ಬೇಸಿಗೆಯಲ್ಲಿ ಧೂಳುಗಳು ಮುಖಕ್ಕೆ ಹಾನಿಕಾರಕವನ್ನುಂಟು ಮಾಡುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಬೆವರುವುದರಿಂದ ಮೊಡವೆ ಸಮಸ್ಯೆ ಹೆಚ್ಚುತ್ತವೆ. ಸೂರ್ಯನ ಹಾನಿಕಾರಕ ಕಿರಣಗಳ ಪರಿಣಾಮವು ಚರ್ಮಕ್ಕೆ ಹಾನಿ ಮಾಡುತ್ತವೆ. ಸರಿಯಾದ ಕಾಳಜಿಯಿಂದ ತ್ವಚೆಯ ಆರೋಗ್ಯ ಕಾಪಾಡಬಹುದಾಗಿದೆ.
ಮಹಿಳೆಯರು ಇದಕ್ಕಾಗಿ ವಿವಿಧ ಮನೆಮದ್ದು ಮಾಡಿ ಕೊಳ್ಳುತ್ತಾ ಇರುತ್ತಾರೆ. ಬೇಸಿಗೆ ಸಮಯದಲ್ಲಿ ಐಸ್ ವಾಟರ್ ಫೇಶಿಯಲ್ ಮಾಡಿಕೊಳ್ಳಬಹುದು. ಮೊದಲು ಐಸ್ ಫೇಶಿಯಲ್ ನಿಮ್ಮ ಚರ್ಮಕ್ಕೆ ಹೇಗೆ ಪ್ರಯೋಜನ ನೀಡುತ್ತದೆ ಎಂದು ತಿಳಿದುಕೊಳ್ಳಬೇಕು.
ಕಣ್ಣುಗಳ ಕೆಳಗೆ ಪಫಿನೆಸ್ ಮತ್ತು ಕಪ್ಪು ವಲಯ ನಿವಾರಣೆಗೆ ಸಹಕಾರಿ. ನಿದ್ರೆಯ ಕೊರತೆಯಿಂದ ಕಣ್ಣುಗಳು ಊದಿಕೊಳ್ಳುತ್ತವೆ. ಇದಕ್ಕಾಗಿ ಸರಿಯಾದ ನಿದ್ರೆ ಮಾಡುವುದರ ಜೊತೆಗೆ ಐಸ್ ಫೇಶಿಯಲ್ ಮಾಡಿಕೊಂಡರೆ ಉತ್ತಮ. ಹತ್ತಿ ಬಟ್ಟೆಯಲ್ಲಿ ಐಸ್ ತುಂಡು ಸುತ್ತಿ ಕಣ್ಣುಗಳ ಕೆಳಗೆ ಹಚ್ಚಿರಿ. ತ್ವಚೆಯ ಆರೈಕೆ ಉತ್ಪನ್ನಗಳಾದ ಸೀರಮ್, ಫೇಸ್ ಪ್ಯಾಕ್ ಇತ್ಯಾದಿ ತ್ವಚೆಯ ಮೇಲೆ ಹಚ್ಚಿಕೊಳ್ಳಬೇಕು. ಅದಕ್ಕೂ ಮೊದಲು ಐಸ್ ಫೇಶಿಯಲ್ ಮಾಡಿ. ಚರ್ಮದ ಒಳ ಪದರಗಳಲ್ಲಿ ಇದು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಸನ್ ಟ್ಯಾನಿಂಗ್ ನಿವಾರಣೆಗೆ ಸಹಕಾರಿಯಾಗುತ್ತದೆ.
ಐಸ್ ಫೇಶಿಯಲ್ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಸನ್ ಬರ್ನ್, ಟ್ಯಾನಿಂಗ್, ರಕ್ತ ಪರಿಚಲನೆ ಹೆಚ್ಚಿಸಿ, ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ. ಮೊಡವೆ ಸಮಸ್ಯೆ ನಿವಾರಣೆಗೆ ಸಹಕಾರಿ. ಉರಿಯೂತದ ಗುಣಲಕ್ಷಣ ಕಡಿಮೆ ಆಗುತ್ತದೆ. ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡುತ್ತದೆ. ಹಾಲನ್ನು ಘನೀಕರಿಸಿ, ಐಸ್ ಕ್ಯೂಬ್ ಮಾಡಿ. ಇದನ್ನು ಚರ್ಮದ ಮೇಲೆ ಉಜ್ಜಿರಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ.
ಅಕ್ಕಿಯನ್ನು ನೀರಿನಲ್ಲಿ ನೆನೆಸಿ, ಅದರ ನೀರನ್ನು ಘನೀಕರಿಸಿ, ನಂತರ ತ್ವಚೆಗೆ ಹಚ್ಚಿರಿ. ಸೌತೆಕಾಯಿ, ನಿಂಬೆ ರಸ ಮತ್ತು ಜೇನುತುಪ್ಪ ನೀರಿನಲ್ಲಿ ಮಿಶ್ರಣ ಮಾಡಿ. ನೀರನ್ನು ಐಸ್ ಟ್ರೇಗೆ ಹಾಕಿ ಫ್ರೀಜ್ ಮಾಡಿ. ಇದನ್ನು ತ್ವಚೆಗೆ ಹಚ್ಚಿರಿ. ಅಲೋವೆರಾ ಮತ್ತು ತುಳಸಿ ಎಲೆಗಳನ್ನು ಪುಡಿಮಾಡಿ ನೀರಿನಲ್ಲಿ ಬೆರೆಸಿ ಐಸ್ ಕ್ಯೂಬ್ ತಯಾರಿಸಿ, ಅದನ್ನು ತ್ವಚೆಗೆ ಹಚ್ಚಿರಿ. ಈ ರೀತಿ ಎಲ್ಲಾ ಮಾಡುವುದರಿಂದ ನಮ್ಮ ಮುಖದ ಕಾಂತಿಯು ಹೆಚ್ಚುತ್ತದೆ ಮತ್ತು ಬೇಸಿಗೆ ಸೆಕೆಗೆ ತಂಪು ನೀಡುತ್ತದೆ.