ವಾಟ್ಸ್ ಆಪ್ ಗಳಲ್ಲಿ ಮಾಡುವ ಚಾಟ್ ಅನ್ನು ನೀವು ಬೇರೆಯವರಿಗೆ ಶೇರ್ ಮಾಡಬಹುದು ಅಂತ ಬಹಳಷ್ಟು ಜನರಿಗೆ ತಿಳಿದೇ ಇರುವುದಿಲ್ಲ. ಹಾಗಿದ್ದರೆ ನೋಡಿ.. ಬಹು ಮುಖ್ಯ ಚಾಟ್ ಗಳನ್ನು ನೀವು ಶೇರ್ ಮಾಡೋದು ಹೇಗೆ ಅಂತ ತಿಳಿಯಿರಿ..
ಆಂಡ್ರಾಯ್ಡ್ ಫೋನ್:
• ಮೊದಲಿಗೆ ನೀವು ಶೇರ್ ಮಾಡಬೇಕಿರುವ ಚಾಟ್ ಓಪನ್ ಮಾಡಿ.
• ಚಾಟ್ ಸ್ಕ್ರೀನ್ ನ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡಿ.
• ಬಳಿಕ More ಆಪ್ಷನ್ ಆಯ್ಕೆ ಮಾಡಿಕೊಂಡು Export chat ಆಯ್ಕೆ ಮಾಡಿ.
• ಕೊನೆಯಲ್ಲಿ ನೀವು ಯಾರಿಗೆ, ಯಾವ ಆಪ್ ಮೂಲಕ ಕಳುಹಿಸಬೇಕು ಎಂದು ಆಯ್ಕೆ ಮಾಡಿಕೊಂಡು ಅವರಿಗೆ ಶೇರ್ ಮಾಡಿದರೆ ಆಯ್ತು.
ಐಫೋನ್:
• ಮೊದಲಿಗೆ ನೀವು ಶೇರ್ ಮಾಡಬೇಕಿರುವ ಚಾಟ್ ಓಪನ್ ಮಾಡಿ.
• ನಂತರ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ contact info ತೆರೆದುಕೊಳ್ಳಿ.
• ಕೆಳಗೆ Export chat ಆಯ್ಕೆ ಮಾಡಿಕೊಳ್ಳಿ.
• ಕೊನೆಯಲ್ಲಿ ನೀವು ಯಾರಿಗೆ, ಯಾವ ಆಪ್ ಮೂಲಕ ಕಳುಹಿಸಬೇಕು ಎಂದು ಆಯ್ಕೆ ಮಾಡಿಕೊಂಡು ಅವರಿಗೆ ಶೇರ್ ಮಾಡಿದರೆ ಆಯ್ತು.