬಾಚಿಕೊಂಡವರು.
ಆದರೆ ಇದೀಗ ತಿಂಗಳಿಂದ ವಿನೇಶ ಪೋಘಾಟ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಉಂಟಾಗಿದೆ ಎಂದು ಕಣ್ಣೀರಾಗುತ್ತಿದ್ದಾಳೆ. ಅವಳ ಜೊತೆ ಇನ್ನಷ್ಟು ಕ್ರೀಡಾಪಟುಗಳು. ಧರಣಿ, ಉಪವಾಸಗಳು ನಡೆದಿವೆ. ಇವರ ಬೆಂಬಲಕ್ಕೆ ಇದೀಗ ಹೊಸದಾಗಿ ಪಂಜಾಬಿನ ರೈತಮುಖಂಡರೂ ಎಂಟ್ರಿ ಕೊಟ್ಟಿದ್ದಾರೆ. ಆದರೆ ನನ್ನ ಪ್ರಶ್ನೆಯೆಂದರೆ ಕುಸ್ತಿಯನ್ನು ಇವರೆಲ್ಲ ಕಲಿತಿದ್ದು ಕೇವಲ ಪದಕಗಳನ್ನು ಗೆಲ್ಲುವುದಕ್ಕಾಗಿ ಮಾತ್ರವೇ? ಪದಕ ಗೆದ್ದನಂತರ ಯಾರಾದರೂ ಇವರ ಕೈಹಿಡಿದು ಎಳೆದರೆ ಅಲ್ಲೇ ಒಂದು ರಪ್ ಅಂತ ಕೊಡಲಾಗದ ಇವರ ಕುಸ್ತಿ, ಇವರ ದೈಹಿಕ ಬಲ ತೆಗೆದುಕೊಂಡು ಏನು ಮಾಡುವುದು?
ದೇಶವಿದೇಶಗಳಲ್ಲಿ ಸುತ್ತಾಡಿ, ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ ಈ ಹೆಣ್ಣುಮಕ್ಕಳಿಗೆ ಸ್ವಂತದ ರಕ್ಷಣೆ ಮಾಡಿಕೊಳ್ಳಲೂ ಆಗದು ಎಂದಾದರೆ ಇವರ ಮೆಡಲ್ಲುಗಳನ್ನು ಒಯ್ದು ಗಂಗಾ ನದಿಗೆ ಒಗೆಯುವುದೇ ಒಳ್ಳೆಯದು. ಮುಂದಿನ ಯುವ ಪೀಳಿಗೆಗೆ ಇವರಂತಹ ರೋಲ್ ಮಾಡೆಲ್ಗಳು ? ನಿಜವಾಗಿಯೂ ಇವರ ಮೇಲೆ ದೌರ್ಜನ್ಯ ಆಗಿದ್ದರೆ ಎಷ್ಟು ದಿನಗಳಿಂದ ಇದು ನಡೆಯುತ್ತಿದೆ? ಮೊದಲ ಸಲವೇ ಇವರು ಯಾಕೆ ತಮ್ಮ ಕೈಚಳಕ ತೋರಿಸಲಿಲ್ಲ? ಎಲ್ಲರೂ ಒಗ್ಗಟ್ಟಾಗಿ ಒಂದು ಸಲ ಕೊಟ್ಟುನೋಡಬಹುದಿತ್ತಲ್ಲವೇ? ಯಾಕೆ ಮುಸುಮುಸು ಅಳುತ್ತಿದ್ದಾರೆ? ಇವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾದ ವ್ಯಕ್ತಿಯು ಪ್ರಭಾವಶಾಲಿಯಾಗಿರುವುದು ನಿಜ ಆದರೂ ಏನಾದರೂ ಒಂದೆರಡು ಸಾಕ್ಷ್ಯಗಳು, ದಾಖಲೆಗಳು ಅವನ ವಿರುದ್ಧ ಇರಲೇಬೇಕಲ್ಲವೇ? ಅವನ್ನು ಕೋರ್ಟಿಗೆ ನೀಡಿ ಮನೆಯಲ್ಲಿರುವುದನ್ನು ಬಿಟ್ಟು ಕೆಟ್ಟ ಬಿಸಿಲಿನಲ್ಲಿ ಧರಣಿ ಕೂಡಲು ಯಾರು ಪ್ರಚೋದಿಸುತ್ತಿದ್ದಾರೆ? ವಿರೋಧಿ ಪಕ್ಷಗಳ ಮುಖಂಡರಂತೂ ತುಂಬ ಖುಷಿಯಿಂದ ಬಂದು ಬಂದು ಇವರ ಕ್ಷೇಮಸಮಾಚಾರ ವಿಚಾರಿಸುತ್ತಿದ್ದಾರೆ.
