ಬೆಂಗಳೂರು : ಬಹುಭಾಷೆಯಲ್ಲಿ ಆಟದ ಆಯ್ಕೆಗಳನ್ನು ನೀಡುವ ಭಾರತದ ಮೊದಲ ಹಾಗೂ ಪ್ರಮುಖ ಕೌಶಲ್ಯ- ಆಧರಿತ ರಮ್ಮಿ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿರುವ ರಮ್ಮಿಟೈಮ್, ಭಾರತದ ಪ್ರಮುಖ ತೆರಿಗೆ ಮತ್ತು ಹಣಕಾಸು ಪ್ಲಾಟ್ಫಾರ್ಮ್ ಆಗಿರುವ ಕ್ಲಿಯರ್ಟ್ಯಾಕ್ಸ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಈ ಸಹಯೋಗವು ಎಲ್ಲಾ ರಮ್ಮಿ ಆಟಗಾರರು ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಎಲ್ಲಾ ರಮ್ಮಿ ಪ್ಲೇಯರ್ಗಳು ಅವರು ರಮ್ಮಿಟೈಮ್ ನಲ್ಲಿ ಆಡುವವರಾಗಲೀ ಅಥವಾ ಇತರ ರಮ್ಮಿ ಆಪ್ ಗಳನ್ನು ಬಳಸುವವರಾಗಿದ್ದರೂ ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಈ ಆಫರ್ ನ ಪ್ರಯೋಜನಗಳನ್ನು ಪಡೆಯಬಹುದು. ಈ ಪಾಲುದಾರಿಕೆಯ ಭಾಗವಾಗಿ ರಮ್ಮಿಟೈಮ್ ನಲ್ಲಿ ಹೆಸರು ನೋಂದಾಯಿಸಲ್ಪಟ್ಟ ಎಲ್ಲಾ ರಮ್ಮಿ ಆಟಗಾರರು ತಮ್ಮ ತೆರಿಗೆಗಳನ್ನು ಒಂದೋ ಸೆಲ್ಫ್ (ಸ್ವಯಂ) ಅಥವಾ ಕ್ಲಿಯರ್ಟ್ಯಾಕ್ಸ್ ಮೂಲಕ ಸಿಎ ಮಾರ್ಗದರ್ಶನದಲ್ಲಿ ಫೈಲ್ ಮಾಡಬಹುದು. ಅವರು ಕ್ಲಿಯರ್ಟ್ಯಾಕ್ಸ್ ಗೆ ಪಾವತಿಸಿದ ಮೊತ್ತವನ್ನು ರಮ್ಮಿಟೈಮ್ ಆಪ್ ನಲ್ಲಿ ತಾವು ಖಾತೆಯ ಗೇಮ್ ವ್ಯಾಲೆಟ್ನಲ್ಲಿ ಇರುವ ‘ಡಿಸ್ಕೌಂಟ್ ಕ್ರೆಡಿಟ್ಸ್’ ರೂಪದಲ್ಲಿ ಪಡೆಯುತ್ತಾರೆ. ಜೊತೆಗೆ ಕ್ಲಿಯರ್ಟ್ಯಾಕ್ಸ್ ನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸಿಎ ಸಹಾಯವನ್ನು ಬಳಸುವ ಆಯ್ಕೆಯನ್ನು ಸಹ ಒದಗಿಸಲಾಗುತ್ತದೆ. ಈ ಸಹಯೋಗದ ಮೂಲಕ ರಮ್ಮಿಟೈಮ್ ಆದಾಯ ತೆರಿಗೆ ಫೈಲ್ ಮಾಡುವ ಜನರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸರ್ಕಾರದ ಪ್ರಯತ್ನಗಳಿಗೆ ನೆರವು ನೀಡುತ್ತಿದೆ ಮತ್ತು ಎಲ್ಲರನ್ನೂ ಆರ್ಥಿಕತೆಯಲ್ಲಿ ಒಳಗೊಳ್ಳುವಂತೆ ಮಾಡುವ ರಾಷ್ಟ್ರದ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಲಿದೆ.
