ಇಂದು ಎಲ್ಲರ ಬಳಿ ಎಟಿಎಂ ಕಾರ್ಡ್ ಇದೆ. ಆದರೆ, ಎಟಿಎಂ ಕಾರ್ಡ್ ಕಳೆದು ಹೋದರೆ ಒಂದು ಕ್ಷಣ ಎಲ್ಲರು ಚಿಂತೆಗೀಡಾಗುತ್ತಾರೆ. ಯಾರಾದರೂ ದುರ್ಬಳಕೆ ಮಾಡಿಬಿಟ್ಟರೆ ಎಂಬ ಭಯ ಕಾಡಲು ಪ್ರಾರಂಭವಾಗುತ್ತದೆ. ಒಂದು ವೇಳೆ ಎಟಿಎಂ ಕಾರ್ಡ್ ಕಳೆದು ಹೋದರೆ ದುರ್ಬಳಕೆಯಾಗದಂತೆ ಕ್ಷಣ ಅದನ್ನು ಬ್ಲಾಕ್ ಮಾಡಿಸಬಹುದು. ಇಲ್ಲವೆ ನಿಷ್ಕ್ರಿಯಗೊಳಿಸುವುದು ಉತ್ತಮ. ಎಟಿಎಂ ಕಾರ್ಡ್ ಬ್ಲಾಕ್ ಮಾಡಬೇಕಾದ ಪರಿಸ್ಥಿತಿ ಬಂದಾಗ ಏನು ಮಾಡಬೇಕು ಎಂಬ ಮಾಹಿತಿಯನ್ನು ಎಟಿಎಂ ಬಳಸುವ ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕು. ಹಾಗಾದ್ರೆ ಎಟಿಎಂ ಕಾರ್ಡ್ ಬ್ಲಾಕ್ ಮಾಡಲು ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ.
ಕಸ್ಟಮರ್ ಕೇರ್ :
ಎಟಿಎಂ ಕಾರ್ಡ್ ಹಿಂಬದಿಯಲ್ಲಿ ಟೋಲ್ ಫ್ರೀ ಸಂಖ್ಯೆ ಪ್ರಿಂಟ್ ಆಗಿರುತ್ತದೆ. ಈ ಸಂಖ್ಯೆಯನ್ನು ಮೊಬೈಲ್ ಫೋನ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳೋದು ಒಳ್ಳೆಯದು. ಯಾವಾಗ ನಿಮಗೆ ಎಟಿಎಂ ಕಾರ್ಡ್ ಬ್ಲಾಕ್ ಮಾಡಬೇಕೋ ಆಗ ಈ ಸಂಖ್ಯೆಗೆ ಕರೆ ಮಾಡಿ ಎಟಿಎಂ ಕಾರ್ಡ್ ಬ್ಲಾಕ್ ಮಾಡಬಹುದು.
ಬ್ಯಾಂಕ್ ಭೇಟಿ ನೀಡಿ:
ನಿಮ್ಮ ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಖಾತೆ ಸಂಖ್ಯೆಯೊಂದಿಗೆ ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಬ್ಯಾಂಕ್ ಅಧಿಕಾರಿಗಳ ಬಳಿ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಲು ಮನವಿ ಸಲ್ಲಿಸಿ.
ಆನ್ ಲೈನ್ ನಲ್ಲಿ ಬ್ಲಾಕ್ ಮಾಡಿ:
ಬ್ಯಾಂಕ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಆ ಬಳಿಕ ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಆಗಿ. ಅದರಲ್ಲಿ ಬ್ಲಾಕ್ ಮಾಡುವ ವಿಭಾಗ ಎಲ್ಲಿದೆ ನೋಡಿ. ಆ ಬಳಿಕ ಬ್ಯಾಂಕ್ ಸೂಚಿಸಿದ ಹಂತಗಳನ್ನು ಅನುಸರಿಸಿ.
ಮೊಬೈಲ್ ಬ್ಯಾಂಕಿಂಗ್ :
ಬ್ಯಾಂಕ್ ಗಳು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಗಳ ಮೂಲಕ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಗಳನ್ನು ಬ್ಲಾಕ್ ಮಾಡಬಹುದು.