ಅಷ್ಟಕ್ಕೂ ಇಲ್ಲಿ ನಡೆಯುತ್ತಿರುದಾದರೂ ಎನು? ಈ ಕುಸ್ತಿಪಟುಗಳ ಹಿಂದೆ ನಿಂತು ತಮ್ಮ ಆಟವನ್ನು ಆಡುತ್ತಿರುವ ಕೈ ಯಾರದ್ದು ಇಲ್ಲಿದೆ ಕಾಣದ ಸತ್ಯ.
ನಿಮಗೆಲ್ಲ ಗೊತ್ತಿರುವ ಹಾಗೆ, ೨೦೨೩ ಜನವರಿಯಲ್ಲಿ ಕುಸ್ತಿ ಫೆಡರೇಶನ್ ಅಧ್ಯಕ್ಷನನ್ನ ವಜಾಮಾಡಬೇಕೆಂದು ಪ್ರಾರಂಭವಾದ ಕುಸ್ತಿಪಟುಗಳ ಪ್ರತಿಭಟನೆ ಪ್ರಸ್ತುತ ಲೈಂಗಿಕ ಕಿರುಕುಳದ ಆರೋಪದೊಂದಿಗೆ ಮುಂದುವರೆಯುತ್ತಲೇ ಇದೆ. ಕುಸ್ತಿಪಟುಗಳ ಪರವಾಗಿ ಹಲವರಿದ್ದರೆ , ಕುಸ್ತಿ ಫೆಡರೇಶನ್ ಅಧ್ಯಕ್ಷನ ಪರವಾಗಿ ಕೆಲವರಿದ್ದಾರೆ. ಸಾಮಾನ್ಯ ಜನ ಮಾತ್ರ, ಇನ್ನು ಸತ್ಯದ ಅರಿವಿಲ್ಲದೆ ಮೂರ್ಖರಾಗಿದ್ದಾರೆ. ಹೋರಾಟಗಾರರ ಕೆಲವೊಂದು ಸಂಶಯಾಸ್ಪದ ನಡೆಗಳನ್ನು ಹತ್ತಿರ ದಿಂದ ನೋಡಿ , ಇದರ ಹಿಂದೇನೋ ಇದೆ ಎನ್ನುತ್ತಿದ್ದಾರೆ. ಕೆಲವೊಂದು ಸಂಶಯಗಳು ಎಡಬಿಡದೆ ಜನರನ್ನು ಕಾಡುತ್ತಿವೆ. ಈ ಎಲ್ಲಾ ಸಂಶಯಗಳಿಗೂ ಕಾರಣಗಳು ಕೂಡ ಇವೆ. ಆ ಕಾರಣಗಳು ಹನ್ನೆರೆಡು ವರ್ಷಗಳ ಹಿಂದಿನಿಂದಲೂ ಪ್ರಾರಂಭವಾಗುತ್ತವೆ.
2011 ರಲ್ಲಿ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಎಂದಿನಂತೆ ಚುನಾವಣೆ ನಡೆದಿರುತ್ತದೆ ಮತ್ತು ಆ ಚುನಾವಣೆಯನ್ನು ಜಮ್ಮು ಕಾಶ್ಮೀರ ಮೂಲದ ಕುಸ್ತಿ ಪಟು ದುಶ್ಯಂತ್ ಶರ್ಮಾ ಗೆದ್ದು, ಅಧ್ಯಕ್ಷರಾಗುತ್ತಾರೆ. ಇದಾದ ನಂತರ ದೆಹಲಿ ಹೈಕೊರ್ಟ ಮರುಚುನಾವಣೆಯ ಆದೇಶವನ್ನು ನೀಡುತ್ತದೆ. ಆಗ ಕಾಂಗ್ರೇಸ್ಸನ ಇಬ್ಬರು ಲೋಕಸಭಾ ಸದಸ್ಯರು ಕಾಂಗ್ರೇಸ್ಸನ ಅಧಿನಾಯಕಿಯ ಕಾಲಿಗೆಬಿದ್ದು , 2012ರಲ್ಲಿ ಇದೇ ಬ್ರಿಜ್ ಭೂಷಣ ಸಿಂಗ್ ಫೇಡರೇಷನ್ನ ಅಧ್ಯಕ್ಷನಾಗುತ್ತಾನೆ.
