ಸಮರ್ ವೆಕೇಶನ್ ನಲ್ಲಿ ಮಕ್ಕಳಿಗೆ ಸ್ಕೂಲ್ ರಜೆ ಇರುವುದರಿಂದ ಮತ್ತು ಕೆಲಸದ ಒತ್ತಡದಿಂದ ಸ್ವಲ್ಪವಾದರು ರಿಲಾಕ್ಸ್ ಆಗಿ ಇರೋಣ ಎಂದು ಫ್ಯಾಮಿಲಿ ಜೊತೆ ಖುಷಿಯಾಗಿ ಸಮಯ ಕಳೆಯೋಣ ಅಂತ ಊರೆಲ್ಲ ಸುತ್ತುವವರ ಸಂಖ್ಯೆ ನಮ್ಮಲ್ಲಿ ಹೆಚ್ಚು. ಸಾಮಾನ್ಯವಾಗಿ ಕರ್ನಾಟಕದ ವಿವಿಧ ಭಾಗಗಳಿಗೆ ಸುತ್ತಾಡಿದ ಇನ್ನು ಹೊಸ ಸ್ಥಳವನ್ನು ನೋಡಬೇಕು ಎಂದು ಬಯಸುವವರಿಗೆ ಹೊನ್ನಾವರದ ಕಾಂಡ್ಲವನ ಉತ್ತಮ ಆಯ್ಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನವರದಲ್ಲಿ ಶರಾವತಿ ನದಿಯ ತೀರದಲ್ಲಿ ಸೊಂಪಾಗಿ ಹಚ್ಚಹಸಿರಿನಿಂದ ಕೂಡಿರುವ ಕಾಂಡ್ಲವನ ಎಲ್ಲರನ್ನು ಆಕರ್ಷಿಸುತ್ತದೆ. ಕಣ್ಣಿಗೆ ತಂಪೆರೆಯುವ ಹಸಿರು, ಸುತ್ತಲೂ ನೀರು, ದ್ವೀಪದಂತಿರುವ ಈ ಸ್ಥಳದಲ್ಲಿ ಸೌಂದರ್ಯವನ್ನು ಹತ್ತಿರದಿಂದ ಸವಿಯಲು ವಾಕ್ ವೇಯನ್ನು ನಿರ್ಮಿಸಲಾಗಿದೆ.
ಕಾಂಡ್ಲವನವು ಹಸಿರಿನ ಕೂಡಿರುವ ಈ ವನ ಮಾಲಿನ್ಯವನ್ನು ತಡೆಗಟ್ಟುತ್ತದೆ. ಮರದ ಹಲಗೆಗಳನ್ನು ಅಚ್ಚು ಕಟ್ಟಾದ ಜೋಡಿಸಿದ ಮರದ ಹಲಗೆಯ ಮೇಲಿನ ನಡಿಗೆಯು ಶರಾವತಿ ನದಿಯ ಮಧ್ಯ ಭಾಗಕ್ಕೆ ಕರೆದೊಯ್ಯುತ್ತದೆ ವಾಕ್ ವೇಯಲ್ಲಿ ನಡೆದಾಡುವಾಗ ಸಿಗುವ ಆನಂದ ಮನಸ್ಸು ಹೃದಯವನ್ನು ಪ್ರಫುಲ್ಲಗೊಳ್ಳಿಸುತ್ತದೆ. ಪ್ರಕೃತಿ ಸೌಂದರ್ಯವನ್ನು ಸವಿಯಲು ಇದು ಒಂದು ಉತ್ತಮ ಮಾರ್ಗವೆನಿಸುತ್ತದೆ.
ಶರಾವತಿ ಕಾಂಡ್ಲಾ ವನವು ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಸುಮಾರು ಒಂದೂವರೆ ಕಿಲೋಮೀಟರ್ ದೂರ ನಡೆದ ನಂತರ ಕಾಂಡ್ಲವನದ ಪ್ರಮುಖ ಆಕರ್ಷಣೆಯತ್ತ ತಲುಪಬಹುದು. ಕಂಡ್ಲಾವನದ ಮಧ್ಯ ಭಾಗದಲ್ಲಿ ದ್ವೀಪದಂತಹ ಸ್ಥಳದಲ್ಲಿ ಅಡ್ಡಲಾಗಿ ನಿರ್ಮಿಸಲಾದ ಕಿರಿದಾದ ಮರದ ವಾಕ್ ವೇಯಲ್ಲಿ ನಡೆಯುವುದು ಅದ್ಭುತ ಅನುಭವನೀಡುತ್ತದೆ.ಇಲ್ಲಿ ಮೂರು ವಿಭಿನ್ನ ಸೇತುವೆಗಳನ್ನು ಕಾಣಬಹುದಾಗಿದೆ. ಫ್ರೆಂಡ್ಸ್, ಫ್ಯಾಮಿಲಿ ಹಾಗೂ ಆಫೀಸ್ ಕೊಲಿಗ್ಸ್ ಜೊತೆ ಸುತ್ತಾಡಲು ಉತ್ತಮ ಸ್ಥಳ ಇದಾಗಿದೆ.