ಈ ಕುರಿತು ಮಾತನಾಡಿದು ರಮ್ಮಿ ಟೈಮ್ ನ ನಿರ್ದೇಶಕಿ ದಿವ್ಯಾ ಅಲೋಕ್ ಅಗರ್ವಾಲ್, “ದೇಶದ ಪ್ರಮುಖ ರಮ್ಮಿ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿರುವ ರಮ್ಮಿಟೈಮ್ ತಮ್ಮ ಆಟಗಾರರರ ಮೇಲೆ ಮಾತ್ರವಲ್ಲದೆ ರಮ್ಮಿ ಆಡುವ ಇಡೀ ಸಮುದಾಯದ ಮೇಲೆ ಗಮನ ಹರಿಸುತ್ತಿದೆ. ಎಲ್ಲಾ ರಮ್ಮಿ ಆಟಗಾರರು ಸುಲಭವಾಗಿ ಐಟಿಆರ್ ಫೈಲಿಂಗ್ ಅನ್ನು ಮಾಡುವಂತೆ ಮಾಡುವ ಸಲುವಾಗಿ ಕ್ಲಿಯರ್ಟ್ಯಾಕ್ಸ್ ಜೊತೆಗೆ ಪಾಲುದಾರಿಕೆ ಹೊಂದಲು ನಾವು ಸಂತೋಷ ಗೊಂಡಿದ್ದೇವೆ. ಈ ಸಹಯೋಗವು ತೆರಿಗೆ ಸಲ್ಲಿಸುವಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ನಮ್ಮ ರಮ್ಮಿ ಸಮುದಾಯವು ಯಾವುದೇ ತೊಂದರೆಯಿಲ್ಲದೆ ತೆರಿಗೆ ನಿಯಮಗಳನ್ನು ಪಾಲಿಸುತ್ತಿದೆ ಎಂಬುದನ್ನು ತೋರಿಸಿಕೊಡುತ್ತದೆ. ಜೊತೆಗೆ ನಾವು ಒದಗಿಸುವ ಕ್ರೆಡಿಟ್ ಪಾಯಿಂಟ್ ಕೊಡುಗೆಗಳ ಮೂಲಕ ಈ ಪ್ರಕ್ರಿಯೆಯನ್ನು ಲಾಭದಾಯಕವನ್ನಾಗಿಯೂ ಮಾಡುತ್ತದೆ. ರಮ್ಮಿಟೈಮ್ ನಲ್ಲಿ ನಮ್ಮ ಬಳಕೆದಾರರ ಒಟ್ಟಾರೆ ಅನುಭವವನ್ನು ಹೆಚ್ಚಿಸಲು ಮತ್ತು ಅವರ ಗೇಮಿಂಗ್ ಅನುಭವವನ್ನು ಆಹ್ಲಾದಕರಗೊಳಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಇತರ ಆಪ್ ಗಳಲ್ಲಿ ರಮ್ಮಿ ಆಟ ಆಡುವ ಆಟಗಾರರು ಈ ಐಟಿಆರ್ ಫೈಲಿಂಗ್ ಸೇವೆಯನ್ನು ಪಡೆಯಲು ರಮ್ಮಿಟೈಮ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಈ ಮೂಲಕ ಅವರು ಕ್ಲಿಯರ್ಟ್ಯಾಕ್ಸ್ ನೀಡುವ ಸುವ್ಯವಸ್ಥಿತ ತೆರಿಗೆ ಫೈಲಿಂಗ್ ಪ್ರಕ್ರಿಯೆ ಪ್ರಯೋಜನವನ್ನು ಪಡೆಯಬಹುದು.
ಈ ಕುರಿತು ಕ್ಲಿಯರ್ಟ್ಯಾಕ್ಸ್ ನ ಗ್ರಾಹಕ ವ್ಯವಹಾರ ಮುಖ್ಯಸ್ಥ ಅವಿನಾಶ್ ಪೋಲೆಪಲ್ಲಿ ಮಾತನಾಡಿ, “ಯಾವಾಗಲೂ ಭಾರತೀಯರಿಗೆ ಆರ್ಥಿಕ ಜೀವನವನ್ನು ಸರಳಗೊಳಿಸುವುದು ಕ್ಲಿಯರ್ಟ್ಯಾಕ್ಸ್ ನ ನಮ್ಮ ಧ್ಯೇಯವಾಗಿದೆ. ರಮ್ಮಿಟೈಮ್ ಜೊತೆಗೆ ಪಾಲುದಾರಿಕೆ ಮಾಡುವ ಮೂಲಕ, ನಾವು ನಮ್ಮ ಪರಿಣತಿಯನ್ನು ವಿಶಾಲವಾದ ಗ್ರಾಹಕ ಸಮೂಹಕ್ಕೆ ವಿಸ್ತರಿಸುತ್ತಿದ್ದೇವೆ. ಈ ಮೂಲಕ ರಮ್ಮಿ ಆಟಗಾರರು ಸುಲಭವಾಗಿ ಮತ್ತು ವಿಶ್ವಾಸದಿಂದ ತೆರಿಗೆ ಸಲ್ಲಿಸುವಿಕೆಯ ಪ್ರಕ್ರಿಯೆ ಮಾಡಬಹುದಾಗಿದೆ” ಎಂದು ಹೇಳಿದರು.
ಯಾರು ತಜ್ಞರ ಸಹಾಯವನ್ನು ಅಪೇಕ್ಷಿಸುತ್ತಾರೋ ಅವರಿಗೆ ಕ್ಲಿಯರ್ಟ್ಯಾಕ್ಸ್ ಸಿಎ ಮಾರ್ಗದರ್ಶನ ಇರುವ ಫೈಲಿಂಗ್ ಸೇವೆಗಳನ್ನು ಒದಗಿಸುತ್ತದೆ. ಪರಿಣಿತರ ಸೇವೆಗಳು ಬಹು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದು, ಭಾರತದಾದ್ಯಂತ ಇರುವ ರಮ್ಮಿ ಆಟಗಾರರು ತಮ್ಮ ತೆರಿಗೆ ಜವಾಬ್ದಾರಿಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ನಿರ್ವಹಿಸಬಹುದು.
ತಂತ್ರಜ್ಞಾನ ಮತ್ತು ಗ್ರಾಹಕ- ಕೇಂದ್ರಿತ ಸೇವೆಗಳನ್ನು ವಿಲೀನಗೊಳಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆಯು ಮಹತ್ವದ ಹೆಜ್ಜೆಯಾಗಿದೆ. ರಮ್ಮಿ ಆಟಗಾರರ ಸಮುದಾಯವು ತಮ್ಮ ತೆರಿಗೆ ಜವಾಬ್ದಾರಿಗಳಿಗೆ ಅನುಸಾರವಾಗಿ ತಮ್ಮ ಆಟಗಳನ್ನು ಆಡುವತ್ತ ಗಮನಹರಿಸಬಹುದು ಎಂಬುದನ್ನು ಈ ಸಹಯೋಗವು ತಿಳಿಸಿಕೊಡುತ್ತದೆ.