ಬೆಂಗಳೂರು: ಬಾಲಿವುಡ್ ನಲ್ಲಿ ನಟಿ ಉರ್ಫಿ ಜಾವೇದ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಚಿತ್ರವಿಚಿತ್ರ ಬಟ್ಟೆಗಳಿಂದಲೇ ಫೇಮಸ್ ಆಗಿರುವವರು.
ತುಂಬಾ ಎಕ್ಸ್ ಪೋಸ್ ಆಗಿ ಬಟ್ಟೆ ಧರಿಸುವವರನ್ನು ಕಂಡಾಗ ನೆಟ್ಟಿಗರಿಗೆ ಉರ್ಫಿ ನೆನಪಾಗೋದು ಮಾತ್ರ ಸತ್ಯ. ಹೀಗೆ ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಸುಂದರಿ ಸಾನ್ಯ ಅಯ್ಯರ್ ಇತ್ತೀಚಿಗೆ ಸಖತ್ ಹಾಟ್ ಡ್ರೆಸ್ ಗಳನ್ನು ಧರಿಸಿ ಫೋಟೋ ಶೂಟ್ ಮಾಡಿಸ್ತಿದ್ದಾರೆ. ಇವರ ಡ್ರೆಸ್ ಗಳು, ಕ್ಲಾಸ್ ಲುಕ್ ಕಂಡು ನೆಟ್ಟಿಗರು ಸಾನ್ಯ ಉರ್ಫಿ ಯಿಂದ ಇನ್ ಫ್ಲುಯೆನ್ಸ್ ಆಗಿರುವ ಹಾಗೆ ಕಾಣುತ್ತೆ ಅಂತಿದ್ದಾರೆ.
ಬಿಗ್ ಬಾಸ್ ನಿಂದ ಹೊರಗೆ ಬಂದ ನಂತರ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಫೋಟೋ ಶೂಟ್ ಮಾಡಿಸಿ ಸಾನ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.