2015ರಲ್ಲಿ ಮತ್ತೆ ಚುನಾವಣೆ ನಡೆಯುವಷ್ಟರಲ್ಲಿ ಬ್ರಿಜ್ ಭೂಷಣ್ ಬಿಜೆಪಿ ಸೇರಿಕೊಂಡಿರುತ್ತಾರೆ ಮತ್ತು 2014ರಲ್ಲೇ ಬಿಜೆಪಿ ಕೇಂದ್ರ ಸರ್ಕಾರವನ್ನ ರಚಿಸಿರುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯ ಬೆಂಬಲದಿಂದ ಮತ್ತೆ ಒಕ್ಕೂಟದ ಅಧ್ಯಕ್ಷರಾಗುತ್ತಾರೆ ಬ್ರಿಜ್. 2019ರಲ್ಲಿ ಕೂಡ ಇದು ಪುನರಾವರ್ತಿತವಾಗುತ್ತದೆ. ಇತ್ತ ಮೂರುಬಾರಿ ಭಾರತೀಯ ಕುಸ್ತಿ ಒಕ್ಕೂಟದ(WFI) ಅಧ್ಯಕ್ಷರಾದ ಬ್ರಿಜ್ ಭೂಷಣ್ ಅವಧಿಯಲ್ಲಿ, ಹಲವಾರು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಪದಕಗಳನ್ನ ಬಾಚಿಕೊಳ್ಳುತ್ತದೆ. 2021ರ ವೇಳೆಗೆ ಬಿಜ್ ಭೂಷಣ್ ಭಾರತ ಕುಸ್ತಿ ಒಕ್ಕೂಟ ಕಂಡ ಯಶಸ್ವಿ ಅಧ್ಯಕ್ಷ ಎನಿಸಿಕೊಳ್ಳುತ್ತಾರೆ. ಅಂದಿನಿಂದ ಇಂದಿನ ವರೆಗೆ ಇದು ಉತ್ತರ ಪ್ರದೇಶ ಮತ್ತು ಹರ್ಯಾಣ ಕುಸ್ತಿ ಫೆಡರೆಷನ್ ಮಧ್ಯದ ಸಂಘರ್ಷವಾಗಿ ಪರಿಣಮಿಸಿದೆ. ಇಂದಿನ ಈ ಪದಕ ವಿಜೇತರೆ ಹಿಂದೆ ಡೊಂಪಿಂಗ್ ಕೇಸ್ನಲ್ಲಿ ಸಿಲುಕಿದ್ದನ್ನು ನೋಡಿದ್ದೇವೆ. ಮತ್ತೊಂದು ಬಾರಿ ಭಾರತೀಯ ಜರ್ಸಿ ತೊಡುವ ಬದಲಾಗಿ ಪ್ರಾಯೋಜಕತ್ವ ನೀಡಿರುವ ಕಂಪನಿಯ ಜರ್ಸಿ ತೊಟ್ಟು ಆಡಿದ್ದನ್ನು ಈ ದೇಶವೇ ಕಂಡಿದೆ. ಆದರೂ ಈ ಸಯಮದಲ್ಲೇ ಈ ದಂಗೆ ಪುನಃ ಹುಟ್ಟಲು ಕಾರಣವೇನು?
ಮುಂದಿನ ವರುಷ ಹರಿಯಾಣ ಚುನಾವಣೆ ಬರುತ್ತಿದೆ. ಈ ವರುಷ ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಚುನಾವಣೆಯಿದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಮುಂದಿನ ವರುಷ ಲೋಕಸಭಾ ಚುನಾವಣೆಯಿದೆ. ಒಂದು ವೇಳೆ ಈ ಆರೋಪ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ ಎನ್ನುವ ಹುಸಿ ಬೀಜ ಭಿತ್ತಿದರೆ, ಇದರ ಫಲ ಯಾವ ಪಕ್ಷ ಅನುಭವಿಸುತ್ತದೆ ? ಇದನ್ನೇ ಚುನಾವಣೆಯ ಟೂಲ್ ಕಿಟ್ ಎಂದು ಯಾಕೆ ಬಳಿಸಬಾರದು ? ಯೋಚಿಸಿ.
ಸಂಸದನೇ ಇರಲಿ , ಕುಸ್ತಿಪಟುವೇ ಇರಲಿ, ಜನ ಸಾಮಾನ್ಯನೇ ಇರಲಿ ನ್ಯಾಯ ಎಲ್ಲರಿಗೂ ಒಂದೇ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ತಪ್ಪಿದಸ್ತರಿಗೆ ಖಂಡಿತವಾಗಿಯೂ ಶಿಕ್ಷೆಯಾಗಲಿ .
ದೇಶವಾಸಿಗಳಗಂತು ಇದರಲ್ಲಿ ನೋವಿಗಿಂತ ಷಡ್ಯಂತ್ರದ ವಾಸನೆಯೇ ಹೊಡೆಯುತ್ತದೆ.
ಕಡೆಗೆ ಉಳಿಯುವ ಪ್ರಶ್ನೆ ಎಂದರೆ ಇವರು ಕಲಿತ ವಿದ್ಯೆ ತೊಗೊಂಡು ಏನು ಮಾಡುವುದು?